ಉಪ್ಪಿನಕುದ್ರು : “ಪ್ರತಿಭೆ ನಿಮ್ಮದು ವೇದಿಕೆ ನಮ್ಮದು” 2025 ಕಾರ್ಯಕ್ರಮದಡಿ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಸತತ 105ನೇ ತಿಂಗಳ ಕಾರ್ಯಕ್ರಮ ದಿನಾಂಕ 23 ಮಾರ್ಚ್ 2025ರಂದು ಉಪ್ಪಿನಕುದ್ರು ಗೊಂಬೆ ಮನೆಯಲ್ಲಿ ವಿಷ್ಣು ಸಹಸ್ರನಾಮದೊಂದಿಗೆ ಆರಂಭವಾಯಿತು.
ಶ್ರೀಮತಿ ವಸಂತಿ ಆರ್. ಪಂಡಿತ್ ಪ್ರಾರ್ಥಿಸಿದರು. ವೇದಿಕೆಯಲ್ಲಿ ಡಾ. ರಮಾಕಾಂತ್ ಶೆಣೈ, ಪುಷ್ಪರಾಜ್, ವಸಂತಿ ಆರ್. ಪಂಡಿತ್, ಗಿರೀಶ್ ಪೈ ಹಾಗೂ ಅಕಾಡೆಮಿ ಅಧ್ಯಕ್ಷ ಭಾಸ್ಕರ್ ಕೊಗ್ಗ ಕಾಮತ್‌ರವರು ಉಪಸ್ಥಿತರಿದ್ದರು. ಮೈಸೂರಿನ ಡಾ. ರಮಾಕಾಂತ್ ಶೆಣೈ ಹಾಗೂ ಕುಂದಾಪುರದ ದೀಕ್ಷಾ ಪೈ, ಪ್ರೇಕ್ಷಾ ಪೈ ಸಹೋದರಿಯರನ್ನು ಅಕಾಡೆಮಿ ವತಿಯಿಂದ ಸನ್ಮಾನಿಸಲಾಯಿತು. ನಂತರ ಡಾ. ರಮಾಕಾಂತ್ ಶೆಣೈಯವರು ‘ವಿಷ್ಣು ಸಹಸ್ರನಾಮ’ದ ಬಗ್ಗೆ ಪ್ರವಚನ ನೀಡಿ ಅದರ ಮಹತ್ವ ವಿವರಿಸಿದರು. ದೀಕ್ಷಾ ಪೈ ಹಾಗೂ ಪ್ರೇಕ್ಷಾ ಪೈ ಸಹೋದರಿಯರು ಭಕ್ತಿ ಸಂಗೀತ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ನೆರವೇರಿಸಿದರು. ಶ್ರೀಮತಿ ರಶ್ಮಿರಾಜ್, ಕುಂದಾಪುರ ಇವರು ಕಾರ್ಯಕ್ರಮ ನಿರೂಪಿಸಿದರು.