Subscribe to Updates

    Get the latest creative news from FooBar about art, design and business.

    What's Hot

    ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್‌ನ ಪ್ರಥಮ ವಾರ್ಷಿಕೋತ್ಸವ ಸಮಾರಂಭ

    February 26, 2026

    ಉಷಾ ಕೆ.ವಿ. ಇವರ ‘ವೇದಾಂತ’ ಹಾಗೂ ‘ಸ್ಪಂದನ’ ಕೃತಿಗಳ ಲೋಕಾರ್ಪಣಾ ಸಮಾರಂಭ

    February 26, 2026

    ಸುಮನಸಾ ಕೊಡವೂರು ನಾಟಕೋತ್ಸವ ರಂಗಹಬ್ಬ-14ರ ಎರಡನೇ ದಿನದ ಕಾರ್ಯಕ್ರಮ

    February 26, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ನಟನ ರಂಗಶಾಲೆಯ ರಂಗಭೂಮಿ ‘ಡಿಪ್ಲೊಮಾ 2023-24’ ಪ್ರವೇಶ ಪ್ರಕ್ರಿಯೆಗೆ ಅರ್ಜಿ ಆಹ್ವಾನ
    Drama

    ನಟನ ರಂಗಶಾಲೆಯ ರಂಗಭೂಮಿ ‘ಡಿಪ್ಲೊಮಾ 2023-24’ ಪ್ರವೇಶ ಪ್ರಕ್ರಿಯೆಗೆ ಅರ್ಜಿ ಆಹ್ವಾನ

    May 31, 2023Updated:August 19, 2023No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮೈಸೂರು: ನಟನ ರಂಗಶಾಲೆಯಲ್ಲಿ ರಂಗಭೂಮಿ ‘ಡಿಪ್ಲೊಮಾ 2023-24’ ಪ್ರವೇಶ ಪ್ರಕ್ರಿಯೆಗೆ ಅರ್ಜಿ ಆಹ್ವಾನಿಸಲಾಗಿದ್ದು ಒಂದು ವರ್ಷದ ಅಭಿನಯ ಮತ್ತು ರಂಗ ತರಬೇತಿಯ ಪ್ರವೇಶ ಪ್ರಕ್ರಿಯೆ ಮತ್ತು ಸಂದರ್ಶನ ಜೂನ್ 11 ರಂದು ನಡೆಯಲಿದೆ.
    ಮಂಡ್ಯ ರಮೇಶ್ ನೇತೃತ್ವದ ನಟನ ರಂಗಶಾಲೆಯು ಕಳೆದ ಅನೇಕ ವರ್ಷಗಳಿಂದ ರಂಗಭೂಮಿಯಲ್ಲಿ ನಿರಂತರ ಕ್ರಿಯಾಶೀಲವಾಗಿದ್ದು ರಂಗಭೂಮಿಯ ಅಧ್ಯಯನ, ಪ್ರಾತ್ಯಕ್ಷಿಕೆ, ಪ್ರಯೋಗ, ಪ್ರದರ್ಶನಗಳ ಮೂಲಕ ಶ್ರೇಷ್ಠತೆಯನ್ನು ಸಾಧಿಸುವುದರತ್ತ ಸತತವಾಗಿ ಪ್ರಯತ್ನ ಶೀಲವಾಗಿದೆ.
    ತನ್ನ ಚಟುವಟಿಕೆಯ ಭಾಗವಾಗಿ ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯದ ಮಾನ್ಯತೆಯಡಿಯಲ್ಲಿ 16ರಿಂದ 30ವರ್ಷದ ಒಳಗಿನ ಆಸಕ್ತ ಯುವಕ ಯುವತಿಯರಿಗೆ ಒಂದು ವರ್ಷದ ರಂಗಭೂಮಿ ಡಿಪ್ಲೊಮಾ ಕೋರ್ಸ್ ಅನ್ನು ನಡೆಸುತ್ತಿದ್ದು, 2023-24ನೇ ಸಾಲಿನ ಪ್ರವೇಶ ಪ್ರಕ್ರಿಯೆ ಮತ್ತು ಅಭ್ಯರ್ಥಿಗಳ ಸಂದರ್ಶನ ದಿನಾಂಕ 11-06-2023 ರಂದು ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಮೈಸೂರಿನ ರಾಮಕೃಷ್ಣ ನಗರದಲ್ಲಿರುವ ನಟನ ರಂಗಶಾಲೆಯಲ್ಲಿ ನಡೆಯಲಿದೆ.
    ಪ್ರತಿದಿನ ಸಂಜೆ 5.30ರಿಂದ 9ರ ವರೆಗೆ ತರಗತಿಗಳು ನಡೆಯಲಿದ್ದು, ಅಭಿನಯ, ರಂಗ ಸಿದ್ಧಾಂತ, ರಂಗ ಸಂಗೀತ, ಆಂಗಿಕ ಚಲನೆ, ಧ್ವನಿ ಬಳಕೆ, ಪ್ರಸಾಧನ, ಬೆಳಕು, ರಂಗ ವಿನ್ಯಾಸ, ಪರಿಕರ ನಿರ್ಮಾಣ, ರಂಗ ಇತಿಹಾಸ, ನಾಟಕ ತಯಾರಿ ಮತ್ತು ಪ್ರದರ್ಶನ.. ಹೀಗೆ ರಂಗಭೂಮಿಯ ಬೇರೆ ಬೇರೆ ಆಯಾಮಗಳ ಪರಿಚಯಾತ್ಮಕ ಪ್ರಾಯೋಗಿಕ ತರಗತಿಗಳು ನಡೆಯಲಿದೆ.
    ಕಳೆದ ಅನೇಕ ವರ್ಷಗಳಿಂದ ಕರ್ನಾಟಕದ ಬೇರೆ ಬೇರೆ ಭಾಗಗಳಿಂದ ವಿದ್ಯಾರ್ಥಿಗಳು ಆಗಮಿಸಿ ನಟನ ರಂಗಶಾಲೆಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ನಟನ ರಂಗಶಾಲೆಯಲ್ಲಿ ತರಬೇತಿ ಪಡೆದ ಸುಮಾರು 500ಕ್ಕೂ ಹೆಚ್ಚು ಕಲಾವಿದರು ದೇಶದಾದ್ಯಂತ ವಿವಿಧ ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
    ನೇರ ಸಂದರ್ಶನದ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಆಸಕ್ತ ಅಭ್ಯರ್ಥಿಗಳು ಮೇಲ್ಕಂಡ ದಿನಾಂಕ ದಂದೇ ಸಂದರ್ಶನದಲ್ಲಿ ಭಾಗವಹಿಸತಕ್ಕದ್ದು. ರಂಗಭೂಮಿಯನ್ನು ಗಂಭೀರವಾಗಿ ಅಭ್ಯಸಿಸಲು ಆಸಕ್ತಿ ಇರುವ ಅಭ್ಯರ್ಥಿಗಳು ಸಂಸ್ಥೆಯ ವೆಬ್‌ಸೈಟ್ (www.natanamysuru.org) ಅಥವಾ ಕಛೇರಿಯಲ್ಲಿ ನಿಗದಿತ ಶುಲ್ಕ ಪಾವತಿಸಿ ಅರ್ಜಿ ಪಡೆದು ಅಂಚೆ ಮುಖಾಂತರ ಅಥವಾ ನೇರವಾಗಿ ತಲುಪಿಸತಕ್ಕದ್ದು. ಆಡಿಷನ್ ಮತ್ತು ಪ್ರವೇಶಾತಿ ಕುರಿತ ಸೂಚನೆಗಳು ಮತ್ತು ಹೆಚ್ಚಿನ ಮಾಹಿತಿಗಳು ವೆಬ್‌ಸೈಟ್ ಅಲ್ಲಿ ಲಭ್ಯವಿದೆ.
    ಹೆಚ್ಚಿನ ಮಾಹಿತಿಗಾಗಿ 7259537777,9480468327,9845595505 ಈ ಸಂಖ್ಯೆಗಳನ್ನು ಸಂಪರ್ಕಿಸಬಹುದು .

