ಕುಂದಾಪುರ : ಕುಂದಾಪುರ ಪರಿಸರದ ಅವಿಸ್ಮರಣೀಯ ಸ್ಥಳ ಮತ್ತು ಸಂಸ್ಕೃತಿಯ ಪ್ರತೀಕವನ್ನು ಬಿಂಬಿಸುವ ‘ನಮ್ ಕುಂದಾಪ್ರ’ ಚಿತ್ರಕಲಾ ಪ್ರದರ್ಶನವು ವಿಶೇಷವಾಗಿದ್ದು: ನಮ್ಮ ಮಣ್ಣಿನ ಗುಣವನ್ನು ಅರ್ಥೈಸುವುದರೊಂದಿಗೆ, ಕಲಾಭ್ಯಾಸಗೈಯುವ ವಿದ್ಯಾರ್ಥಿಯರಿಗೆ ಕಲಾ ವೇದಿಕೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಚಿತ್ರಕಲಾ ಪ್ರದರ್ಶನವನ್ನು ಏರ್ಪಡಿಸಲಾಗಿದೆ.
ದಿನಾಂಕ 16 ಆಗಸ್ಟ್ 2025 ಶನಿವಾರ ಬೆಳಿಗ್ಗೆ ಗಂಟೆಗೆ 10-00ಕ್ಕೆ ಕುಂದಾಪುರದ ಹಳೆ ಬಸ್ ಸ್ಟಾಂಡ್ ಬಳಿ ಇರುವ ತ್ರಿವರ್ಣ ಕಲಾ ಗ್ಯಾಲರಿಯಲ್ಲಿ ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ಪ್ರಾಂಶುಪಾಲರಾದ ಶ್ರೀ ಶರಣ ಕುಮಾರರವರು ಉದ್ಘಾಟಿಸಲಿದ್ದಾರೆ. ಅತಿಥಿ ಅಭ್ಯಾಗತರಾಗಿ ಕುಂದಾಪುರದ ಓಕ್‌ವುಡ್ ಇಂಡಿಯನ್ ಸ್ಕೂಲ್ ಮ್ಯಾನೆಜ್ಮೆಂಟಿನ ಜಂಟಿ ಕಾರ್ಯದರ್ಶಿ ಶ್ರೀಮತಿ ನೀತಾ ಶೆಟ್ಟಿ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾದ ಶ್ರೀ ಸುಬ್ರಹ್ಮಣ್ಯ ಶೆಟ್ಟಿ ಹಾಗೂ ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ಕುಂದಾಪುರದ ಅಧ್ಯಕ್ಷರಾದ ಶ್ರೀ ಕಿಶೋರ್ ಕುಮಾರ್‌ರವರು ಉಪಸ್ಥಿತಲಿದ್ದು, ಕಲಾಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ.
ಭಾಗವಹಿಸುವ ಕಲಾ ವಿದ್ಯಾರ್ಥಿಗಳು : ಕುಂದಾಪುರ, ಮಣಿಪಾಲ ಮತ್ತು ಆನ್ ಲೈನ್ ತ್ರಿವರ್ಣ ಕಲಾ ತರಗತಿಯ 18 ವರ್ಷದೊಳಗಿನ (ಕಿರಿಯರ ವಿಭಾಗ) ಆಯ್ದ 30 ಕಲಾ ವಿದ್ಯಾರ್ಥಿಯರ ಈ ಕಲಾಪ್ರದರ್ಶನದಲ್ಲಿ ಅದ್ವಿತ್ ಕುಮಾರ್ ಆರ್., ಆರಾಂಶ್ ಆರ್. ಪೂಜಾರಿ, ಆದ್ಯಾ ಸುರೇಶ್, ಎ. ನಿಯತಿ ಪೈ, ಅಶುತೋಷ್ ಎಂ. ನಾಯಕ್, ಧಕ್ಷರಾಜ್, ದೇವಿಕಾ ಉಡುಪ, ಗ್ರಹಿತ್, ಜೋರ್ಡನ್ ಕೋರ್ಡ, ಕೃತಿ ಕೆ. ದೇವಾಡಿಗ, ಮನೀಷ್ ಯು. ಆಚಾರ್ಯ, ನಿರೀಕ್ಷಾ ಎಸ್. ದೇವಾಡಿಗ, ನಿಶ್ಚಿತಾ ವಿ. ಹರಗನಹಳ್ಳಿ, ಪ್ರಣೀತ್ ಶೆಟ್ಟಿ, ಪ್ರತ್ಯುಷಾಜೆ ಕಿಣಿ, ರಿಶುಜೆ ಶೆಟ್ಟಿ, ಸಾನ್ವಿ ಎಲ್. ಪೂಜಾರಿ, ಸಾನಿಧ್ಯ ಎಸ್. ನಾಯ್ಕ್, ಸಾರ್ಥಕ್ ಎಸ್, ಸಾತ್ವಿಕ್ ಕೆ.ಆರ್., ಶಿಶಿರ್ ಶ್ಯಾನುಭಾಗ್, ಶ್ರೇಯನ್ ಪೂಜಾರಿ, ಸ್ಕಂಧ ಬಿ., ಸೋಹನ್ ಹೆಗ್ಡೆ, ಸ್ಮೃತಿ ತುಂಗಾ ಪಿ., ಶ್ರೀಲತಾ ಶೆಣೈ, ಸುಪರ್ಣ ಆರ್. ಸುವರ್ಣ, ತನುಶ್ರೀ, ಯಕ್ಷತ್ ಶೆಟ್ಟಿ, ಯುಕ್ತ ಎಸ್. ಕೋಟ್ಯಾನ್ ತಮ್ಮ ಅಭಿಮಾನವನ್ನು ಕೃತಿಯ ಮೂಲಕ ಅಭಿವ್ಯಕ್ತಪಡಿಸಿದ್ದಾರೆ.
