ಧಾರವಾಡ : ಭಾರತೀಯ ಸಂಗೀತ ವಿದ್ಯಾಲಯ ಧಾರವಾಡ ಮತ್ತು ಡಾ. ಅಣ್ಣಾಜಿರಾವ್ ಸಿರೂರ್ ರಂಗಮಂದಿರ ಪ್ರತಿಷ್ಠಾನ ಧಾರವಾಡ ಪ್ರಸ್ತುತ ಪಡಿಸುವ ಧಾರವಾಡ ಸಂಗೀತ ಕಛೇರಿಯನ್ನು ದಿನಾಂಕ 15 ಜೂನ್ 2025ರಂದು ಸಂಜೆ 5-15 ಗಂಟೆಗೆ ಧಾರವಾಡದ ಕೆ.ಸಿ.ಡಿ. ಕ್ಯಾಂಪಸ್ ಸೃಜನಾ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಬೆಂಗಳೂರಿನ ತೇಜಸ್ವಿನಿ ಶ್ರೀಹರಿ ಮತ್ತು ಧಾರವಾಡದ ಪಂಡಿತ್ ಕೈವಲ್ಯ ಕುಮಾರ್ ಗುರವ್ ಇವರ ಹಾಡುಗಾರಿಕೆಗೆ ಶ್ರೀಧರ್ ಮಾಂಡ್ರೆ ಮತ್ತು ಶ್ರೀಹರಿ ದಿಗ್ಗಾವಿ ತಬಲಾ ಹಾಗೂ ಗುರುಪ್ರಸಾದ್ ಹೆಗ್ಡೆ ಮತ್ತು ಬಸವರಾಜ್ ಹಿರೇಮಠ ಇವರ ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ.