ವಿರಾಜಪೇಟೆ : ಖ್ಯಾತ ಸಾಹಿತಿ ದಿ. ಕೆ. ಎ. ತಂಗವೇಲು ಮತ್ತು ದಿ. ಗೌರಮ್ಮ ಅವರ ಜ್ಞಾಪಕಾರ್ಥವಾಗಿ ಲೇಖಕಿ ಕೆ. ಟಿ. ವಾತ್ಸಲ್ಯ ವಿರಚಿತ “ಮೂರನೇ ಮಹಾಯುದ್ಧ ಮತ್ತು ಶಾಂತಿ” ಪುಸ್ತಕದ ಲೋಕಾರ್ಪಣಾ ಸಮಾರಂಭವು ದಿನಾಂಕ 27 ಫೆಬ್ರವರಿ 2025ರಂದು ವಿರಾಜಪೇಟೆಯಲ್ಲಿ ನಡೆಯಿತು .
ದಕ್ಷಿಣ ಕೊಡಗು ಲೇಖಕಿಯರ ಮತ್ತು ಕಲಾವಿದರ ಬಳಗ ವಿರಾಜಪೇಟೆ ಹಾಗೂ ಶ್ರೀಜಿತ್ ಸಂಸ್ಥೆ ಕೊಡಗು ಸಹಯೋಗದಲ್ಲಿ ವಿರಾಜಪೇಟೆಯ ಪುರಭವನ(ಟೌನ್‍ಹಾಲ್)ದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಾಹಿತಿ ಹಾಗೂ ಗೋಣಿಕೊಪ್ಪ ಕಾವೇರಿ ಕಾಲೇಜಿನ ಸಹಪ್ರಾಧ್ಯಾಪಕರಾದ ಡಾ.ಮುಲ್ಲೇಂಗಡ ರೇವತಿ ಪೂವಯ್ಯ ಕೃತಿ ಲೋಕಾರ್ಪಣೆ ಗೊಳಿಸಿದರು.
ದಕ್ಷಿಣ ಕೊಡಗು ಲೇಖಕಿಯರ ಮತ್ತು ಕಲಾವಿದರ ವೇದಿಕೆಯ ಅಧ್ಯಕ್ಷರಾದ ಎಂ .ಪಿ. ಪುಷ್ಪಲತ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ ಇದರ ಮಾಜಿ ಅಧ್ಯಕ್ಷರಾದ ಮುಲ್ಲೇoಗಡ ಮಧುಶ್ ಪೂವಯ್ಯ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಾಹಿತಿ ಹಾಗೂ ನಿವೃತ್ತ ಪ್ರಾಂಶುಪಾಲರಾದ ಲತೀಶ್, ಸಾಹಿತಿ ಅಪರ್ಣ ಹುಲಿತಾಳ, ಕೊಡಗು ಹಿಂದೂ ಮಲಯಾಳಿ ಮಹಿಳಾ ಅಸೋಸಿಯೇಷನ್ ಇದರ ಶೀಬಾ ಪೃಥ್ವಿನಾಥ್, ಹಿರಿಯ ಸಾಹಿತಿ ಗಿರೀಶ್ ಕಿಗ್ಗಾಲು ಉಪಸ್ಥಿತರಿದ್ದರು. ಜರ್ಮನ್ ನಿಂದ ವಿಶ್ವ ಮಕ್ಕಳಿಗೆ ಕಳುಹಿಸಿದ ಸಂದೇಶ ವನ್ನು ಕೆ. ಟಿ. ಕೌಶಲ್ಯ ಸಭೆಯಲ್ಲಿ ಓದಿ, ಪುಸ್ತಕ ವಿಮರ್ಶೆ ಮಾಡಿದರು. ವಿಮಲಾ ದಶರಥ ಸ್ವಾಗತಿಸಿದರು. ಲೇಖಕಿ ನಳಿನಾಕ್ಷಿ ನಿರೂಪಿಸಿ, ವಂದಿಸಿದರು.