05 ಫೆಬ್ರವರಿ 2023, ಮಂಗಳೂರು: ಕೃಷ್ಣ ಗಾನ ಸುಧಾ ಸಂಗೀತ ವಿದ್ಯಾಲಯ ಮಣ್ಣಗುಡ್ಡ, ಮಂಗಳೂರು ತನ್ನ ಸ್ಥಾಪನೆಯ 20ನೆ ವರ್ಷಾಚರಣೆಯ ಪ್ರಯುಕ್ತ ಶ್ರೀ ರಾಮಕೃಷ್ಣ ಮಠ, ಮಂಗಳೂರು ಇವರ ಸಹಯೋಗದೊಂದಿಗೆ ಫೆಬ್ರವರಿ 5 ನೇ ತಾರೀಖಿನಂದು ರಾಮಕೃಷ್ಣ ಮಠದ ಶ್ರೀ ವಿವೇಕಾನಂದ ಸಭಾಂಗಣದಲ್ಲಿ “ನಾದ ವಿಂಶತಿ ” ಅನ್ನುವ ಕರ್ನಾಟಕ ಶಾಸ್ತ್ರೀಯ ಸಂಗೀತದ ಕಛೇರಿಯನ್ನು ಆಯೋಜಿಸಿತ್ತು .ಚೆನ್ನೈನ ಪ್ರಸಿದ್ಧ ಕಲಾವಿದರಾದ ವಿದ್ವಾನ್ ಶ್ರೀ ಅಭಿಷೇಕ್ ರಘುರಾಮನ್ ಇವರ ಕಛೇರಿಗೆ ಪಕ್ಕವಾದ್ಯ ಕಲಾವಿದರಾಗಿ ವಯೊಲಿನ್ ನಲ್ಲಿ ವಿದ್ವಾನ್ ಶ್ರೀ ವಿಠ್ಠಲ್ ರಂಗನ್, ಮೃದಂಗದಲ್ಲಿ ವಿದ್ವಾನ್ ಶ್ರೀ ಪತ್ರಿ ಸತೀಶ್ ಕುಮಾರ್ ಹಾಗೂ ತಬಲಾದಲ್ಲಿ ಪಂಡಿತ್ ಶ್ರೀ ಯೋಗೇಶ್ ಶಂಸಿ ಸಹಕರಿಸಿದರು.ಮೂರುವರೆ ಗಂಟೆಗಳ ಕಾಲ ನಡೆದ ಈ ಕಛೇರಿ ನೆರೆದಿದ್ದ ಸುಮಾರು 650 ಕ್ಕೂ ಮಿಕ್ಕಿ ಸಂಗೀತಾಭಿಮಾನಿಗಳ ಮನ ಸೂರೆಗೊಂಡಿತು.ಇದೆ ಸಂದರ್ಭದಲ್ಲಿ ಶ್ರೀ ಕೃಷ್ಣ ಗಾನ ಸುಧಾ ಸಂಗೀತ ವಿದ್ಯಾಲಯದ ರೂವಾರಿ ದಿ.ಶ್ರೀ ಪುತ್ತಿಗೆ ಲಕ್ಷ್ಮೀನಾರಾಯಣ ಉಪಾಧ್ಯಾಯ ಸಂಸ್ಮರಣಾ ಪ್ರಶಸ್ತಿಯನ್ನು ಪೆರ್ಣಂಕಿಲದ ವಿಧುಷಿ ಶ್ರೀಮತಿ ಮಾಧವಿ ಎಸ ಭಟ್ ಇವರಿಗೆ ಪ್ರಧಾನ ಮಾಡಲಾಯಿತು.ವೇದಿಕೆಯಲ್ಲಿ ಅತಿಥಿಗಳಾಗಿ ರಾಮಕೃಷ್ಣ ಮಠದ ಶ್ರೀ ರಘುರಾಮಾನಂದ ಸ್ವಾಮೀಜಿ, ಕಲಾವಿದರಾದ ವಿದ್ವಾನ್ ಶ್ರೀ ವಿಠ್ಠಲ್ ರಾಮಮೂರ್ತಿ , ವಿದ್ಯಾಲಯದ ಪದಾಧಿಕಾರಿಗಳು ಹಾಗೂ ಸಂಗೀತ ಗುರುಗಳಾದ ಶ್ರೀ ಯತಿರಾಜ್ ಆಚಾರ್ಯ ಉಪಸ್ಥಿತರಿದ್ದರು.ಶ್ರೀ ಪ್ರಶಾಂತ್ ಉಪಾಧ್ಯಾಯ ಕಾರ್ಯಕ್ರಮವನ್ನು ನಿರೂಪಿಸಿದರು.