ಕಾಸರಗೋಡು : ಕಾಸರಗೋಡಿನ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಸ್ಥೆಯಾದ ರಂಗಚಿನ್ನಾರಿ ಕಾಸರಗೋಡು (ರಿ.) ಇದರ ಮಹಿಳಾ ಘಟಕ ‘ನಾರಿ ಚಿನ್ನಾರಿ’ಯ 9ನೇ ಸರಣಿ ಕಾರ್ಯಕ್ರಮ ‘ವರ್ಷ ರಿಂಗಣ’ ದಿನಾಂಕ 30-09- 2023 ಶನಿವಾರ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ನಡೆಯಲಿದೆ.
ಕಾಸರಗೋಡಿನ ಕರಂದಕ್ಕಾಡಿನಲ್ಲಿರುವ ಪದ್ಮಗಿರಿ ಕಲಾಕುಟೀರದಲ್ಲಿ ಈ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ. ಪುಸ್ತಕ ಬಿಡುಗಡೆಯನ್ನು ಮಂಗಳೂರಿನ ಬೆಸೆಂಟ್ ಮಹಿಳಾ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಿಕೆ ಮತ್ತು ಸಾಹಿತಿಯಾದ ಡಾ.ಮೀನಾಕ್ಷಿ ರಾಮಚಂದ್ರ ನೆರವೇರಿಸದ್ದಾರೆ. ನಾರಿ ಚಿನ್ನಾರಿಯ ಕಾರ್ಯಾಧ್ಯಕ್ಷರಾದ ಸವಿತಾ ಟೀಚರ್ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಗೃಹಿಣಿಯಾದ ಶ್ರೀಮತಿ ಸರೋಜಿನಿ ಕೆ.ಭಟ್ ಉಪಸ್ಥಿತರಿದ್ದು ಪ್ರಥಮ ಪ್ರತಿ ಸ್ವೀಕಾರ ಮಾಡಲಿರುವರು. ಇದೇ ಸಂದರ್ಭದಲ್ಲಿ, ಕಾಸರಗೋಡು ಸರಕಾರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಿಕೆ ಮತ್ತು ಕವಯತ್ರಿಯಾದ ಲಕ್ಷ್ಮೀ.ಕೆ ಹಾಗೂ ತುಳು ಜಾನಪದ ಕಲಾವಿದೆಯಾದ ಲಕ್ಷ್ಮೀ ಕುಂಬ್ಡಾಜೆ ಇವರಿಗೆ ಗೌರವಾರ್ಪಣೆ ನಡೆಯಲಿದೆ.
ಇದೇ ವೇದಿಕೆಯಲ್ಲಿ ಲೇಖಕಿ ಲಕ್ಷ್ಮೀ.ಕೆ ಇವರ ‘ನೀನಿಲ್ಲ…. ಇಲ್ಲಿ ನಾನು ಮಾತ್ರ’ ಕವನ ಸಂಕಲನ ಬಿಡುಗಡೆಗೊಳ್ಳಲಿದೆ. ಕಾವಯತ್ರಿ ಹಾಗೂ ಕತೆಗಾರ್ತಿಯಾದ ಸ್ನೇಹಲತಾ ದಿವಾಕರ್ ಪುಸ್ತಕ ಪರಿಚಯ ಮಾಡಲಿರುವರು.
ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮೇಧಾ.ಎನ್ ಇವರಿಂದ ಕನ್ನಡ ಭಾವಗೀತೆ, ಸ್ವಾತಿ ಲಕ್ಷ್ಮೀ ಇವರಿಂದ ಕೂಚುಪುಡಿ ನೃತ್ಯ, ಮಾಳವಿಕಾ ಇವರಿಂದ ಮಲಯಾಳಂ ಭಾವಗೀತೆ, ಚಂಚಲ್ ಎ.ಯು ಇವರಿಂದ ಕಳರಿ ಪಯಟ್ಟ್, ಪಲ್ಲವಿ ಇವರಿಂದ ಸ್ವರಚಿತ ಕವನ ವಾಚನ, ಅಭಿನಾ ಇವರಿಂದ ಶಾಸ್ತ್ರೀಯ ನೃತ್ಯ, ಲಕ್ಷ್ಮೀ ಕುಂಬ್ಡಾಜೆ ಇವರಿಂದ ತುಳು ಜಾನಪದ ಗೀತೆ ಹಾಗೂ ಜಯಂತಿ.ಕೆ ಇವರು ಕಥೆ ಹೇಳಲಿರುವರು.
ಈ ಕಾರ್ಯಕ್ರಮಕ್ಕೆ ರಂಗ ಚಿನ್ನಾರಿ ಹಾಗೂ ನಾರಿ ಚಿನ್ನಾರಿಯ ಅಧ್ಯಕ್ಷರು ಮತ್ತು ಸದಸ್ಯರು ಸರ್ವರಿಗೂ ಸ್ವಾಗತ ಬಯಸಿದ್ದಾರೆ.