ಬೆಳಗಾವಿ : ರಂಗಸಂಪದ ಬೆಳಗಾವಿ ಪ್ರಸ್ತುತ ಪಡಿಸುವ ‘ಅಭಿಷೇಕ ಅಲಾಯನ್ಸ ನಾಟಕೋತ್ಸವ’ವನ್ನು ದಿನಾಂಕ 05ರಿಂದ 07 ಡಿಸೆಂಬರ್ 2025ರಂದು ಬೆಳಗಾವಿಯ ಲೋಕಮಾನ್ಯ ರಂಗ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ದಿನಾಂಕ 05 ಡಿಸೆಂಬರ್ 2025ರಂದು ಸಂಜೆ 6-00 ಗಂಟೆಗೆ ನಾಟಕೋತ್ಸವ ಉದ್ಘಾಟನೆಗೊಳ್ಳಲಿದ್ದು, ನೀನಾಸಮ್ ತಿರುಗಾಟ – 2025ರ ಹೊಸ ನಾಟಕ ಬಾನು ಮುಷ್ತಾಕ ಕಥೆ ಆಧಾರಿತ ‘ಹೃದಯದ ತೀರ್ಪು’ ನಾಟಕ ಪ್ರದರ್ಶನ ಡಾ. ಎಮ್. ಗಣೇಶ ಇವರ ರಂಗರೂಪ ಮತ್ತು ನಿರ್ದೇಶನದಲ್ಲಿ, ದಿನಾಂಕ 06 ಡಿಸೆಂಬರ್ 2025ರಂದು ಸಂಜೆ 6-30 ಗಂಟೆಗೆ ‘ಅವತಾರಣಮ್ ಭ್ರಾಂತಾಲಯಂ’ ನಾಟಕ ಪ್ರದರ್ಶನ ಜಿ. ಶಂಕರ್ ಪಿಳ್ಳೆ (ಮಲಯಾಳಂ) ಇವರ ಮೂಲ ಕೃತಿಯನ್ನು ನಾ. ದಾಮೋದರ ಶೆಟ್ಟಿ ಇವರು ಕನ್ನಡಕ್ಕೆ ಅನುವಾಡಿಸಿದ್ದು, ಶಂಕರ ವೆಂಕಟೇಶ್ವರ್ ಇವರ ನಿರ್ದೇಶನದಲ್ಲಿ ಪ್ರಸ್ತುತಗೊಳ್ಳಲಿದೆ. ದಿನಾಂಕ 07 ಡಿಸೆಂಬರ್ 2025ರಂದು ಸಂಜೆ 6-30 ಗಂಟೆಗೆ ಬೆಳಗಾವಿಯ ರಂಗಸಂಪದ ತಂಡ ಪ್ರಸ್ತುತ ಪಡಿಸುವ ‘ಸ್ಮರಿಸಿ ಬದುಕಿರೋ’ ಭಕ್ತಿಪೂರ್ಣ ನಾಟಕ ಡಾ. ಅರವಿಂದ ಕುಲಕರ್ಣಿ ಇವರ ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿದೆ.