    Share. Facebook Twitter Pinterest LinkedIn Tumblr WhatsApp Email
    Previous Articleಮಂಜೇಶ್ವರದಲ್ಲಿ ಚಿಣ್ಣರ ಚಿಲುಮೆ ದ್ವಿದಿನ ಸಹವಾಸ ಶಿಬಿರ
    Next Article ಕಾದಂಬರಿ ಪ್ರಶಸ್ತಿಗೆ ಆಹ್ವಾನ
    roovari

    Add Comment Cancel Reply


    Related Posts

    ಸುಮನಸಾ ಕೊಡವೂರು ನಾಟಕೋತ್ಸವ ರಂಗಹಬ್ಬ-14ರ ಎರಡನೇ ದಿನದ ಕಾರ್ಯಕ್ರಮ

    February 26, 2026

    ಉಡುಪಿಯಲ್ಲಿ ಉದ್ಘಾಟನೆಗೊಂಡ ಸುಮನಸಾ ಕೊಡವೂರು ನಾಟಕೋತ್ಸವ ‘ರಂಗಹಬ್ಬ-14’

    February 26, 2026

    ಬೆಳ್ತಂಗಡಿಯಲ್ಲಿ ‘ಸುವರ್ಣ ರಂಗ ಸಮ್ಮಾನ್’ ಪ್ರಶಸ್ತಿ ಪ್ರದಾನ ಹಾಗೂ ಸಾಂಸ್ಕೃತಿಕ ವೈಭವ

    February 24, 2026

    ರಂಗ ವಿಮರ್ಶೆ | ಎಳೆ ಪ್ರತಿಭೆಗಳಿಗೆ ಸಾಕ್ಷಿಯಾದ ರಂಗ ಪ್ರಯೋಗಗಳು

    February 23, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.