ಪುತ್ತೂರು : ನೃತ್ಯೋಪಾಸನಾ ಕಲಾ ಅಕಾಡೆಮಿ(ರಿ) ಪುತ್ತೂರು ಇದರ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಕಾರದಲ್ಲಿ ಆಯೋಜಿಸಿದ ‘ನಾಯಕಾ-ನಾಯಿಕಾ ಭಾವ’ ಒಂದು ದಿನದ ಕಾರ್ಯಗಾರವು ದಿನಾಂಕ 26-05-2024 ರಂದು ಪುತ್ತೂರಿನ ಬರೆಕರೆ ವೆಂಕಟರಮಣ ಸಭಾಭವನದಲ್ಲಿ ನಡೆಯಿತು.
ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಹುಬ್ಬಳ್ಳಿಯ ವಿದುಷಿ ಡಾ.ಸಹನಾ ಪ್ರದೀಪ್ ಭಟ್ ಭಾಗವಹಿಸಿದ್ದರು. ನೃತ್ಯಗುರು ವಿದುಷಿ ಶಾಲಿನಿ ಆತ್ಮಭೂಷಣ್ ಎಲ್ಲರನ್ನು ಸ್ವಾಗತಿಸಿ, ನಿರೂಪಿಸಿ, ಶ್ರೀದೇವಿ ಕೋಟೆ ಪ್ರಾರ್ಥಿಸಿದರು. ಕಾರ್ಯಾಗಾರದಲ್ಲಿ ಪುತ್ತೂರು ಸಹಿತ ವಿವಿಧ ಕಡೆಗಳ ವಿದ್ಯಾರ್ಥಿಗಳು ಪಾಲ್ಗೊಂಡರು. ದಿನಪೂರ್ತಿ ನಡೆದ ಕಾರ್ಯಗಾರದಲ್ಲಿ ಡಾ. ಸಹನಾ ಪ್ರದೀಪ್ ಭಟ್ ಅವರು ‘ನಾಯಕಾ-ನಾಯಿಕಾ ಭಾವ’ ಕುರಿತು ಅಭಿನಯ, ಸಂವಾದ, ಪ್ರಶೋತ್ತರ ನಡೆಸಿಕೊಟ್ಟರು.