ಹಂಗಾರಕಟ್ಟೆ : ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ – ಐರೋಡಿ ಇದರ ಸಂಸ್ಕೃತಿ ಸಂಭ್ರಮದಲ್ಲಿ ‘ಯಕ್ಷ ವರ್ಷ’ ಕಾರ್ಯಕ್ರಮದಡಿ ಕಲಾಪೀಠ ಕೋಟ ಸಂಯೋಜನೆಯಲ್ಲಿ ಧ್ವಜಪುರದ ನಾಗಪ್ಪಯ್ಯ ವಿರಚಿತ “ನಳ ದಮಯಂತಿ” ಯಕ್ಷಗಾನ ಪ್ರದರ್ಶನವು ಶ್ರೀ ಕೆ.ನರಸಿಂಹ ತುಂಗ ಇವರ ನಿರ್ದೇಶನದಲ್ಲಿ ದಿನಾಂಕ 15 ಜುಲೈ 2025ರ ಮಂಗಳವಾರ ಸಂಜೆ ಘಂಟೆ 6:00ಕ್ಕೆ ನಡೆಯಲಿದೆ.
ಗುಂಡ್ಮಿ-ಸಾಲಿಗ್ರಾಮದ ಸದಾನಂದ ರಂಗ ಮಂಟಪದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಸರ್ವಶ್ರೀಗಳಾದ ಉದಯಕುಮಾರ ಹೊಸಾಳ, ಗಣೇಶ ಶೆಣೈ, ವಾಗ್ವಿಲಾಸ ಭಟ್ಟ, ರಾಘವೇಂದ್ರ ಐತಾಳ, ಅಭಿನವ ತುಂಗ, ಮಹಾಲಕ್ಷ್ಮೀ ಸೋಮಯಾಜಿ, ಅನುಷಾ ಉರಾಳ, ಅನಂತ ನಾವುಡ, ಅನುಪ ಉರಾಳ, ಪುಣ್ಯವತಿ ನಾವುಡ, ಸಾತ್ವಿಕ, ಧನುಶ್ರೀ, ಇಂಚರ, ಲಿಖಿತಾ, ನೂತನ, ಈಶಾನಿ, ತನಿಷಾ, ಮನೋಮಯ್ ಭಾಗವಹಿಸಲಿದ್ದಾರೆ.

