ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇದರ ಮಾಸಿಕ ಕೂಟವು ದಿನಾಂಕ 20 ಮೇ 2025ರಂದು ಬನ್ನೂರು ಸಮೀಪದ ಭಾರತೀ ನಗರದ ಶ್ರೀ ವಿದ್ಯಾಗಣಪತಿ ದೇವಸ್ಥಾನದ ಆಶ್ರಯ ಹಾಗೂ ಪ್ರೋತ್ಸಾಹದೊಂದಿಗೆ ‘ಕಚ ದೇವಯಾನಿ’ ತಾಳಮದ್ದಳೆ ನಡೆಯಿತು.
ಹಿಮ್ಮೇಳದಲ್ಲಿ ಯಲ್.ಯನ್. ಭಟ್, ಪದ್ಯಾಣ ಶಂಕರನಾರಾಯಣ ಭಟ್, ಪರೀಕ್ಷಿತ್ ಹಂದ್ರಟ್ಟ, ಶರಣ್ಯ ನೆತ್ತರಕೆರೆ ಸಹಕರಿಸಿದರು. ಮುಮ್ಮೇಳದಲ್ಲಿ ಭಾಸ್ಕರ್ ಬಾರ್ಯ (ಶುಕ್ರಾಚಾರ್ಯ), ಗುಡ್ಡಪ್ಪ ಬಲ್ಯ (ಕಚ), ಮಾಂಬಾಡಿ ವೇಣುಗೋಪಾಲ ಭಟ್ (ವೃಷಪರ್ವ), ಶುಭಾ ಅಡಿಗ (ದೇವಯಾನಿ), ದುಗ್ಗಪ್ಪ ಯನ್. (ಧೂಮಕೇತ) ಸಹಕರಿಸಿದರು. ದೇವಳದ ಮೆನೇಜರ್ ಸುಬ್ರಹ್ಮಣ್ಯ ಭಟ್ ಸ್ವಾಗತಿಸಿ, ವಂದಿಸಿದರು. ಬನ್ನೂರು ರಾಜ ಗೋಪಾಲ್ ಭಟ್ ಕಾರ್ಯಕ್ರಮ ಪ್ರಾಯೋಜಿಸಿದ್ದರು.