ಉಡುಪಿ : ಪರ್ಕಳದ ಸರಿಗಮ ಭಾರತಿ ಸಂಗೀತ ವಿದ್ಯಾಲಯ (ರಿ.) ಇದರ ಆಶ್ರಯದಲ್ಲಿ ಮೂರು ದಿನಗಳ ‘ಸಂಗೀತ ಶಿಬಿರ’ವನ್ನು ದಿನಾಂಕ 29ರಿಂದ 31 ಡಿಸೆಂಬರ್ 2025ರವರೆಗೆ ಸಂಜೆ 5-00 ಗಂಟೆಗೆ ಪರ್ಕಳದ ಸರಿಗಮ ಭಾರತಿ ಸಂಗೀತ ವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ.
ಬೆಂಗಳೂರಿನ ವಿದುಷಿ ತೇಜಸ್ವಿನಿ ಎಂ.ಕೆ. ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದು, ರಾಗಾಲಾಪನೆ, ಕೃತಿ, ನೆರವಲ್ ಮತ್ತು ಕಲ್ಪನಾಸ್ವರ ಮುಂತಾದ ವಿಷಯದ ಬಗ್ಗೆ ತಿಳಿಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಡಾ. ಉದಯಶಂಕರ ಹೆಚ್.ಎನ್. 96633 69365 ಮತ್ತು ವಿದುಷಿ ಉಮಾಶಂಕರಿ 99641 40601 ಸಂಖ್ಯೆಯನ್ನು ಸಂಪರ್ಕಿಸಿರಿ.

