ಪುತ್ತೂರು : ಶ್ರೀ ಶಾರದಾ ಹಿಂದೂಸ್ತಾನಿ ಸಂಗೀತ ವಿದ್ಯಾಲಯ ನೆಹರು ನಗರ ಪುತ್ತೂರು ಇದರ 16ನೇ ವಾರ್ಷಿಕೋತ್ಸವದ ಪ್ರಯುಕ್ತ ‘ನಾದ ಗುಂಜನ್’ ಸಂಗೀತ ಕಾರ್ಯಕ್ರಮವನ್ನು ದಿನಾಂಕ 31 ಆಗಸ್ಟ್ 2025ರಂದು ಪೂರ್ವಾಹ್ನ 10-30 ಗಂಟೆಗೆ ಪುತ್ತೂರಿನ ಮಾತೃಛಾಯಾದಲ್ಲಿ ಹಮ್ಮಿಕೊಳ್ಳಲಾಗಿದೆ.
ವಿದ್ಯಾಲಯದ ವಿದ್ಯಾರ್ಥಿಗಳಿಂದ ಹಾಗೂ ಶಿಕ್ಷಕರಿಂದ ಪ್ರಸ್ತುತಗೊಳ್ಳುವ ಸಂಗೀತ ಕಾರ್ಯಕ್ರಮಕ್ಕೆ ಕುಮಾರ ಅನ್ಮೋಲ್ ಕೆ.ವಿ., ಸುಮನ್ ದೇವಾಡಿಗ ಮತ್ತು ವಿನೋದ್ ಭಂಡಾರಿ ತಬಲಾದಲ್ಲಿ, ಶ್ರೀಮತಿ ಸುಮನಾ ಪ್ರಭು ಮತ್ತು ಗಣೇಶ್ ಆಚಾರ್ಯ ಸಂವಾದಿನಿಯಲ್ಲಿ ಸಹಕರಿಸಲಿದ್ದಾರೆ.