Subscribe to Updates

    Get the latest creative news from FooBar about art, design and business.

    What's Hot

    ಕದ್ರಿ ಯಕ್ಷ ಮಂಜುಳಾ ಮಹಿಳಾ ಬಳಗದವರಿಂದ ‘ಯಕ್ಷಗಾನ ತಾಳಮದ್ದಳೆ’ | ಫೆಬ್ರವರಿ 24

    February 21, 2026

    ಕೋಟ ‘ಅಹರ್ನಿಶ’ದಲ್ಲಿ ‘ಯಕ್ಷ ಗಾನ ವೈಭವ’

    February 21, 2026

    ‘ಮಲಬಾರ್ ವಿಶ್ವರಂಗ ಪುರಸ್ಕಾರ-2026’ಕ್ಕೆ ಐವರು ಹಿರಿಯ ರಂಗಕರ್ಮಿಗಳು

    February 21, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ದಾವಣಗೆರೆಯ ಬಾಪೂಜಿ ಸಭಾಂಗಣದಲ್ಲಿ ‘ನಾಂದಿ ಆರಂಭೋತ್ಸವ’ | ಸೆಪ್ಟೆಂಬರ್ 15
    Drama

    ದಾವಣಗೆರೆಯ ಬಾಪೂಜಿ ಸಭಾಂಗಣದಲ್ಲಿ ‘ನಾಂದಿ ಆರಂಭೋತ್ಸವ’ | ಸೆಪ್ಟೆಂಬರ್ 15

    September 14, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ದಾವಣಗೆರೆ : ವೃತ್ತಿ ರಂಗಭೂಮಿ ರಂಗಾಯಣ ದಾವಣಗೆರೆ ಇದರ 2024-25ನೇ ಸಾಲಿನ ರಂಗ ಚಟುವಟಿಕೆಗಳ ‘ನಾಂದಿ ಆರಂಭೋತ್ಸವ’ವನ್ನು ದಿನಾಂಕ 15 ಸೆಪ್ಟೆಂಬರ್ 2024ರಂದು ದಾವಣಗೆರೆಯ ಮೆಡಿಕಲ್ ಕಾಲೇಜ್ ಆವರಣ, ಜೆ.ಜೆ.ಎಂ. ಬಾಪೂಜಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

    ಬೆಳಗ್ಗೆ 10-30 ಗಂಟೆಗೆ ‘ವರ್ತಮಾನ ವೃತ್ತಿ ರಂಗಭೂಮಿ : ಬಿಕ್ಕಟ್ಟು ಮತ್ತು ಪರಿಹಾರ’ ಎಂಬ ವಿಷಯದ ಬಗ್ಗೆ ರಾಜ್ಯಮಟ್ಟದ ವಿಚಾರ ಸಂಕಿರಣ ನಡೆಯಲಿದೆ. ಡಾ. ಪ್ರಕಾಶ ಗರುಡ ಇವರು ‘ನಾಟಕ ಕಂಪನಿ ಪರಂಪರೆ ಮತ್ತು ಪ್ರಯೋಗಶೀಲತೆ’, ಶ್ರೀ ಬಸವರಾಜ ಬೆಂಗೇರಿ ಇವರು ‘ಸಾಹಿತ್ಯ ಮತ್ತು ಸಂಗೀತ’ ಮತ್ತು ಶ್ರೀ ಅರುಣ್ ಸಾಗರ್ ಇವರು ‘ರಂಗ ಪರಿಕರ ಮತ್ತು ರಂಗಸಜ್ಜಿಕೆ” ಎಂಬ ವಿಷಯಗಳ ಬಗ್ಗೆ ಪ್ರಬಂಧ ಮಂಡನೆ ಮಾಡಲಿರುವರು. ಬಳಿಕ ರಂಗ ಗೀತೆಗಳ ಗಾಯನ ನಡೆಯಲಿದೆ.

