ಮೈಸೂರು : ‘ಅಭಿಯಂತರರು’ ಪ್ರಸ್ತುತ ಪಡಿಸುವ ‘ರಾಷ್ಟ್ರೀಯ ರಂಗ ಉತ್ಸವ’ವು ದಿನಾಂಕ 28-02-2024ರಿಂದ 03-03-2024ರವರೆಗೆ ಮೈಸೂರಿನ ಕಿರು ರಂಗಮಂದಿರದಲ್ಲಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಹಿರಿಯ ಕವಿ ಹಾಗೂ ಸಾಹಿತಿಗಳಾದ ಪ್ರೊ. ಎಸ್.ಜಿ. ಸಿದ್ಧರಾಮಯ್ಯರವರ ಅಧ್ಯಕ್ಷತೆಯಲ್ಲಿ ನಾಟಕ ಕಾರ ಹಾಗೂ ಸಾಹಿತಿಗಳಾದ ಡಾ. ಕೆ.ವೈ. ನಾರಾಯಣ ಸ್ವಾಮಿಯವರು ಉದ್ಘಾಟಿಸಲಿದ್ದಾರೆ.
ದಿನಾಂಕ 28-02-2024ರಂದು ಆದಿಶಕ್ತಿ ಪುದುಚರಿ ಅರ್ಪಿಸುವ ವಿನಯ್ ಕುಮಾರ್ ನಿರ್ದೇಶನದಲ್ಲಿ ‘ಭೂಮಿ’ ಇಂಗ್ಲೀಷ್ ನಾಟಕ, ದಿನಾಂಕ 29-02-2024ರಂದು ಬೆಂಗಳೂರಿನ ಸುಸ್ಥಿರ ಪ್ರತಿಷ್ಠಾನ ಅರ್ಪಿಸುವ ಜೋಸೆಫ್ ಜಾನ್ ನಿರ್ದೇಶನದಲ್ಲಿ ‘ಸರಸ ವಿರಸ ಸಮರಸ’ ಕನ್ನಡ ನಾಟಕ, ದಿನಾಂಕ 01-03-2024ರಂದು ಕಾರ್ತಿಕ್ ಹೆಬ್ಬಾರ್ ನಿರ್ದೇಶನದಲ್ಲಿ ಬೆಂಗಳೂರಿನ ಧೀಮಹಿ ಸೆಂಟರ್ ಆಫ್ ಆರ್ಟ್ಸ್ ಅರ್ಪಿಸುವ ‘# 36 ಸತಿ ಸಾವಿತ್ರಿ ನಿವಾಸ’ ಕನ್ನಡ ನಾಟಕ, ದಿನಾಂಕ 02-03-2024ರಂದು ಆಕ್ಟ್ ರಿಯಾಕ್ಟ್ ಅರ್ಪಿಸುವ ಕೃಷ್ಣಮೂರ್ತಿ ಹನೂರು ರಚಿಸಿರುವ ನವೀನ್ ಸಾಣೇಹಳ್ಳಿ ನಿರ್ದೇಶನದಲ್ಲಿ ‘ಅಜ್ಞಾತನೊಬ್ಬನ ಆತ್ಮಚರಿತ್ರೆ’ ಕನ್ನಡ ನಾಟಕ ಮತ್ತು ದಿನಾಂಕ 03-03-2024ರಂದು ಮುಂಬೈ ಅಭಿನಯ ಕಲ್ಯಾಣ್ ಅರ್ಪಿಸುವ ಅನಿಕೇತ್ ಬೋಲೆ ರಚಿಸಿರುವ ಅಭಿಜಿತ್ ಜುಂಜರ್ ರಾವ್ ನಿರ್ದೇಶನದಲ್ಲಿ ‘ಕಾಕಶಿ’ ಹಿಂದಿ ನಾಟಕ ಪ್ರದರ್ಶನ ನಡೆಯಲಿದೆ.






