ಮಂಗಳೂರು : ಸಂಗೀತ ಪರಿಷತ್ ಮಂಗಳೂರು (ರಿ.) ಸಂಸ್ಥೆಯ ಆಶ್ರಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ದಿನಾಂಕ 01 ಮಾರ್ಚ್ 2026ರಂದು ಮಂಗಳೂರಿನ ಕದ್ರಿ ಕಂಬಳ ರಸ್ತೆಯಲ್ಲಿರುವ ಗೋಕುಲ್ ರೆಸಿಡೆನ್ಸಿಯಲ್ಲಿ ‘ನಾದಾಲಯ’ ಗೃಹ ಸಂಗೀತ ಕಛೇರಿ ನಡೆಯಲಿದೆ.
ಸಂಜೆ 4-00 ಗಂಟೆಗೆ ಸರ್ಕಾರಿ ಅಭಿಯೋಜಕ ಮೋಹನ್ ಕುಮಾರ್ ಬಿ. ಇವರು ಈ ಕಾರ್ಯಕ್ರಮ ಉದ್ಘಾಟಿಸಲಿದ್ದು, ಯೆನೆಪೋಯ ಮೆಡಿಕಲ್ ಕಾಲೇಜಿನ ಕಮ್ಯುನಿಟಿ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ. ಅಕ್ಷಯ್ ಕೆ.ಎಂ. ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಗಂಟೆ 4-15ಕ್ಕೆ ಮಂಗಳೂರಿನ ದೀಕ್ಷಿತಾ ಎಂ. ಶೇಟ್ ಇವರಿಂದ ವೀಣಾವಾದನ ನಡೆಯಲಿದ್ದು, ಸುರತ್ಕಲ್ಲಿನ ಕುಮಾರಿ ಸುದೀಕ್ಷಾ ಆರ್ೆ. ಇವರು ಮೃದಂಗದಲ್ಲಿ ನೆರವಾಗುವರು. ಗಂಟೆ 4-45ಕ್ಕೆ ಉಡುಪಿಯ ಕುಮಾರಿ ಪ್ರಜ್ಞಾ ಅಡಿಗ ಇವರಿಂದ ಪ್ರಧಾನ ಕಛೇರಿ ನಡೆಯಲಿದ್ದು, ಇವರಿಗೆ ಪಿಟೀಲಿನಲ್ಲಿ ಕುಮಾರಿ ಮಹತೀ ಕೆ. ಕಾರ್ಕಳ, ಮೃದಂಗದಲ್ಲಿ ಜಿ.ಎನ್. ಕೃಷ್ಣಪವನ್ ಕುಮಾರ್ ಪಕ್ಕವಾದ್ಯ ಸಹಕಾರ ನೀಡಲಿದ್ದಾರೆ. ಕಲಾಭಿಮಾನಿಗಳಿಗೆ ಉಚಿತ ಪ್ರವೇಶ ಇರುತ್ತದೆ.