    ಸಂಜೆ 4-00 ಗಂಟೆಗೆ ಸಾಣೇಹಳ್ಳಿಯ ಪೂಜ್ಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಇವರ ರಂಗ ಸಾನಿಧ್ಯದಲ್ಲಿ ಸಚಿವರಾದ ಶ್ರೀ ಎಸ್.ಎಸ್. ಮಲ್ಲಿಕಾರ್ಜುನ್ ಇವರು ಉದ್ಘಾಟನೆ ಮಾಡಲಿದ್ದಾರೆ. ಶಾಸಕರಾದ ಡಾ. ಶಾಮ ನೂರು ಶಿವ ಶಂಕರಪ್ಪ ಇವರ ಅಧ್ಯಕ್ಷತೆಯಲ್ಲಿ ನಾದಬ್ರಹ್ಮ ಹಂಸಲೇಖ ಇವರು ರಂಗಜ್ಯೋತಿ ಬೆಳಗುವರು. ಸಂಜೆ 6-00 ಗಂಟೆಗೆ ನಡೆಯಲಿರುವ ನಾಟಕ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಮಲ್ಲಿಕಾರ್ಜುನ ಕಡಕೋಳ ಇವರು ವಹಿಸಲಿದ್ದು, ಮಾನ್ಯ ಸಂಸದರಾದ ಶ್ರೀಮತಿ ಪ್ರಭಾ ಮಲ್ಲಿಕಾರ್ಜುನ ಇವರು ಉದ್ಘಾಟನೆ ಮಾಡಲಿರುವರು. ಸಭಾ ಕಾರ್ಯಕ್ರಮದ ಬಳಿಕ ಪಂಡಿತ ಪುಟ್ಟರಾಜ ಗವಾಯಿಗಳು ರಚಿಸಿರುವ ‘ಅಕ್ಕ ಮಹಾದೇವಿ’ ಎಂಬ ನಾಟಕವನ್ನು ಮಹಾದೇವ ಹೊಸೂರು ಇವರ ನಿರ್ದೇಶನದಲ್ಲಿ ಶ್ರೀ ಕುಮಾರೇಶ್ವರ ಕೃಪಾಪೋಷಿತ ಪಂಡಿತ ಪಂಚಾಕ್ಷರ ಗವಾಯಿಗಳ ನಾಟ್ಯ ಸಂಘ ತಂಡದವರು ಪ್ರಸ್ತುತ ಪಡಿಸಲಿದ್ದಾರೆ.

     

    Share. Facebook Twitter Pinterest LinkedIn Tumblr WhatsApp Email
    Previous Articleಶ್ರೀಮತಿ ದಿ. ಪುಟ್ಟಮ್ಮ ಮತ್ತು ದಿ. ಹೆಬ್ಬಾಲೆ ನಂಜಾಚಾರ್ ಜ್ಞಾಪಕಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮ
    Next Article ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ | ಸೆಪ್ಟೆಂಬರ್ 15
    roovari

    Comments are closed.

    Related Posts

    ವಿವೇಕಾನಂದ ಕಾಲೇಜಿನಲ್ಲಿ ಶಿವಾಜಿ ಜೀವನ ಚರಿತ್ರೆ ವಿಚಾರ ಸಂಕಿರಣ

    February 21, 2026

    ಪುಸ್ತಕ ವಿಮರ್ಶೆ | ಮಾಲತಿ ಪಟ್ಟಣಶೆಟ್ಟಿಯವರ ಮಕ್ಕಳ ಮೂರು ನಾಟಕಗಳು

    February 21, 2026

    ಇನ್ನೊಂದು ಗಿನ್ನೆಸ್ ದಾಖಲೆಗೆ ಸಜ್ಜಾಗುತ್ತಿದೆ ಮಾಂಡ್ ಸೊಭಾಣ್

    February 21, 2026

    ಕೊಡವ ಸಾಹಿತ್ಯ ಅಕಾಡೆಮಿಯಿಂದ 15 ಸಾಧಕರಿಗೆ ಗೌರವ ಪ್ರಶಸ್ತಿ

    February 21, 2026

    Comments are closed.

    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.