ಮಂಗಳೂರು : ಜರ್ನಿ ಥೇಟರ್ ಗ್ರೂಪ್ (ರಿ.) ಮಂಗಳೂರು ಮತ್ತು ರಂಗ ಅಧ್ಯಯನ ಕೇಂದ್ರ ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾನಿಲಯ) ಸಹಯೋಗದಲ್ಲಿ ರಂಗಾಯಣ ಮೈಸೂರು ಇದರ ಹಿರಿಯ ಕಲಾವಿದರು ಅಭಿನಯಿಸುವ ‘ಮಿ. ಬೋಗೀಸ್’ ನಾಟಕ ಪ್ರದರ್ಶನವನ್ನು ದಿನಾಂಕ 15 ಏಪ್ರಿಲ್ 2025ರಂದು ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿ.ವಿ.ಯಲ್ಲಿ ಹಮ್ಮಿಕೊಳ್ಳಲಾಗಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಪ್ರಸ್ತುತಗೊಳ್ಳುವ ಈ ನಾಟಕಕ್ಕೆ ಉಚಿತ ಪ್ರವೇಶವಿದ್ದು, ರೋಆಲ್ಡ್ ದಾಹ್ಲ್ ಇವರು ಈ ನಾಟಕದ ಕಥೆ ರಚನೆ ಮಾಡಿದ್ದು, ಸಂತೋಷ್ ಕೌಲಗಿ ಕನ್ನಡಕ್ಕೆ ಅನುವಾದ ಮಾಡಿದ್ದು, ಪ್ರಶಾಂತ್ ಹಿರೇಮಠ ಸಂಗೀತ ಹಾಗೂ ಎಚ್.ಕೆ. ದ್ವಾರಕನಾಥ್ ಇವರು ರಂಗರೂಪ ವಿನ್ಯಾಸ ಮತ್ತು ನಿರ್ದೇಶನ ಮಾಡಿರುತ್ತಾರೆ.