Subscribe to Updates

    Get the latest creative news from FooBar about art, design and business.

    What's Hot

    ಬೆಂಗಳೂರಿನಲ್ಲಿ ಕ್ಲೇ ಮಾಡೆಲಿಂಗ್ ಪ್ರದರ್ಶನ | ಮೇ 24

    May 21, 2025

    ಬಾನು ಮುಷ್ತಾಕ್‌ ಕೃತಿಗೆ ಪ್ರತಿಷ್ಠಿತ ಅಂತರರಾಷ್ಚ್ರೀಯ ‘ಬೂಕರ್ ಪ್ರಶಸ್ತಿ’

    May 21, 2025

    ಹರಿಹರಪುರದಲ್ಲಿ ‘ಭಾಗವತರ ಸಂಸ್ಮರಣೆ ಗಾನಾರಾಧನೆ’ | ಮೇ 25

    May 21, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಮಾರ್ಚ್ 4, 5ರಂದು ಮೈಸೂರಿನಲ್ಲಿ “ಗಮ್ಯ ರಂಗ ಹಬ್ಬ-2023”
    Drama

    ಮಾರ್ಚ್ 4, 5ರಂದು ಮೈಸೂರಿನಲ್ಲಿ “ಗಮ್ಯ ರಂಗ ಹಬ್ಬ-2023”

    February 28, 2023Updated:August 19, 2023No Comments4 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    28 ಫೆಬ್ರವರಿ 2023, ಮೈಸೂರು: ಸಂಚಲನ (ರಿ.) ಮೈಸೂರು ಇವರ ಆಯೋಜನೆಯಲ್ಲಿ ರಂಗಬಂಡಿ ಮಳವಳ್ಳಿ (ರಿ.) ಇವರ ಸಹಭಾಗಿತ್ವದಲ್ಲಿ ಗಮ್ಯ (ರಿ.) ಶ್ರೀರಂಗಪಟ್ಟಣ ಇದರ “ಗಮ್ಯ ರಂಗ ಹಬ್ಬ -2023” ಮಾರ್ಚ್ 4 ಮತ್ತು 5ರಂದು ಮೈಸೂರಿನ ಕಿರು ರಂಗ ಮಂದಿರದಲ್ಲಿ ನಡೆಯಲಿದೆ.

    ಗಮ್ಯ…… ಗಮನೀಯ ……
    ಸಾಂಸ್ಕೃತಿಕವಾಗಿ ಮತ್ತು ಇತಿಹಾಸದ ಹಲವು ಕುರುಹುಗಳ ಬಾಹುಳ್ಯದಿಂದಾಗಿ ಶ್ರೀರಂಗಪಟ್ಟಣ ಎಂದಿಗೂ ಗಮನೀಯವೇ ಆಗಿದೆ. ಮಂಡ್ಯ ಜಿಲ್ಲೆಯ ಕಲಾಪರಂಪರೆಗೆ ಇಲ್ಲಿನ ಮಣ್ಣಿನ ಕೊಡುಗೆಯು ಅಪಾರವೇ ಸರಿ. ಹೀಗಿದ್ದೂ ಹೊಸತನಕ್ಕೆ ತೆರೆದುಕೊಳ್ಳುವ, ರೂಢಿಸಿಕೊಳ್ಳುವ ತುರ್ತು ಇದ್ದೇ ಇತ್ತು ಎನ್ನುವುದೂ ಅಷ್ಟೇ ಸಮೀಚೀನ. ಹಾಗೇ ಚಿಂತನಾಶೀಲರಾದವರ ಮನದಲ್ಲಿ ಗುರಿಯೊಂದನ್ನು ಇರಿಸಿಕೊಂಡು ಮುನ್ನಡೆಯುವ ಮಾರ್ಗವನ್ನು ಹುಡುಕುತ್ತಿದ್ದಾಗ ಹೊಳೆದದ್ದೇ “ಗಮ್ಯ”. ಗ್ರಾಮೀಣ ಭಾಗದ ಆಸಕ್ತರಿಂದ ಮೊದಲ್ಗೊಂಡು, ಪಟ್ಟಣವಾಸಿಗಳನ್ನೂ ಒಳಗೊಂಡ ಒಂದು ಶಿಷ್ಯ ತಂಡವಾಗಿ ರೂಪುಗೊಳ್ಳುತ್ತಾ ರಂಗಾಭ್ಯಾಸದ ಹಿನ್ನೆಲೆಯೊಂದಿಗೆ ಒಂದಿಷ್ಟು ಕಲಾಕೈಂಕರ್ಯವನ್ನು ಕೈಗೆತ್ತಿಕೊಳ್ಳುವ ಹುಮ್ಮಸ್ಸಿನಲ್ಲಿ ‘ಗಮ್ಯ’ ರೂಪುಗೊಳ್ಳುತ್ತಿದೆ.
    ನಿರಂತರ ಕಲಿಕೆಯ ಸೊಗಡಿನೊಂದಿಗೆ ಕಲಿತಿದ್ದನ್ನು ಪ್ರದರ್ಶಿಸುವ ಉತ್ಸಾಹ ಹೊಂದಿರುವ ಈ ತಂಡದಿಂದ ಕಲಾ ಜಗತ್ತಿಗೆ ಉನ್ನತ ಕೊಡುಗೆ ದೊರೆಯಲಿದೆ ಎಂಬುದು ಎಲ್ಲಾ ಕಲಾಸಕ್ತರ ಆಶಯ.


