ಬೆಂಗಳೂರು : ಎಂ.ಇ.ಎಸ್. ಕಲಾವೇದಿ ಇದರ ವತಿಯಿಂದ ‘ನಾಟಕೋತ್ಸವ 2024’ವನ್ನು ದಿನಾಂಕ 25 ಅಕ್ಟೋಬರ್ 2024ರಿಂದ 27 ಅಕ್ಟೋಬರ್ 2024ರವರೆಗೆ ಬೆಂಗಳೂರಿನ ಮಲ್ಲೇಶ್ವರಂ ಎಂ.ಇ.ಎಸ್. ಕಿಶೋರ ಕೇಂದ್ರದಲ್ಲಿ ಆಯೋಜಿಸಲಾಗಿದೆ.
ದಿನಾಂಕ 25 ಅಕ್ಟೋಬರ್ 2024ರಂದು ಸಂಜೆ 6-00 ಗಂಟೆಗೆ ಈ ನಾಟಕೋತ್ಸವವನ್ನು ಕರ್ನಾಟಕ ನಾಟಕ ಅಕಾಡೆಮಿ ಇದರ ಮಾಜಿ ಅಧ್ಯಕ್ಷರಾದ ಡಾ. ಬಿ.ವಿ. ರಾಜರಾಮ್ ಇವರು ಉದ್ಘಾಟನೆ ಮಾಡಲಿರುವರು. ಬಳಿಕ ಶರತ್ ಪರ್ವತವಾಣಿ ಇವರ ನಿರ್ದೇಶನದಲ್ಲಿ ‘ಒಂದು ವಿಲಯ ಕಥೆ’ ಕನ್ನಡ ನಾಟಕ ಪ್ರದರ್ಶನಗೊಳ್ಳಲಿದೆ.
ದಿನಾಂಕ 26 ಅಕ್ಟೋಬರ್ 2024ರಂದು ಹಿರಿಯ ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ರಂಗಸಮೂಹ ಮಂಚಿಕೇರಿ (ರಿ.) ತಂಡದವರು ಹುಲಗಪ್ಪ ಕಟ್ಟಿಮನಿ ಇವರ ನಿರ್ದೇಶನದಲ್ಲಿ ಅಭಿನಯಿಸುವ ಕನ್ನಡ ಸಾಮಾಜಿಕ ನಾಟಕ ‘ಕಾಲಚಕ್ರ’. ದಿನಾಂಕ 27 ಅಕ್ಟೋಬರ್ 2024ರಂದು ಪ್ರೊ. ಟಿ. ಆರ್. ಶೇಷಾದ್ರಿ ಅಯ್ಯಂಗಾರ್ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಶೃಂಗೇರಿಯ ನಾಟ್ಯಭಾರತೀ ತಂಡದವರು ಭಾಸ ಮಹಾ ಕವಿ ವಿರಚಿತ ಎಂ.ಕೆ. ಸುರೇಶ್ ಬಾಬು ಇವರ ನಿರ್ದೇಶನದಲ್ಲಿ ‘ಅಭಿಷೇಕ ನಾಟಕಮ್’ ಸಂಸ್ಕೃತ ನಾಟಕವನ್ನು ಅಭಿನಯಿಸಲಿದ್ದಾರೆ.