ಪುತ್ತೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ಸಹಕಾರದೊಂದಿಗೆ ಸುಲೋಚನಾ ಪಿ.ಕೆ. ಇವರ ‘ಮೂಗಿಯ ಮನದೊಳು’ ಕನ್ನಡ ಕಾದಂಬರಿ ಲೋಕಾರ್ಪಣಾ ಸಮಾರಂಭವನ್ನು ದಿನಾಂಕ 28 ಡಿಸೆಂಬರ್ 2025ರಂದು ಬೆಳಿಗ್ಗೆ 10-30 ಗಂಟೆಗೆ ಪುತ್ತೂರು ದರ್ಬೆಯ ಮಕ್ಕಳ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಸಮಾರಂಭದ ಅಧ್ಯಕ್ಷತೆಯನ್ನು ವಿಶ್ರಾಂತ ಮುಖ್ಯಸ್ಥರಾದ ಡಾ. ತಾಳ್ತಜೆ ವಸಂತಕುಮಾರ ಇವರು ವಹಿಸಲಿದ್ದು, ಕಾದಂಬರಿ ಲೋಕಾರ್ಪಣೆ ಮಾಡಲಿದ್ದಾರೆ.