    4 ಮಾರ್ಚ್ ಸಂಜೆ 6-45ಕ್ಕೆ “ಭಾಸ” ಮಹಾಕವಿಯ “ದೂತ ವಾಕ್ಯ” 
    ಸಂಗೀತ : ಆದಿತ್ಯ ಭಾರದ್ವಾಜ್ ಎನ್. ಮರು ರೂಪ, ನಿರ್ದೇಶನ : ರಮೇಶ್ ಕೆ. ಬೆಣಕಲ್
    ಮಹಾಭಾರತದ ಶ್ರೀ ಕೃಷ್ಣ ಸಂಧಾನದ ಘಟನೆಯನ್ನಾಧರಿಸಿ ಭಾಸ ಬರೆದ ಏಕಾಂಕವನ್ನು ಕೈಗೆತ್ತಿಕೊಂಡು, ಅದರ ಪೂರ್ವಾಪರಗಳ ಅವಲೋಕನ ನಡೆಸುವ ಪ್ರಯತ್ನ ನಮ್ಮದು. ಇಡೀ ಮಹಾಭಾರತದ ಕಥೆಯೇ ಒಂದಕ್ಕೊಂದು ಬೆಸೆದುಕೊಂಡಿರುವುದರಿಂದ ಮೂಲ ನಾಟಕಕ್ಕೆ ಹೆಚ್ಚು ಅಂಶಗಳನ್ನು ಸೇರಿಸಿಕೊಂಡು ಹೊಸತಾದ ನಾಟಕವೊಂದನ್ನೇ ಕಟ್ಟಿಕೊಂಡಿದ್ದೇವೆ. ಯುವ ರಂಗಕರ್ಮಿ ರಮೇಶ ತನ್ನ ಪ್ರಯತ್ನವನ್ನು ಶಿಸ್ತುಬದ್ದವಾಗಿ ಸಾದರಪಡಿಸಿದ್ದಾನೆ. ಗಮ್ಯದ ಮಹತ್ವದ ನಾಟಕಗಳಲ್ಲಿ ಒಂದು.
    ನಿರ್ದೇಶಕ : ರಮೇಶ್ ಕೆ. ಬೆಣಕಲ್ :
    ಕೊಪ್ಪಳ ಜಿಲ್ಲೆಯ ಗ್ರಾಮೀಣ ಪ್ರದೇಶದ ಯುವಕ. ಚಿಕ್ಕಂದಿನಲ್ಲಿ ತನ್ನೂರಿನ ಸಾಂಪ್ರದಾಯಿಕ ಕುಣಿತಗಳಲ್ಲಿ ಹೆಜ್ಜೆ ಹಾಕಿ, ಅದನ್ನು ಮೆಚ್ಚಿಕೊಂಡಿದ್ದ ಇವರು ಮೈಸೂರಿಗೆ ಕೆಲಸ ಹುಡುಕಿ ಬಂದಾಗ ಸೆಳೆದದ್ದು ಮಂಡ್ಯ ರಮೇಶರ ನಟನೆ ರಂಗಶಾಲೆ. ಅಲ್ಲಿ ಸತತ ಎರಡು ವರ್ಷಗಳ ರಂಗಾಭ್ಯಾಸ ಹಾಗೂ ರಂಗ ಕಾರ್ಯದ ನಂತರ ಅನುಕರಣ, ಅದಮ್ಯ, ಕೊಪ್ಪಳ ಶಿಕ್ಷಕರ ಸಂಘ, ಗಂಗಾವತಿ ಸಾಂಸ್ಕೃತಿಕ ಸಂಘಟನೆ ಮತ್ತು ಅನೇಕ ಶಾಲಾ ಕಾಲೇಜುಗಳ ತಂಡಗಳ ನಟ, ನಿರ್ದೇಶಕ, ಸಂಗೀತ, ತಂತ್ರಜ್ಞ, ನೇಪಥ್ಯದ ಕೆಲಸಗಳಲ್ಲಿ ಕಾರ್ಯಮಗ್ನನಾಗಿದ್ದ ಅನುಭವವೇ ಈಗ ಗಮ್ಯದಲ್ಲಿ ದೂತ ವಾಕ್ಯವನ್ನು ನಿರ್ದೇಶಿಸಲು ಪ್ರೇರಣೆ ಎನ್ನುತ್ತಾರೆ. ಜೀವನಾಧಾರಕ್ಕಾಗಿ ಇವರು ಮಾಡಿರದ ಕೆಲಸಗಳಿಲ್ಲ. ಗಾರೆ ಕೆಲಸ, ಪೇಂಟಿಂಗ್, ಗಾರೈoಟ್ಗಳಲ್ಲಿ ದುಡಿದು ಜೀವನೋಪಾಯವನ್ನು ಕಂಡುಕೊಂಡರೆ ರಂಗಭೂಮಿಯಿಂದ ಜೀವನೋತ್ಸಹವನ್ನು ಕಂಡುಕೊಳ್ಳುತ್ತಾರೆ. ಈಗ ಗಮ್ಯದ ಈ ನಾಟಕದ ಮರುರೂಪವನ್ನು ಮಾಡಿಕೊಂಡು ನಿರ್ದೇಶಿದ್ದಾರೆ.
