ಮಂಗಳೂರು : ಸಂಗೀತ್ ಭಾರತಿ ಫೌಂಡೇಷನ್ (ರಿ.) ಪ್ರಸ್ತುತ ಪಡಿಸುವ ‘ಯುವ ಮಹೋತ್ಸವ್ 2025’ ಕಾರ್ಯಕ್ರಮದಲ್ಲಿ ರಾಷ್ಟ್ರ ಮಟ್ಟದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಸ್ಪರ್ಧೆಯು ದಿನಾಂಕ 08 ಫೆಬ್ರುವರಿ 2025 ಮತ್ತು 09 ಫೆಬ್ರುವರಿ 2025ರಂದು ಮಂಗಳೂರಿನಲ್ಲಿ ನಡೆಯಲಿದೆ.
ಈ ಸ್ಪರ್ಧೆಯು ವಾದ್ಯ ಸಂಗೀತ ಮತ್ತು ಗಾಯನ ಎಂಬ ಎರಡು ವಿಭಾಗಗಳಲ್ಲಿ ನಡೆಯಲಿದ್ದು, 18ರಿಂದ 30 ವರ್ಷ ವಯಸ್ಸಿನವರು ಭಾಗವಹಿಸಲಿಬಹುದು. ಆನ್ಲೈನ್ ಸ್ಕ್ರೀನಿಂಗ್ ರೌಂಡ್ ಗೆ ಅರ್ಜಿ ಸಲ್ಲಿಸಲು ದಿನಾಂಕ 05 ಜನವರಿ 2025 ಕೊನೆಯ ದಿನವಾಗಿದ್ದು, ಅಂತಿಮ ಸ್ಪರ್ಧೆಯು ದಿನಾಂಕ 08 ಫೆಬ್ರುವರಿ 2025 ಮತ್ತು 09 ಫೆಬ್ರುವರಿ 2025ರಂದು ನಡೆಯಲಿದೆ.
YUVA2025.SANGEETBHARATI.ORG ನಲ್ಲಿ ಅರ್ಜಿ ಸಲ್ಲಿಸಿದ ಸ್ಪರ್ಧಿಗಳು ರೂ.500/- ಪ್ರವೇಶ ಶುಲ್ಕವನ್ನು ಭರಿಸತಕ್ಕದ್ದು.