ಮಂಗಳೂರು : ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ ಮತ್ತು ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಇವರ ಸಹಯೋಗದಲ್ಲಿ ಮಂಗಳೂರು ದಸರಾ ಪ್ರಯುಕ್ತ ‘ಮಂಗಳೂರು ದಸರಾ ಕವಿಗೋಷ್ಠಿ’ಯನ್ನು ದಿನಾಂಕ 23 ಸೆಪ್ಟೆಂಬರ್ 2025ರಂದು ಸಂಜೆ 4-00 ಗಂಟೆಗೆ ಕುದ್ರೋಳಿ ಸಂತೋಷಿ ಕಲಾ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಇವರ ಅಧ್ಯಕ್ಷತೆಯಲ್ಲಿ ‘ಬಹುಭಾಷಾ ಕವಿಗೋಷ್ಠಿ’ ಮತ್ತು ನಿವೃತ್ತ ಕನ್ನಡ ಪ್ರಾಧ್ಯಾಪಕರಾದ ಡಾ. ಕೆ. ಚಿನ್ನಪ್ಪ ಗೌಡ ಇವರ ಅಧ್ಯಕ್ಷತೆಯಲ್ಲಿ ‘ತುಳು ಕವಿಗೋಷ್ಠಿ’ ನಡೆಯಲಿದೆ.