    ಸಂಗೀತ : ಆದಿತ್ಯ ಭಾರಧ್ವಾಜ್ ಎನ್.
    ಹುಟ್ಟಿನಿಂದ ರಂಗದ ಘಮಲನ್ನೇ ಉಸಿರಾಡುತ್ತಾ, ಎಂದೆಂದಿಗೂ ನಾಟಕದ ನಂಟು ಬಿಡಲೊಲ್ಲದ ಯುವಜೀವ ಆದಿತ್ಯ. ಕಿರುತೆರೆ ಮತ್ತು ಹಿರಿತೆರೆಗೂ ಚಿಕ್ಕಂದಿನಲ್ಲೇ ಪ್ರವೇಶಿಸಿ, ಮೈತ್ರಿ ಚಿತ್ರದ ಸಿದ್ರಾಮನಾಗಿ ವಿಶೇಷವಾಗಿ ಪರಿಚಿತನಾಗಿದ್ದಾಗ್ಯೂ ರಂಗದ ತುಡಿತವೇ ಮಿಗಿಲೆಂದು ಶ್ರೀರಂಗಪಟ್ಟಣದಲ್ಲಿ ರಂಗಘಮಲನ್ನು ಪಸರಿಸುವ ಮಹಾದಾಸೆಯಿದೆ.ನಟನದಲ್ಲಿ ಹಲವಾರು ವರ್ಷದ ರಂಗಕೈಂಕರ್ಯದ ನಂತರ ಗಮ್ಯದ ಹೊಣಿಹೊತ್ತು ಮುನ್ನಡೆದಿದ್ದಾರೆ. ಈವರೆಗೂ ನಟ್ಟಿರುಳಲ್ಲಿ, ಮನಪರಿವರ್ತನೆ, ಎಲ್.ಇರುವೆ ಭೂಕೈಲಾಸ, ವೇದನೆ, ಪ್ರತೀಕಾರ, ಹಿಡಿoಬನ ತೋಟ , ಹ್ಯಾಮ್ಲೆಟ್ ಆಧಾರಿತ ಪ್ರತಿಗಮನ ಊರುಭಂಗ, ಒಂದು ಸೈನಿಕ ವೃತ್ತಾಂತ ಇನ್ನೂ ಹಲವಾರು ನಾಟಕಗಳ ನಿರ್ದೇಶಕರಾಗಿ ದುಡಿದಿದ್ದು , ಈಗ ಈ ನಾಟಕದ ಮೂಲಕ ಸಂಗೀತ ನಿರ್ದೇಶಕರಾಗಿ ಮತ್ತೂಂದು ಆಯಾಮದ ಕದ ತಟ್ಟಿದ್ದಾನೆ.
    ಗಮ್ಯ ಸಂಘಟಕ : ಚ. ನಾರಾಯಣ ಸ್ವಾಮಿ
    ನಾಗಮಂಗಲದ ಕನ್ನಡ ಸಂಘದ ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾ, ಮಂಡ್ಯ ರಮೇಶ, ಪ್ರಶಾಂತ ಹಿರೇಮಠ್ ಸಂತೋಷಕುಮಾರ ಕುಸನೂರ ಕೃಷ್ಣಪ್ರಸಾದ್, ಎಸ್.ಆರ್. ರಮೇಶ, ಸಿ. ಬಸವಲಿಂಗಯ್ಯ, ಬಿ. ಸುರೇಶ ಮೊದಲಾದವರ ಮಾರ್ಗದರ್ಶನದಲ್ಲಿ ಬೆಳೆದವರಾಗಿದ್ದಾರೆ. ಅಭಿನಯದೊಂದಿಗೆ ಸಂಗೀತ, ಪರಿಕಿಸು ಜೀವನಾರ್ಥ, ಮಂಕುತಿಮ್ಮನ ಕಗ್ಗ, ಡಾ. ಸಿದ್ರಾಜು, ಮಹಿಮಾಪುರ, ಪರಿತ್ಯಕ್ತ ಅರಹಂತ, ಹುಲಿಕಥೆ ಮುಂತಾದ ನಾಟಕಗಳನ್ನು ಮಕ್ಕಳು, ಹಿರಿಯರಿಂದಾದಿಯಾಗಿ ನಿರ್ದೇಶಿದ್ದಾರೆ. ಇದೀಗ ಗಮ್ಯದ ‘ದೂತವಾಕ್ಯ’ವನ್ನು ನಿಮ್ಮ ಮುಂದಿಡುತ್ತಿದ್ದಾರೆ.


