ಮಂಗಳೂರು : ಕಲೆ ಮತ್ತು ಸಾಹಿತ್ಯಕ್ಕೆ ಸಮರ್ಪಿತವಾದ ರಾಷ್ಟ್ರೀಯ ಸಂಸ್ಥೆ ‘ಸಂಸ್ಕಾರ ಭಾರತೀ’ ಮಂಗಳೂರು ನಗರ ಇದರ ವತಿಯಿಂದ ‘ನಟರಾಜ ಪೂಜನ್’ ಕಾರ್ಯಕ್ರಮವನ್ನು ದಿನಾಂಕ 19 ಆಗಸ್ಟ್ 2025ರಂದು ಸಂಜೆ 5-30 ಗಂಟೆಗೆ ಮಂಗಳೂರಿನ ಬಲ್ಲಾಳ್ ಬಾಗ್ ಇಲ್ಲಿರುವ ಸನಾತನ ನಾಟ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಕಾರ ಭಾರತೀ ಇದರ ಅಧ್ಯಕ್ಷರಾದ ಪುರುಷೋತ್ತಮ ಭಂಡಾರಿ ಇವರು ವಹಿಸಲಿದ್ದು, ಉಡುಪಿಯ ಕಲಾ ಚಿಂತಕರಾದ ಪ್ರೊ. ಎಂ.ಎಲ್. ಸಾಮಗ ಇವರು ಉಪನ್ಯಾಸ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಡಾ. ಶ್ರೀವಿದ್ಯಾ ಇವರ ಶಿಷ್ಯೆ ಕುಮಾರಿ ರೆಮೋನಾ ಎವಟ್ ಪಿರೇರಾ ಇವರಿಗೆ ಅಭಿನಂದನೆ ಮಾಡಲಾಗುವುದು. ಕರ್ಣಾಟಕ ಕಲಾಶ್ರೀ ವಿದುಷಿ ಶಾರದಾಮಣಿ ಶೇಖರ್ ಮತ್ತು ವಿದುಷಿ ಶ್ರೀಲತಾ ನಾಗರಾಜ್ ಇವರ ಶಿಷ್ಯೆ ಕುಮಾರಿ ಶ್ರೀಕರಿ ಮತ್ತು ಗುರು ಪ್ರತಿಮಾ ಶ್ರೀಧರ್ ಇವರ ಶಿಷ್ಯೆ ವಿದುಷಿ ಪ್ರಕ್ಷೀಲ ಜೈನ್ ಇವರು ನೃತ್ಯ ಪ್ರಸ್ತುತಿ ನೀಡಲಿದ್ದಾರೆ.