ಕಾಸರಗೋಡು : ವೀಣಾವಾದಿನಿ ಪ್ರಸ್ತುತ ಪಡಿಸುವ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರವನ್ನು ದಿನಾಂಕ 09ರಿಂದ 11 ಮೇ 2025ರವರೆಗೆ ಪ್ರತಿದಿನ 9-30ರಿಂದ 4-00 ಗಂಟೆಗೆ ತನಕ ಬಳ್ಳಪದವು ನಾರಾಯಣೀಯಂ ಕ್ಯಾಂಪಸ್ ನಲ್ಲಿ ಆಯೋಜಿಸಲಾಗಿದೆ.
ಯೋಗೀಶ ಶರ್ಮ ಬಳ್ಳಪದವು ಇವರಿಂದ ಕರ್ನಾಟಕ ಹಾಡುಗಾರಿಕೆ, ಚೇರ್ತಲ ಜಿ. ಕೃಷ್ಣಕುಮಾರ್ ಮತ್ತು ಕಲ್ಲೇಕುಲಂಗರ ಉಣ್ಣಿಕೃಷ್ಣನ್ ಇವರಿಂದ ಮೃದಂಗಂ, ಕುಮಾರಿ ರೆತ್ನಾಶ್ರೀ ಅಯ್ಯರ್ ಇವರಿಂದ ತಬಲಾ ಮತ್ತು ತಿರುವಿಜ್ ವಿಜು ಎಸ್. ಆನಂದ್, ಪ್ರಭಾಕರ ಕುಂಜಾರು ಮತ್ತು ಕುಮಾರಿ ಧನಶ್ರೀ ಶಬರಾಯ ಇವರಿಂದ ಕರ್ಣಾಟಿಕ್ ವಯೋಲಿನ್ ಬಗ್ಗೆ ಕಾರ್ಯಾಗಾರವನ್ನು ನಡೆಸಿಕೊಡಲಿದ್ದಾರೆ.