    5 ಮಾರ್ಚ್ ಸಂಜೆ 6.45ಕ್ಕೆ ಪರಮ ಪದಸೋಪಾನಪಟ
    ಇದು “ಆರು ನೋಟಗಳ ಒಂದು ನಿಶಾನಾಟಕ”. ಈ ನಾಟಕ ನಡೆಯುವುದೆಲ್ಲ ನಡುರಾತ್ರಿಯ ಆಶುಪಾಸಿನಲ್ಲಿ. ಕತ್ತಲಲ್ಲಿ ಅಲೆದಾಡುವವರು ನಿಶಾಚರ ರಕ್ಕಸರು ಎಂಬುದು ನಂಬಿಕೆ. ಬೆಳಗಿನ ಮೂರ್ತತೆಗೆ ನಿಲುಕದ ಅಮೂರ್ತ ಅಧೋಲೋಕವೊಂದು ನಡುರಾತ್ರಿಗೆ ತೆರೆದುಕೊಳ್ಳುತ್ತದೆ.
    ಪರಮ ಪದಸೋಪಾನಪಟವೆಂದರೆ ಹಾವು ಏಣಿಯ ಆಟ: ಅದನ್ನು ಆಡುವ ಹಾಸು. ಭಾರತದಲ್ಲಿ ಹುಟ್ಟಿ ಪ್ರಸಾರಗೊಂಡ ಆಟ ಇದೆಂದು ಪ್ರತೀತಿ. ಹಲವು ಮಜಲುಗಳಲ್ಲಿ ಜೀವನದ ಕಷ್ಟ ಸುಖಗಳನ್ನು ದಾಟಿ ಮೋಕ್ಷಕ್ಕೆ ತಲುಪುವ ಆಧ್ಯಾತ್ಮಿಕ ಅರ್ಥದ ಹಿನ್ನಲೆಯೂ ಆ ಆಟಕ್ಕಿದೆ. ಅಂತೆಯೇ ಇಲ್ಲಿಯ ಪಾತ್ರಧಾರಿಗಳೂ, ಬದುಕು ಎಂಬ ಬ್ರಹತ್ ಪರಮ ಪದಸೋಪಾನಪಟದ ಕಾಯಿಗಳು ಹಾವು ಕಚ್ಚಿದಾಗ ನೊಂದು, ಏಣಿ ಸಿಕ್ಕಾಗ ಹಿಗ್ಗುವ ಸಹಜರು. ಅವರೆಲ್ಲರ ಲೋಕದ ಅಮೂರ್ತ ಕಥನವಿದು.
    ರಚನೆ : ಅಕ್ಷರ ಕೆ.ವಿ.
    ದೆಹಲಿಯ ರಾಷ್ಟೀಯ ನಾಟಕಶಾಲೆ ಮತ್ತು ಇಂಗ್ಲೆಂಡಿನ ಲೀಡ್ಸ್ ವಿಶ್ವ ವಿದ್ಯಾಲಯಗಳಿಂದ ಪದವಿ ಪಡೆದ ಇವರು ನೀನಾಸಮ್ ಮತ್ತು ಅಕ್ಷರ ಪ್ರಕಾಶನ ಸಂಸ್ಥೆಗಳ ಮೂಲಕ ಕೆಲಸ ಮಾಡುತ್ತಿದ್ದಾರೆ. ನೀನಾಸಮ್ ನ ಅಂಗಸಂಸ್ಥೆ ಗಳಿಗೆ ಈವರೆಗೂ 60ಕ್ಕೂ ಹೆಚ್ಚಿನ ರಂಗ ಪ್ರಯೋಗಗಳನ್ನು ನಿರ್ದೇಶಿಸಿದ್ದಾರೆ. ರಂಗಸಾಹಿತ್ಯ ಕ್ಷೇತ್ರಕ್ಕೆ ಇವರ ಕೊಡುಗೆ ಅಪಾರ. “ರಂಗ ಪ್ರಪಂಚ”, “ರಂಗ ಪ್ರಯೋಗ” ಎಂಬ ಅಧ್ಯಯನ ಕೃತಿಗಳು, “ಮಾವಿನ ಮರದಲ್ಲಿ ಬಾಳೆಯ ಹಣ್ಣು” ಎಂಬ ರಂಗ ವಿಮರ್ಷಾ ಸಂಕಲನ, “ರಂಗ ಭೂಮಿಯ ಮುಖಾಂತರ”, “ಸಮ್ಮುಖದಲ್ಲಿ ಸ್ವಗತ” ಇತರ ಲೇಖನ ಸಂಕಲನಗಳು ಹಾಗೂ ಸೇತುಬಂಧನ, ಭಾರತಯಾತ್ರೆ ಇತರ ನಾಟಕಗಳೊಂದಿಗೆ ಅನೇಕ ನಾಟಕಗಳನ್ನು ಸಮರ್ಪಕವಾಗಿ ಅನುವಾದಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಪುರಸ್ಕಾರಗಳು ಸಂದಿವೆ.
    ವಿನ್ಯಾಸ ಮತ್ತು ನಿರ್ದೇಶನ : ಆದಿತ್ಯ ಭಾರದ್ವಾಜ್ ಎನ್.
    ಹುಟ್ಟಿನಿಂದ ರಂಗದ ಘಮಲನ್ನೇ ಉಸಿರಾಡುತ್ತಾ, ಎಂದೆಂದಿಗೂ ನಾಟಕದ ನಂಟು ಬಿಡಲೊಲ್ಲದ ಯುವಜೀವ ಆದಿತ್ಯ. ಕಿರುತೆರೆ ಮತ್ತು ಹಿರಿತೆರೆಗೂ ಚಿಕ್ಕಂದಿನಲ್ಲೇ ಪ್ರವೇಶಿಸಿ, ಮೈತ್ರಿ ಚಿತ್ರದ ಸಿದ್ರಾಮನಾಗಿ ವಿಶೇಷವಾಗಿ ಪರಿಚಿತನಾದ್ದಾಗ್ಯೂ, ರಂಗದ ತುಡಿತವೇ ಮಿಗಿಲೆಂದು ಶ್ರೀರಂಗಪಟ್ಟಣದಲ್ಲಿ ರಂಗ ಘಮಲನ್ನು ಪಸರಿಸುವ ಮಹದಾಸೆಯಿಂದ ಗಮ್ಯದ ಹೊಣೆಹೊತ್ತು ಮುನ್ನಡೆದಿದ್ದಾರೆ. ಈವರೆಗೂ ನಟ್ಟಿರುಳಲ್ಲಿ ಮನಪರಿವರ್ತನೆ, ಊರುಭಂಗ, ಒಂದು ಸೈನಿಕ ವೃತ್ತಾಂತ, ವಾಲೀವಧಾಂಕ ಸೇರಿದಂತೆ ಇನ್ನೂ ಹಲವು ನಾಟಕಗಳ ನಿರ್ದೇಶಕರಾಗಿ ದುಡಿದಿದ್ದು, ವಿನ್ಯಾಸ ಮತ್ತು ಸಂಗೀತ ವಿಭಾಗಗಳಲ್ಲೂ ಅನುಭವ ಹೊಂದಿದವರಾಗಿದ್ದಾರೆ.

