ಬೆಂಗಳೂರು : ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿ ಮತ್ತು ತರಂಗ ಅಕಾಡೆಮಿ ಆಫ್ ಆರ್ಟ್ಸ್ ಇವರ ಜಂಟಿ ಆಶ್ರಯದಲ್ಲಿ ಪ್ರಸ್ತುತ ಪಡಿಸುವ ‘ರಾಷ್ಟ್ರೀಯ ನೃತ್ಯ ಉತ್ಸವ’ವನ್ನು ದಿನಾಂಕ 12 ಅಕ್ಟೋಬರ್ 2025ರಂದು ಸಂಜೆ 6-30 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮವನ್ನು ನೃತ್ಯ ಸರಸ್ವತಿ ಶುಭಾ ಧನಂಜಯ್ ಇವರು ಉದ್ಘಾಟನೆ ಮಾಡಲಿದ್ದು, ವಿದುಷಿ ಅಪರ್ಣಾ ವಿನೋದ್ ಮೆನನ್, ಡಾ. ರಾಜಶ್ರೀ ವಾರಿಯರ್ ಮತ್ತು ಗುರು ವಸುಂಧರ ದೊರೈಸ್ವಾಮಿ ಇವರುಗಳು ಭರತನಾಟ್ಯ ಪ್ರಸ್ತುತ ಪಡಿಸಲಿದ್ದಾರೆ.