ಬೆಂಗಳೂರು : ಚೇತನ ಮೀಡಿಯಾ ಇವೆಂಟ್ಸ್ ಆ್ಯಂಡ್ ಪಬ್ಲಿಸಿಟಿ ಪಾರ್ಟನರ್ ಇವರು ಚೇತನ ಫೌಂಡೇಶನ್ ಕರ್ಣಾಟಕ ಇದರ ಸಹಯೋಗದಲ್ಲಿ ಆಯೋಜಿಸಿರುವ ರಾಷ್ಟ್ರೀಯ ಶಿಕ್ಷಣ, ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನ ಕಾರ್ಯಕ್ರಮವು ದಿನಾಂಕ 20 ಜುಲೈ 2025ರಂದು ರವಿವಾರ ಬೆಂಗಳೂರಿನ ಜೆ ಎಸ್ ಎಸ್ ಕ್ಯಾಂಪಸ್ಸಿನ ಶ್ರೀ ಶಿವರಾತ್ರಿ ದೇಶೀಕೇಂದ್ರ ಚಿಂತನ ಮಂಟಪದಲ್ಲಿ ನಡೆಯಲಿದೆ.
ಶಿಕ್ಷಣ, ಸಾಹಿತ್ಯ, ನಾಡು ನುಡಿ ಸೇವೆ, ವೈದ್ಯಕೀಯ, ಸಮಾಜ ಸೇವೆ, ಸಾಂಸ್ಕೃತಿಕ ಸಂಘಟನೆ ಸೇರಿದಂತೆ ವಿವಿಧ ಕ್ಷೇತ್ರದ 25 ಸಾಧಕರಿಗೆ ರಾಷ್ಟ್ರೀಯ ಅತ್ಯುತ್ತಮ ಶಿಕ್ಷಕ/ಕಿ ಪ್ರಶಸ್ತಿ, ನಾಡಪ್ರಭು ಕೆಂಪೇಗೌಡ ರಾಷ್ಟ್ರೀಯ ಪ್ರಶಸ್ತಿ ಹಾಗೂ ಕವಿ ಮುದಲ್ ವಿಜಯ್ ಕಾವ್ಯ ಪ್ರದಾನ ಮಾಡಲಾಗುವುದು. ಸಾಧಕರು ತಮ್ಮ ಸ್ವ-ವಿವರ ಹಾಗೂ ಭಾವಚಿತ್ರವನ್ನು 9986821096 ವಾಟ್ಸಾಪ್ ಮೂಲಕ ಕಳಿಸಲು ಕೋರಿಕೆ. ಪ್ರಶಸ್ತಿ ಪುರಸ್ಕೃತರ ಜೊತೆಯಲ್ಲಿ ಒಬ್ಬ ಸದಸ್ಯರಿಗೆ ಮಾತ್ರ ಪ್ರವೇಶವಿದ್ದು, ಪ್ರವೇಶ ಪಾಸು ಕಡ್ಡಾಯವಾಗಿದೆ.