    ರಂಗದ ಮೇಲೆ ಗಮ್ಯ ಬಳಗ:
    . ಶಿವಲಿಂಗ ಪಟ್ಟಣ ಶೆಟ್ಟಿ : ಕರಿಯಣ್ಣ, ಆರಾಧ್ಯ . ಸಾಗರ್ : ಕಣ್ಣನ್, ರಮೇಶ
    . ಮನೋಜ್ : ದಿವಾಕರ ಭಟ್ಟ . ಪ್ರಾಶ ಗೌಡ : ರಜನಿ ಒಬ್ಬ ನಟಿ
    . ಅನುಶ್ರೀ : ಕಲ್ಯಾಣಿ, ನಟಿ . ನವೀನ್ ಕುಮಾರ್ ಪಿ. ವಸಂತ ನಟ
    . ಸಾನಿಕ : ಗಾಯತ್ರಿ . ವಿಠಲ್ : ಸುಧೀರ
    . ಕಿಶೋರ್ : ಚಾಲಕ, ಇನ್ನೊಬ್ಬ . ಯಶವಂತ : ಶಾಂಕ್ರ, ನಟ
    . ಅಭಿಷೇಕ್: ನಾರಾಯಣ, ಮೇಳ . ಸುಕನ್ಯ : ಸುಭದ್ರೆ, ನಟಿ, ಮಗು
    . ಚಂದ್ರಶೇಖರ್ : ಚಾರಕ . ಪ್ರವೀಣ್ ಕೆ. ಪಿ.: ಮೇಳ
    . ಪರಿಮಳ : ಡಾಕ್ಟರ್ . ನಾರಾಯಣ ಸ್ವಾಮಿ ಸಿ.: ಇನ್ಸ್ಪೆಕ್ಟರ್
    . ಆದಿತ್ಯ : ಭಾಗವತ

