ಮಂಗಳೂರು : ಶಾಂತಿ ಕಲಾ ಕೇಂದ್ರ ಬಜ್ಪೆ ಮತ್ತು ಸಾಧನಾ ಸಂಗೀತ ಪ್ರತಿಷ್ಠಾನ (ರಿ) ಪುತ್ತೂರು ಇದರ ಆಶ್ರಯದಲ್ಲಿ ಎರಡು ದಿನಗಳ ‘ಕೃತಿಗಳು ಹಾಗೂ ದಾಸರ ಪದಗಳ ಸಂಗೀತ ಶಿಬಿರ’ವು ಕಟೀಲು ದೇವಸ್ಥಾನದ ಶಾಲಾ ವಠಾರದಲ್ಲಿ ದಿನಾಂಕ 11-05-2024 ಮತ್ತು 12-05-2024ರಂದು ನಡೆಯಿತು.
ಶಿಬಿರದ ಉದ್ಘಾಟನೆಯನ್ನು ಕಟೀಲಿನ ಅನುವಂಶಿಕ ಮುಕ್ತೇಸರರಾದ ಕಮಲಾದೇವಿ ಪ್ರಸಾದ ಅಸ್ರಣ್ಣರು ನೆರವೇರಿಸಿಕೊಟ್ಟರು.
ಶಿಬಿರದ ಸಂಪನ್ಮೂಲ ವ್ಯಕ್ತಿಗಳಾಗಿ ಖ್ಯಾತ ಸಂಗೀತ ಕಲಾವಿದರಾದ ವಿದುಷಿ ಡಾ. ಸುಚಿತ್ರ ಹೊಳ್ಳ ಅವರು ಶಿಬಿರಾರ್ಥಿಗಳಿಗೆ ಅಪರೂಪದ ಪ್ರಸಿದ್ಧ ಕೃತಿಗಳು ಹಾಗೂ ದೇವರ ನಾಮಗಳನ್ನು ಮನಮುಟ್ಟುವಂತೆ ಹೇಳಿಕೊಟ್ಟರು.
ಸುಮಾರು 65 ಶಿಬಿರಾರ್ಥಿಗಳು ಈ ಶಿಬಿರದಲ್ಲಿ ಭಾಗವಹಿಸಿದ್ದರು. ಶಿಬಿರದ ಎರಡನೆಯ ದಿನ ಕಟೀಲು ದೇವಸ್ಥಾನದ ಪ್ರಾಂಗಣದಲ್ಲಿ ಶಿಬಿರಾರ್ಥಿಗಳಿಂದ ಗೋಷ್ಠಿ ಗಾಯನ ನಡೆಯಿತು. ಪಕ್ಕವಾದ್ಯದಲ್ಲಿ ವಯಲಿನ್ ನಲ್ಲಿ ಧನಶ್ರೀ ಶಬರಾಯ ಹಾಗೂ ಮೃದಂಗದಲ್ಲಿ ಶೈಲೇಶ್ ಸಹಕರಿಸಿದರು. ಶಾಂತಿ ಕಲಾ ಕೇಂದ್ರ ಬಜ್ಪೆ ಇದರ ನಿರ್ದೇಶಕರಾದ ಶ್ರೀಮತಿ ಚಂದ್ರಕಲಾ ಆರ್. ಆಚಾರ್ ಉಪಸ್ಥಿತರಿದ್ದರು.