ಮುಂಬೈ : ಕರ್ನಾಟಕ ಸೇವಾ ಸಂಘ ಮೋಹನೆ ಮತ್ತು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿಯ ಸಹಯೋಗದಲ್ಲಿ ದಿನಾಂಕ 18-08-2023ರಂದು ಆರ್.ಎಸ್.ಡೈರಿ ಫಾರ್ಮ್ ಮೋಹನೆ ಬಳಿಯ ದಿ.ರಾಜೀವಿ ಪದ್ಮನಾಭ ಶೆಟ್ಟಿ ಮೆಮೋರಿಯಲ್ ಹಾಲ್ ನಲ್ಲಿ ಅಜೆಕಾರು ಕಲಾಭಿಮಾನಿ ಬಳಗದ ಸಂಚಾಲಕತ್ವದಲ್ಲಿ ತವರೂರ ನಾಮಾಂಕಿತ ಕಲಾವಿದರಿಂದ ‘ಸ್ವಾಮಿ ಕೊರಗಜ್ಜ’ ತುಳು ತಾಳಮದ್ದಳೆಯ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ಸೇವಾ ಸಂಘ (ರಿ.) ಮೋಹನೆ, ಕಲ್ಯಾಣ್ ಇದರ ಅಧ್ಯಕ್ಷರಾದ ಹರೀಶ್ ಶೆಟ್ಟಿ ಶಿಮುಂಜೆ ಪರಾರಿಯವರು ಮಾತನಾಡುತ್ತಾ “ಕರಾವಳಿಯ ಯಕ್ಷಗಾನ ಕಲೆ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಪ್ರಧಾನ ಪಾತ್ರ ವಹಿಸಿದೆ. ವಿಶೇಷವಾಗಿ ತುಳುನಾಡಿನಲ್ಲಿ ನಮ್ಮ ಹಿರಿಯರು ಅದನ್ನು ಪೋಷಿಸಿಕೊಂಡು ಬಂದಿದ್ದಾರೆ. ಮುಂಬೈಯಲ್ಲಿ ನೆಲೆಯೂರಿದ ನಾವೆಲ್ಲ ಇಲ್ಲಿ ಹುಟ್ಟಿ ಬೆಳೆದ ಮಕ್ಕಳಿಗೆ ತುಳು ಸಂಸ್ಕೃತಿ ಮತ್ತು ಯಕ್ಷಗಾನದ ಸೊಗಡನ್ನು ಪರಿಚಯಿಸುವ ಮೂಲಕ ಆ ಪರಂಪರೆಯನ್ನು ಉಳಿಸಿ ಬೆಳೆಸಬೇಕಾಗಿದೆ” ಎಂದು ಹೇಳಿದರು.
ಸಂಘದ ಗೌರವಾಧ್ಯಕ್ಷ ದಯಾಶಂಕರ ಪಿ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಸೇವಾ ಸಂಘದ ಸಂಚಾಲಕ ಪ್ರಕಾಶ್ ಆರ್. ಶೆಟ್ಟಿ, ಉಪಾಧ್ಯಕ್ಷರಾದ ನಾಗ ಕಿರಣ್ ಪಿ.ಶೆಟ್ಟಿ, ಸಂದೇಶ್ ಜೆ. ಪೂಜಾರಿ, ಗೌರವ ಕಾರ್ಯದರ್ಶಿ ಶ್ರೀಕಾಂತ್ ಎಸ್. ಪೂಜಾರಿ, ಕೋಶಾಧಿಕಾರಿ ಕಲ್ಪೇಶ್ ಎಸ್. ಪೂಜಾರಿ, ಜೊತೆ ಕೋಶಾಧಿಕಾರಿ ನಿತೀಶ್ ಡಿ.ಸಾಲಿಯಾನ್, ಮಹಿಳಾ ಕಾರ್ಯಾಧ್ಯಕ್ಷೆ ಶೋಭಾ ಎಸ್.ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷಯಾದ ನವೀನ್ ಜೆ. ಪೂಜಾರಿ, ಸಲಹೆಗಾರರಾದ ರಮೇಶ್ ಡಿ. ಮಡಿವಾಳ್, ಸೀತಾರಾಮ್ ಎಸ್. ಶೆಟ್ಟಿ ವೇದಿಕೆಯಲ್ಲಿದ್ದರು.
