ಧಾರವಾಡ : ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್, ರಂಗಾಯಣ ಮತ್ತು ಕುರ್ತಕೋಟಿ ಮೆಮೊರಿಯಲ್ ಟ್ರಸ್ಟ್ ಇವುಗಳ ಸಂಯುಕ್ತ ಆಶ್ರಯದಲ್ಲಿ ‘ನಾಕುತಂತಿ – ಚಿನ್ನದ ಹಬ್ಬ’ ಬೇಂದ್ರೆಯವರಿಗೆ ಜ್ಞಾನ ಪೀಠ ಪ್ರಶಸ್ತಿ ಸಿಕ್ಕ 50ನೇ ವರ್ಷದ ಸಂಭ್ರಮವನ್ನು ದಿನಾಂಕ 08 ನವೆಂಬರ್ 2024ರಂದು ಬೆಳಿಗ್ಗೆ 10-00 ಗಂಟೆಗೆ ಧಾರವಾಡದ ರಂಗಾಯಣ ಆವರಣದಲ್ಲಿರುವ ಸಾಂಸ್ಕೃತಿಕ ಸಮುಚ್ಚಯದಲ್ಲಿ ಆಯೋಜಿಸಲಾಗಿದೆ.
ಈ ಕಾರ್ಯಕ್ರಮವನ್ನು ಶ್ರೀ ಸುನಾಥ ದೇಶಪಾಂಡೆ ಇವರು ಉದ್ಘಾಟನೆ ಮಾಡಲಿದ್ದು, ಡಾ. ರಾಜು ತಾಳಿಕೋಟಿ, ಶ್ರೀಮತಿ ಪುನರ್ವಸು ಬೇಂದ್ರೆ ಮತ್ತು ಡಾ. ರಮಾಕಾಂತ್ ಜೋಶಿ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಗೋಷ್ಠಿ 1ರ ಪ್ರಬಂಧ ಮಂಡನೆಯಲ್ಲಿ ಡಾ. ಪ್ರಕಾಶ ಗರುಡ ಇವರಿಂದ ಬೇಂದ್ರೆಯವರ ಜ್ಞಾನಪೀಠ ಭಾಷಣ ಮತ್ತು ಶ್ರೀ ಆನಂದ ಝುಂಜರವಾಡ ಇವರಿಂದ ‘ನಾಕುತಂತಿ’ ವೈಶ್ವಿಕ ಆಶಯ ಹಾಗೂ ಗೋಷ್ಠಿ 2ರ ಪ್ರಬಂಧ ಮಂಡನೆಯಲ್ಲಿ ಡಾ. ಕೃಷ್ಣ ಕಟ್ಟಿ ಇವರಿಂದ ‘ನಾಕುತಂತಿ’ ಆರ್ಷೇಯ ದರ್ಶನಗಳು ಮತ್ತು ಡಾ. ಶ್ರೀರಾಮ ಭಟ್ ಇವರಿಂದ ‘ದ.ರಾ. ಬೇಂದ್ರೆ ಕವಿತೆಯಲ್ಲಿ ತತ್ವಜ್ಞಾನ’ದ ಕುರಿತು ವಿಷಯ ಮಂಡನೆ ನಡೆಯಲಿದೆ.