    Share. Facebook Twitter Pinterest LinkedIn Tumblr WhatsApp Email
    Previous Articleವಿವಿಧ ರಾಜ್ಯಗಳ ಸಾಧಕರಿಗೆ “ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ” ಪ್ರದಾನ
    Next Article 2ನೇ ದಿನದ ಸುಮನಸ ರಂಗ ಹಬ್ಬ – ಅರುಂಧತೀ ಆಲಾಪ – ಕನ್ನಡ ನಾಟಕ
    roovari

    Add Comment Cancel Reply


    Related Posts

    ಕರ್ನಾಟಕ ನಾಟಕ ಅಕಾಡೆಮಿಯಿಂದ ತಿಂಗಳ ನಾಟಕ ಸಂಭ್ರಮ

    May 21, 2025

    ಬೆಳಗಾವಿಯ ಲೋಕಮಾನ್ಯ ರಂಗಮಂದಿರದಲ್ಲಿ ಪ್ರೇಕ್ಷಕರನ್ನು ರಂಜಿಸಿದ ‘ಶ್ರೀ ಕೃಷ್ಣ ಸಂಧಾನ’ ನಾಟಕ

    May 20, 2025

    ನಟನ ರಂಗಶಾಲೆಯಿಂದ ‘ರಂಗಭೂಮಿ ಡಿಪ್ಲೋಮಾ’ಗೆ ಆಹ್ವಾನ | ಮೇ 25

    May 20, 2025

    ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ‘ಮಕ್ಕಳ ರಂಗ ಹಬ್ಬ’ | ಮೇ 20  

    May 19, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.