ಮಂಗಳೂರು : ಕದ್ರಿ ನೃತ್ಯ ವಿದ್ಯಾನಿಲಯ ಚಾರಿಟೇಬಲ್ ಟ್ರಸ್ಟ್ (ರಿ.) ಇದರ 89ನೇ ವಾರ್ಷಿಕೋತ್ಸವ ಮತ್ತು ಸಂಗೀತ ವಿದ್ಯಾನಿಲಯ ಕದ್ರಿ ಇದರ 31ನೇ ವಾರ್ಷಿಕೋತ್ಸವದ ಸಲುವಾಗಿ ಹಾಗೂ ನಾಟ್ಯ ಭೀಷ್ಮ ದಿ. ಯು.ಎಸ್. ಕೃಷ್ಣ ರಾವ್ ಇವರ 110ನೇ ವರ್ಷದ ಸಂಸ್ಮರಣೆಯಾಗಿ ‘ಸಂಗೀತೋತ್ಸವ ಮತ್ತು ನೃತ್ಯೋತ್ಸವ’ ಕಾರ್ಯಕ್ರಮವನ್ನು ದಿನಾಂಕ 10 ಅಕ್ಟೋಬರ್ 2024 ಮತ್ತು 11 ಅಕ್ಟೋಬರ್ 2024ರಂದು ನೃತ್ಯ ವಿದ್ಯಾನಿಲಯದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ದಿನಾಂಕ 10 ಅಕ್ಟೋಬರ್ 2024ರಂದು ಸಂಜೆ 5-00 ಗಂಟೆಗೆ ವಿದುಷಿ ವಾಣಿ ಸತೀಶ್, ವಿದುಷಿ ಡಾ. ವಿಜಯಲಕ್ಷ್ಮೀ ಸುಬ್ರಮಣಿಯಂ ಮತ್ತು ವಿದುಷಿ ಉಷಾ ಪ್ರವೀಣ್ ಇವರ ಶಿಷ್ಯ ವೃಂದದವರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಲಿದ್ದು, ಇವರಿಗೆ ಉಡುಪಿಯ ವಿದ್ವಾನ್ ಶ್ರೀಧರ್ ಆಚಾರ್ ಪಾಡಿಗಾರ್ ಪಿಟೀಲು ಮತ್ತು ಮಂಗಳೂರಿನ ಶ್ರೀ ಯು.ಪಿ. ಶರಣ್ ಮೃದಂಗದಲ್ಲಿ ಸಾಥ್ ನೀಡಲಿದ್ದಾರೆ.
ದಿನಾಂಕ 11 ಅಕ್ಟೋಬರ್ 2024ರಂದು ಸಂಜೆ 5-00 ಗಂಟೆಗೆ ಉರ್ವದ ನಾಟ್ಯಾರಾಧನಾ ಕಲಾ ಕೇಂದ್ರ (ರಿ.) ಇದರ ನಿರ್ದೇಶಕಿ ಗುರು ವಿದುಷಿ ಶ್ರೀಮತಿ ಸುಮಂಗಲಾ ರತ್ನಾಕರ್ ರಾವ್ ಇವರಿಂದ ಸ್ವರಚಿತ ರಂಗ ಪ್ರಸ್ತುತಿ ‘ದ್ರೌಪತಿ ನವರಸ’ ಭರತನಾಟ್ಯ ಮತ್ತು ನಾಟ್ಯ ವಿಶಾರದ ವಿದ್ವಾನ್ ಯು.ಕೆ. ಪ್ರವೀಣ್ ಇವರ ನಿರ್ದೇಶನದಲ್ಲಿ ಕದ್ರಿ ನೃತ್ಯ ವಿದ್ಯಾನಿಲಯದ ಶಿಷ್ಯ ವೃಂದದವರು ಪ್ರಸ್ತುತ ಪಡಿಸುವ ನೃತ್ಯ ಕಾರ್ಯಕ್ರಮಕ್ಕೆ ಉಡುಪಿಯ ವಿದ್ವಾನ್ ಶ್ರೀಧರ್ ಆಚಾರ್ ಪಾಡಿಗಾರ್ ಪಿಟೀಲು, ಸುರತ್ಕಲ್ಲಿನ ಶ್ರೀ ರಾಕೇಶ್ ಇವರು ಮೃದಂಗದಲ್ಲಿ ಮತ್ತು ಮಂಗಳೂರಿನ ಶ್ರೀ ಯು.ಪಿ. ಶರಣ್ ಖಂಜೀರದಲ್ಲಿ ಸಾಥ್ ನೀಡಲಿದ್ದಾರೆ.