ಮಂಗಳೂರು : ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಆಂಡ್ ಕಲ್ಬರಲ್ ಹೆರಿಟೇಜ್ (ಇಂಟ್ಯಾಕ್) ಇದರ ಮಂಗಳೂರು ಅಧ್ಯಾಯ ಮತ್ತು ಕಲ್ಲಚ್ಚು ಪ್ರಕಾಶನ ವತಿಯಿಂದ ವಿಶ್ವ ಕವಿತ ದಿನಾಚರಣೆ ಅಂಗವಾಗಿ ‘ಮುಸ್ಸಂಜೆಯ ಕವಿತೆಗಳು’ ಕನ್ನಡ ಕವಿ- ಕಾವ್ಯ ಮಂಥನ ಕಾರ್ಯಕ್ರಮವು ದಿನಾಂಕ 21-03-2024ರ ಗುರುವಾರದಂದು ಮಂಗಳೂರಿನ ಕೊಡಿಯಾಲ್ ಗುತ್ತು ಕಲೆ ಮತ್ತು ಸಂಸ್ಕೃತಿ ಕೇಂದ್ರದಲ್ಲಿ ನಡೆಯಿತು.
ಮೈಸೂರಿನ ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರದ ನಿಕಟಪೂರ್ವ ಯೋಜನಾ ನಿರ್ದೇಶಕರಾದ ಪ್ರೊ. ಬಿ. ಶಿವರಾಮ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಕೆನರಾ ಬ್ಯಾಂಕಿನ ನಿವೃತ್ತ ಎ. ಜಿ. ಎಂ. ರೀಸ್ ಮ್ಯಾಥ್ಯೂಸ್ ಉದ್ಘಾಟಿಸಿದರು.
ಕನ್ನಡದ 20ನೇ ಶತಮಾನದ ಹಿರಿಯ ಕವಿಗಳ ಕವನ ವಾಚನ ಮತ್ತು ವಿಶ್ಲೇಷಣೆಯಲ್ಲಿ ಕರಾವಳಿಯ ಕವಿ- ಕವಯಿತ್ರಿಯರಾದ ಡಾ. ಮೀನಾಕ್ಷಿ ರಾಮಚಂದ್ರ, ಪ್ರೊ. ಪಿ. ಕೃಷ್ಣಮೂರ್ತಿ, ಡಾ. ಸಾಯಿಗೀತಾ ಹೆಗ್ಡೆ, ಮಾರ್ಸೆಲ್ ಡಿ’ಸೋಜ, ಬಶೀರ್ ಅಹ್ಮದ್ ಕಿನ್ಯ, ದಿವಾ ಕೊಕ್ಕಡ, ಅಕ್ಷಯಾ ಆರ್.ಶೆಟ್ಟಿ, ದಿವಾಕರ ಬಲ್ಲಾಳ್ ಮುದ್ರಾಡಿ, ಯೋಗೀಶ್ ಮಲ್ಲಿಗೆಮಾಡು ಭಾಗವಹಿಸಿದ್ದರು. ಇಂಟ್ಯಾಕ್ ಸಂಚಾಲಕ ಸುಭಾಷ್‌ಚಂದ್ರ ಬಸು ಸ್ವಾಗತಿಸಿ, ಕಲ್ಲಚ್ಚು ಪ್ರಕಾಶನದ ಮುಖ್ಯಸ್ಥ ಸಾಹಿತಿ ಮಹೇಶ ಆರ್. ನಾಯಕ್ ಕಾರ್ಯಕ್ರಮ ನಿರೂಪಿಸಿದರು.