ಮೈಸೂರು : ಪರಿವರ್ತನ ರಂಗ ಸಮಾಜ (ರಿ.) ಇದರ 25ನೇ ವರ್ಷಾಚರಣೆಯ ಸಂದರ್ಭದಲ್ಲಿ ಪ್ರಸ್ತುತಪಡಿಸುವ ತಂಡದ 30ನೇ ನಾಟಕ ರವೀಂದ್ರ ಭಟ್ ಇವರ ಕೃತಿ ಆಧಾರಿತ ‘ಮೂರನೇ ಕಿವಿ’ ನಾಟಕ ಪ್ರದರ್ಶನವನ್ನು ದಿನಾಂಕ 27 ಜುಲೈ 2025ರಂದು ಸಂಜೆ 6-30 ಗಂಟೆಗೆ ರಮಾಗೋವಿಂದ ರಂಗಮಂದಿರದಲ್ಲಿ ಆಯೋಜಿಸಲಾಗಿದೆ. ಪ್ರೊ. ಎಸ್.ಆರ್. ರಮೇಶ್ ಇವರು ರಂಗಪಠ್ಯ, ವಿನ್ಯಾಸ ಮತ್ತು ನಿರ್ದೇಶನ ಮಾಡಿರುತ್ತಾರೆ.