ಕೋಲಾರ : ಪಿಟೀಲು ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಕಲಾಶ್ರೀ ಪ್ರಶಸ್ತಿ ಪುರಸ್ಕೃತರಾದ ಕೋಲಾರ ನಗರದ ನಾದಸ್ವರ ವಿದ್ವಾನ್ ಆರ್. ಶ್ರೀರಾಮುಲು ದಿನಾಂಕ 04 ಜುಲೈ 2025ರಂದು ಅವರ ಸ್ವಗೃಹದಲ್ಲಿ ನಿಧನರಾದರು. ಇವರಿಗೆ 88 ವರ್ಷ ವಯಸ್ಸಾಗಿತ್ತು.
ಬಾಲ್ಯದಲ್ಲೇ ನಾದಸ್ವರದ ಬಗ್ಗೆ ಆಸಕ್ತಿ ಹೊಂದಿದ್ದ ಇವರು ಕೋಲಾರ ಕೃಷ್ಣಮೂರ್ತಿ, ರಾಮರಾಯಲು, ಟಿ.ಆರ್. ಗಂಗಾಧರ೦, ಕುಂಭಕೋಣಂ ಸ್ವಾಮಿ ಅಯ್ಯರ್ ಮುಂತಾದ ಗುರುಗು ಮಾರ್ಗದರ್ಶದಲ್ಲಿ ಸಂಗೀತ ಶಿಕ್ಷಣ ಪಡೆದರು. ಆ ನಂತರ ಸಭೆ-ಸಮಾರಂಭ-ಶುಭಕಾರ್ಯಗಳಲ್ಲಿ ನಾದಸ್ವರ ನುಡಿಸಿದರು. ಕರ್ನಾಟಕದಾದ್ಯಂತ ಮಾತ್ರವಲ್ಲದೆ, ಕಾಣಿದಾಕಂ, ಚಿತ್ತೂರು ಮುಂತಾದ ಹಲವಾರು ಹೊರರಾಜ್ಯಗಳಲ್ಲೂ ನಾದಸ್ವರ ಕಛೇರಿ ನೀಡಿದ ಹೆಗ್ಗಳಿಕೆ ಹೊಂದಿದ್ದರು.
ಇವರು ಟಿ. ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಕರ್ನಾಟಕ ಕಲಾಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು..
Subscribe to Updates
Get the latest creative news from FooBar about art, design and business.
Previous Articleಬಡಗ ಎಕ್ಕಾರಿನ ಸರಕಾರಿ ಪ್ರೌಢ ಶಾಲೆಯಲ್ಲಿ ಉದ್ಘಾಟನೆಗೊಂಡ ಯಕ್ಷಶಿಕ್ಷಣ