ಉಡುಪಿ : ರಾಗ ಧನ ಸಂಸ್ಥೆ ಉಡುಪಿ (ರಿ.) ಇದರ ಆಶ್ರಯದಲ್ಲಿ ಸಂಗೀತ ಕಾರ್ಯಕ್ರಮವು ದಿನಾಂಕ 12 ಅಕ್ಟೋಬರ್ 2025 ಆದಿತ್ಯವಾರದಂದು ಉಡುಪಿಯ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ.
ಸಂಜೆ 4-00 ಗಂಟೆಗೆ ಕುಮಾರಿ ಧನಶ್ರೀ ಶಬರಾಯ ಇವರ ವಯೋಲಿನ್ ಸೋಲೋ ವಾದನಕ್ಕೆ ಮೃದಂಗದಲ್ಲಿ ಮೈಸೂರಿನ ಶ್ರೀ ಶುಭಾಂಗ್ ಬಿ.ಯಸ್. ಇವರು ಹಾಗೂ ಗಂಟೆ 5-30ಕ್ಕೆ ಶ್ರೀಮತಿ ಪೂಜಾ ಉಡುಪ ಇವರ ಹಾಡುಗಾರಿಕೆ ವಯೊಲಿನ್ ನಲ್ಲಿ ಉಡುಪಿಯ ಶ್ರೀಮತಿ ಶರ್ಮಿಳಾ ರಾವ್ ಮತ್ತು ಮೃದಂಗದಲ್ಲಿ ಮೈಸೂರಿನ ಶುಭಾಂಗ್ ಬಿ.ಯಸ್. ಇವರು ಸಹಕರಿಸಲಿದ್ದಾರೆ.