ಮಂಗಳೂರು : ಮಂಗಳೂರಿನ ಉರ್ವದಲ್ಲಿರುವ ನಾಟ್ಯಾರಾಧನಾ ಕಲಾ ಕೇಂದ್ರ ಇದರ ‘ತ್ರಿಂಶೋತ್ಸವ’ದ ಅಂಗವಾಗಿ ನಡೆಯುವ ಸರಣಿ ನೃತ್ಯ ಕಾರ್ಯಕ್ರಮ “ನೃತ್ಯಾಮೃತ -6” ಅಂಗವಾಗಿ ನಾಟ್ಯಾರಾಧನಾ ಕಲಾ ಕೇಂದ್ರದ ಕಿರಿಯ ವಿದ್ಯಾರ್ಥಿಗಳಿಂದ “ಮುಕುಲ ಮಂಜರಿ” ವೈವಿಧ್ಯಮಯ ನೃತ್ಯ ಕಾರ್ಯಕ್ರಮವು ದಿನಾಂಕ 17-07-2024ರ ಬುಧವಾರದಂದು ಸಂಜೆ 4.45 ರಿಂದ ಮಂಗಳೂರಿನ ಕುದ್ಮುಲ್ ರಂಗರಾವ್ ಭವನ( ಪುರಭವನ)ದಲ್ಲಿ ನಡೆಯಲಿದೆ.
ತ್ರಿಂಶೋತ್ಸವದ ಸಹ ಸಮಿತಿಗಳ ಸಹಕಾರದೊಂದಿಗೆ ನಡೆಯುವ ಈ ಕಾರ್ಯಕ್ರಮವನ್ನು ಕಲ್ಬಾವಿ ಕ್ಯಾಶೂಸ್ ಇದರ ಮಾಲಿಕರಾದ ಶ್ರೀ ಪ್ರಕಾಶ್ ರಾವ್ ಕಲ್ಬಾವಿ ಉದ್ಘಾಟಿಸಲಿದ್ದು, ಧರ್ಮದರ್ಶಿ ಶ್ರೀ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಲಿದ್ದಾರೆ.
ಅಖಿಲ ಭಾರತ ಬ್ರಾಹ್ಮಣ ಮಹಾ ಸಭಾ (ರಿ.) ಬೆಂಗಳೂರು ಇದರ ರಾಜ್ಯ ಜತೆ ಕಾರ್ಯದರ್ಶಿ ಶ್ರೀಮತಿ ಕಾತ್ಯಾಯಿನೀ ಸೀತಾರಾಂ, ಧರ್ಮಸ್ಥಳ ಮಂಜುನಾಥೇಶ್ವರ ತುಳು ಅಧ್ಯಯನ ಪೀಠ ಮತ್ತು ತುಳು ಅಧ್ಯಯನ ಸ್ನಾತಕೋತ್ತರ ವಿಭಾಗ ಮಂಗಳೂರಿನ ಸಂಯೋಜಕರಾದ ಡಾ. ಮಾಧವ ಎಂ. ಕೆ., ಲಲಿತಕಲಾ ಸದನ ಮಂಗಳೂರಿನ ನಿರ್ದೇಶಕರಾದ ವಿದ್ವಾನ್ ಸುದರ್ಶನ್ ಪ್ರೇಮನಾಥ್, ನೃತ್ಯಸುಧಾ (ರಿ.) ಮಂಗಳೂರಿನ ನಿರ್ದೇಶಕಿ ವಿದುಷಿ ಸೌಮ್ಯ ಸುಧೀಂದ್ರ ರಾವ್, ಎಲ್. ಐ. ಸಿ. ಏಜೆಂಟ್ ಹಾಗೂ ತ್ರಿಂಶೋತ್ಸವ ಸಮಿತಿಯ ಸದಸ್ಯರಾದ ಶ್ರೀಮತಿ ಶೈಲಜ ಜಗತಾಪ್, ನಾಟ್ಯಾರಾಧನಾ ಕಲಾ ಕೇಂದ್ರದ ಹಿರಿಯ ವಿದ್ಯಾರ್ಥಿನಿ ವಿದುಷಿ ಭವ ಅಮೀನ್ ಸಂಕಮಾರ್ ಮುಖ್ಯ ಅಭ್ಯಾಗತರಾಗಿ ಆಗಮಿಸಲಿದ್ದಾರೆ.
ಉದ್ಘಾಟನೆಯ ಬಳಿಕ ವಿದುಷಿ ಸುಮಂಗಲಾ ರತ್ನಾಕರ ರಾವ್ ಮಂಗಳೂರು ಇವರ ನಿರ್ದೇಶನದಲ್ಲಿ ನಡೆಯುವ ನೃತ್ಯ ಕಾರ್ಯಕ್ರಮಕ್ಕೆ ಎಲ್ಲರಿಗೂ ಮುಕ್ತ ಪ್ರವೇಶಾವಕಾಶವನ್ನು ಕಲ್ಪಿಸಲಾಗಿದೆಯೆಂದು ನಾಟ್ಯಾರಾಧನಾ ಕಲಾಕೇಂದ್ರದ ಟ್ರಷ್ಟಿಗಳಾದ ವಿದುಷಿ ಸುಮಂಗಲಾ ರತ್ನಾಕರ್ ರಾವ್, ಶ್ರೀ ರತ್ನಾಕರ ರಾವ್, ತ್ರಿಂಶೋತ್ಸವ ಸಮಿತಿಯ ಅಧ್ಯಕ್ಷರಾದ ಡಾ. ಗಣೇಶ್ ಅಮೀನ್ ಸಂಕಮಾರ್ ಹಾಗೂ ಸಂಘಟನಾ ಕಾರ್ಯದರ್ಶಿಯಾದ ಶ್ರೀ ಶಶಿರಾಜ ರಾವ್ ಕಾವೂರ್ ತಿಳಿಸಿದ್ದಾರೆ.