ಅಜೆಕಾರು ಕಲಾಭಿಮಾನಿ ಬಳಗದ ಅಧ್ಯಕ್ಷರಾದ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರ ಸಂಯೋಜನೆಯಲ್ಲಿ ಊರಿನ ಪ್ರಸಿದ್ಧ ಕಲಾವಿದರಿಂದ ‘ಸ್ವಾಮಿ ಕೊರಗಜ್ಜ’ ತುಳು ಯಕ್ಷಗಾನ ತಾಳಮದ್ದಳೆ ಜರಗಿತು. ತುಳುನಾಡಿನ ಕಾರಣಿಕ ದೈವ ಕೊರಗಜ್ಜನ ಮಹಿಮೆಯನ್ನು ಸಾರುವ ಹರೀಶ್ ಶೆಟ್ಟಿ ಸೂಡ ವಿರಚಿತ ಈ ಪ್ರಸಂಗದ ಹಿಮ್ಮೇಳದಲ್ಲಿ ಭಾಗವತರಾಗಿ ದೇವಿ ಪ್ರಸಾದ್ ಆಳ್ವ ತಲಪಾಡಿ ಮತ್ತು ಚೆಂಡೆ ಮದ್ದಳೆಗಳಲ್ಲಿ ದೇಲಂತಮಜಲು ಸುಬ್ರಹ್ಮಣ್ಯ ಭಟ್ ಹಾಗೂ ಪ್ರಶಾಂತ್ ಶೆಟ್ಟಿ ವಗೆನಾಡು ಭಾಗವಹಿಸಿದರು. ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ (ಶಿವಯೋಗಿ – ಪಂಜಂದಾಯ ದೈವ), ಸದಾಶಿವ ಆಳ್ವ ತಲಪಾಡಿ (ಕೊರಗ ತನಿಯ), ಜಯಪ್ರಕಾಶ್ ಶೆಟ್ಟಿ ಪೆರ್ಮುದೆ (ಬೈರಕ್ಕೆ ಬೈದೆದಿ), ದಿನೇಶ್ ಶೆಟ್ಟಿ ಕಾವಳಕಟ್ಟೆ (ಅರಸು ಮಂಜಿಷ್ಣಾಯ ದೈವ), ಹರಿರಾಜ ಶೆಟ್ಟಿಗಾರ್ ಕಿನ್ನಿಗೋಳಿ (ಮೈಸಂದಾಯ) ಅರ್ಥಧಾರಿಗಳಾಗಿದ್ದರು.
ಇದೇ ಸಂದರ್ಭದಲ್ಲಿ ಕರ್ನಾಟಕ ಸೇವಾ ಸಂಘದ ವತಿಯಿಂದ ಕಲಾವಿದರನ್ನು ಗೌರವಿಸಲಾಯಿತು. ಸುಬ್ಬಣ್ಣ ಎ.ಶೆಟ್ಟಿ, ಚಿತ್ರಾ ಆರ್.ಶೆಟ್ಟಿ, ರವೀಂದ್ರ ವೈ.ಶೆಟ್ಟಿ, ಸುಬೋಧ್ ಬಿ. ಭಂಡಾರಿ, ಉದಯ್ ಕೆ. ಶೆಟ್ಟಿ, ಸದಾನಂದ ಶೆಟ್ಟಿ, ಸುಧೀರ್ ಜೆ.ಶೆಟ್ಟಿ, ರಾಜೇಶ್ ಜೆ. ಶೆಟ್ಟಿ, ಯೋಗೀಶ್ ಶೆಟ್ಟಿ, ಜಯಂತ್ ಶೆಟ್ಟಿ, ನಾಗರಾಜ್ ಶೆಟ್ಟಿ, ಗಿರೀಶ್ ಶೆಟ್ಟಿ, ಜಗದೀಶ್ ಶೆಟ್ಟಿ, ಅನಿಲ್ ಶೆಟ್ಟಿ, ಪ್ರಶಾಂತ್ ಶೆಟ್ಟಿ, ರಘು ಶೆಟ್ಟಿ, ಸೋಮನಾಥ ಶೆಟ್ಟಿ, ರಾಜಾ ಪೂಂಜಾ, ಅನಿಲ್ ಶೆಟ್ಟಿ ವಾಶಿ, ಪ್ರಶಾಂತ್ ಶೆಟ್ಟಿ ಕುಕ್ಕಿಕಟ್ಟೆ, ಬಿಲ್ಲವರ ಅಸೋಸಿಯೇಷನ್ ಕಲ್ಯಾಣ್ ನ ಕೃಷ್ಣ ಪೂಜಾರಿ, ಸದಾನಂದ ಸುವರ್ಣ, ಜಯಶ್ರೀ ಪೂಜಾರಿ ಮತ್ತಿತರ ಸಂಘ ಸಂಸ್ಥೆಗಳ ಸದಸ್ಯರು ಉಪಸ್ಥಿತರಿದ್ದರು. ನಾಗ ಕಿರಣ್ ಶೆಟ್ಟಿ ಮತ್ತು ಅನಿಲ್ ಬಿ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಅಂಗವಾಗಿ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿಯವರಿಂದ ಭಜನೆ ಹಾಗೂ ದಿ.ರಾಜೀವಿ ಪದ್ಮನಾಭ ಶೆಟ್ಟಿ ಅವರ ಸ್ಮರಣಾರ್ಥ ಮಕ್ಕಳಿಂದ ಅನ್ನದಾನ ಏರ್ಪಡಿಸಲಾಗಿತ್ತು. ನಂದೀಶ್ ಪೂಜಾರಿ ಅವರ ಪುಷ್ಪಾಲಂಕಾರ ಗಮನ ಸೆಳೆಯಿತು.