ಬೆಂಗಳೂರು : ನಾಟಕ ಬೆಂಗಳೂರು 25 ರಂಗಭೂಮಿ ಸಂಭ್ರಮದ ಪ್ರಯುಕ್ತ ವಿಜಯನಗರ ಬಿಂಬ (ರಿ.) ಪ್ರಸ್ತುತ ಪಡಿಸುವ ಬರ್ಟೋಲ್ಟ್ ಬ್ರೆಕ್ಟ್ ಇವರು ರಚಿಸಿರುವ ಡಾ. ಎಸ್.ವಿ. ಕಶ್ಯಪ್ ಇವರ ನಿರ್ದೇಶನದಲ್ಲಿ ‘ಮದರ್ ಕರೇಜ್’ ನಾಟಕ ಪ್ರದರ್ಶನವನ್ನು ದಿನಾಂಕ 21 ಜನವರಿ 2025ರಂದು ಸಂಜೆ 7-00 ಗಂಟೆಗೆ ಬೆಂಗಳೂರಿನ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ನಾಟಕವನ್ನು ಲಿಂಗದೇವರು ಹಳೆಮನೆ ಇವರು ಕನ್ನಡಕ್ಕೆ ಅನುವಾದಿಸಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಪ್ರಸ್ತುತಗೊಳ್ಳಲಿದೆ.