ರಚಿಸಿರುವ ಕಲಾಕೃತಿಗಳು : ಪಂಚ ಗಂಗಾವಳಿ, ಸಿಧ್ದಿವಿನಾಯಕ, ಥೀಂ ಪಾರ್ಕ್, ಕೋಟಿಲಿಂಗೇಶ್ವರ, ಮೀನುಗಾರರು, ಕೋಡಿ ಬೀಚ್, ಬೇಸಾಯ, ನಾಗ ಬನ, ಪ್ರಾರ್ಥನೆ, ಕಾಂತಾರ, ಕೆಲಸಗಾರರು, ನಾಟ್ಯ, ಕುಂದೇಶ್ವರ, ಪಶುಪಾಲನೆ, ಹುಲಿವೇಷ, ಬ್ರಹ್ಮಲಿಂಗೇಶ್ವರ, ಕಟ್ಟೆ ಪೂಜೆ, ಸಂತೆ, ಗೂಡಂಗಡಿ, ವಿನಾಯಕ, ಕಂಬಳ, ಸುರ ಪಾನ, ಕೊಲ್ಲೂರು ಟೆಂಪಲ್, ಕೆರಾಡಿ ಟೆಂಪಲ್, ಗೊಂಬೆಯಾಟ, ನಂದಾ ದೀಪ, ಭಜನೆ, ಗಂಗಾರತಿ, ಟೆಂಪಲ್, ಗರಡಿ ಎಂಬ ಕಲಾಕೃತಿಗಳು 18 x 18 ಇಂಚಿನ ಅಕ್ರಾಲಿಕ್ ಕ್ಯಾನ್ವಾಸ್, ಜಲವರ್ಣ, ಚಾರ್ಕೋಲ್, ಮಿಶ್ರ ಮಾಧ್ಯಮದ ಶೇಡಿಂಗ್ಸ್ ನ ಒಟ್ಟು 30 ಕಲಾಕೃತಿಗಳು ಅನಾವರಣಗೊಳ್ಳಲಿದೆ.
ಕಲಾಪ್ರದರ್ಶನದ ವಿಶೇಷತೆಗಳು:-
* ತ್ರಿವರ್ಣ ಕಲಾ ಕುಂದಾಪುರ, ಮಣಿಪಾಲ, ಮತ್ತು ಆನ್ ಲೈನ್ ತರಗತಿಯಲ್ಲಿ ವಿದ್ಯಾಭ್ಯಾಸಗೈಯುವ 7ರಿಂದ 18 ವರುಷದವರ ಆಯ್ದ 30 ವಿದ್ಯಾರ್ಥಿಯರ 30 ಕಲಾಕೃತಿಗಳು.
* ಕಲಾವಿದ, ಮಾರ್ಗದರ್ಶಕ ಹರೀಶ್ ಸಾಗಾ ಮಾರ್ಗದರ್ಶನದಲ್ಲಿ ತ್ರಿವರ್ಣ ಕಲಾ ಕೇಂದ್ರದ ವಿದ್ಯಾರ್ಥಿಯರ 29ನೇ ಕಲಾಪ್ರದರ್ಶನ.
* ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಾರ್ವಜನಿಕರಿಂದ ಅತ್ತುತ್ತಮ ಕಲಾಕೃತಿಯನ್ನು ಆಯ್ಕೆ ಮಾಡಿ ಬಹುಮಾನ ಗೆಲ್ಲಿಸುವ ಅವಕಾಶ.
* ವಿದ್ಯಾರ್ಥಿಯರಿಗೆ ಅತ್ಯುತ್ತಮ ಕಲಾಕೃತಿ ಪ್ರಶಸ್ತಿ ಮತ್ತು ಅತ್ತುತ್ತಮ ಸಾರ್ವಜನಿಕರ ಆಯ್ಕೆಯ ಪ್ರಶಸ್ತಿ ಹಾಗೂ ಅದೃಷ್ಟದಂತಹ ಸ್ಪೂರ್ತಿದಾಯಕ ಪ್ರಶಸ್ತಿಗಳು.
ದಿನಾಂಕ 16 ಆಗಸ್ಟ್ 2025 ಶನಿವಾರದಿಂದ 18 ಆಗಸ್ಟ್ 2025ನೇ ಸೋಮವಾರದವರೆಗೆ ಬೆಳಿಗ್ಗೆ 10-00ರಿಂದ ಸಂಜೆ 7-30ರ ತನಕ ಸಾರ್ವಜನಿಕ ವೀಕ್ಷಣೆಗೆ ಮುಕ್ತ ಅವಕಾಶವನ್ನು ಕಲ್ಪಿಸಿಲಾಗಿದೆ.