ಸುರತ್ಕಲ್ : ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತು ಇದರ ಸಹಭಾಗಿತ್ವದಲ್ಲಿ ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿ (ರಿ.) ಇದರ ‘ನಲ್ವತ್ತರ ನಲಿವು -29’ನೇ ಸರಣಿ ಕಾರ್ಯಕ್ರಮವನ್ನು ದಿನಾಂಕ 20 ಡಿಸೆಂಬರ್ 2025ರಂದು ಸಂಜೆ ಗಂಟೆ 5-30ಕ್ಕೆ ನಾಟ್ಯಾಂಜಲಿ ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ.ಪಿ. ಶ್ರೀನಾಥ ಇವರು ಉದ್ಘಾಟನೆ ಮಾಡಲಿದ್ದಾರೆ. ಮೂಡುಬಿದಿರೆಯ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ರಂಗಮಾಂತ್ರಿಕ ಡಾ. ಜೀವನ್ ರಾಂ ಸುಳ್ಯ ಇವರ ಸಂಯೋಜನೆಯಲ್ಲಿ ‘ಕನ್ನಡ ಗಾನ ಗುಚ್ಛ’ ಪ್ರಸ್ತುತಗೊಳ್ಳಲಿದೆ. ಡಾ. ಜೀವನ್ ರಾಂ ಸುಳ್ಯ, ವಿದ್ವಾನ್ ಚಿನ್ಮಯ್ ಕೆ. ಭಟ್, ಮಮತಾ ಕಲ್ಮಕಾ, ವಿದ್ವಾನ್ ವಿನೋದ್ ಕೆ.ಪಿ., ಮನುಜ ನೇಹಿಗ ಸುಳ್ಯ, ಸಮನ್ವಿತ್ ಬೆಳ್ತಂಗಡಿ, ಸಮನ್ವಿತ ಹುಬ್ಬಳ್ಳಿ, ನಿಶ್ಮಿತಾ ಬೆಂಗಳೂರು, ಕೃಪಾ ನಾಯಕ್ ತುಮಕೂರು ಮುಂತಾದ ಕಲಾವಿದರು ಭಾಗವಹಿಸಲಿದ್ದಾರೆ.

