ಮಂಗಳೂರು : ಇತ್ತೀಚೆಗೆ ನಿಧನರಾದ ಖ್ಯಾತ ಸಾಹಿತಿ ನಾ. ಡಿಸೋಜ ಇವರ ಶ್ರದ್ಧಾಂಜಲಿ ಸಭೆಯು ದಿನಾಂಕ 18 ಜನವರಿ 2025ರಂದು ಮಂಗಳೂರಿನ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಕಚೇರಿಯಲ್ಲಿ ನಡೆಯಿತು.
ಮಾತನಾಡಿದ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ನಾ. ಡಿ’ಸೋಜರವರ ಪ್ರಕೃತಿ ಜೊತೆ ಸಂಬಂಧ ಮತ್ತು ಬಡವ, ದೀನರನ್ನು ಹಿಂಸಿಸಿದ ಚಿತ್ರವನ್ನು ಅವರ ಕೃತಿಗಳಲ್ಲಿ ವರ್ಣಿಸಿದ ಬಗೆ, ಮಕ್ಕಳ ಸಾಹಿತ್ಯದಲ್ಲಿ ಅವರ ಆಸಕ್ತಿಗಳ ಬಗ್ಗೆ ಮಾತಾನಾಡಿದರು.
ಇದೇ ಸಂದರ್ಭದಲ್ಲಿ ದೈವಾಧೀನರಾದ ಕೊಂಕಣಿ ಸಾಹಿತಿಗಳಾದ ಶ್ರೀ ಲುವಿಸ್ ಡಿ. ಅಲ್ಮೆಡಾ ಮತ್ತು ಶ್ರೀ ಎಮ್. ಪಿ. ರೊಡ್ರಿಗಸ್ ಇವರಿಗೂ ಶ್ರದ್ದಾಂಜಲಿ ಸಲ್ಲಿಸಲಾಯಿತು. ಸಭೆಯಲ್ಲಿ ಹಾಜರಿದ್ದ ಸರ್ವರೂ ಗೌರವಪೂರ್ವಕವಾಗಿ ನಾ. ಡಿ’ಸೋಜರವರಿಗೆ ಹೂಗಳನ್ನು ಅರ್ಪಿಸಿ ಶೃದ್ದಾಂಜಲಿ ನೀಡಿದರು. ದಿ. ನಾ. ಡಿಸೋಜರವರ ಜೀವನ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಅವರು ನೀಡಿದ ಕೊಡುಗೆಗಳ ಬಗ್ಗೆ ಕವಿ, ಸಾಹಿತಿಗಳಾದ ಶ್ರೀ ವಿಕ್ಟರ್ ಮಥಾಯಸ್(ವಿತೊರಿ ಕಾರ್ಕಳ) ಶ್ರದ್ಧಾಂಜಲಿ ಭಾಷಣವನ್ನು ಮಾಡಿದರು. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ರಾಜೇಶ್ ಜಿ., ಅಕಾಡೆಮಿ ಸದಸ್ಯರು, ಕೊಂಕಣಿ ಸಾಹಿತಿಗಳು, ಕೊಂಕಣಿ ಕವಿಗಳು, ಕೊಂಕಣಿ ಭಾಷಾ- ಭಾಂದವರು ಹಾಗೂ ನಾ. ಡಿಸೋಜರ ಅಭಿಮಾನಿಗಳು, ಶ್ರದ್ದಾಂಜಲಿ ಸಭೆಯಲ್ಲಿ ಹಾಜರಿದ್ದರು.