ಕಾರ್ಕಳ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯಕ್ಷ ರಂಗಾಯಣ ಕಾರ್ಕಳ ಆಯೋಜಿಸುವ ತಿಂಗಳ ಕಾರ್ಯಕ್ರಮ ‘ನಾಟಕದ ಮಾತು ಕತೆ’ ಜಾಗತಿಕ ನೆಲೆಯ ನಾಟಕ ಸಾಹಿತ್ಯ ಕೃತಿಗಳನ್ನು ಪರಿಚಯಿಸುವ ಉಪನ್ಯಾಸ ಹಾಗೂ ಕಥನ ಮಾಲಿಕೆ ಕಾರ್ಯಕ್ರಮವು ದಿನಾಂಕ 25 ಅಕ್ಟೋಬರ್ 2025ರ ಶನಿವಾರ ಸಂಜೆ ಘಂಟೆ 4.00 ರಿಂದ 6.00ರ ವರೆಗೆ ಕಾರ್ಕಳದ ಕೋಟಿ ಚೆನ್ನಯ ಥೀಂ ಪಾರ್ಕ್ ಆವರಣದಲ್ಲಿ ನಡೆಯಲಿದೆ.
ಇದು ಈ ಸರಣಿಯ 6 ನೇ ಉಪನ್ಯಾಸವಾಗಿದ್ದು, ಕಾರ್ಯಕ್ರಮದಲ್ಲಿ ಉಪನ್ಯಾಸದ ಬಿ. ಆರ್. ವೆಂಕಟರಮಣ ಐತಾಳ ಇವರು ಸೋಫೋಕ್ಲಿಸ್ ಮಹಾಕವಿಯ ‘ಈಡಿಪಸ್ ನಾಟಕಗಳು’ ಕುರಿತು ಮಾತನಾಡಲಿದ್ದಾರೆ.
