Subscribe to Updates

    Get the latest creative news from FooBar about art, design and business.

    What's Hot

    ಪಾಣೆಮಂಗಳೂರಿನಲ್ಲಿ ‘ಕಥಾಬಿಂದು ಸಾಹಿತ್ಯ ಸಂಭ್ರಮ -2026’ | ಜನವರಿ 04

    January 3, 2026

    ಮಂಗಳೂರಿನ ಪುರಭವನದಲ್ಲಿ ‘ಬೈಕಾಡಿ ಜನಾರ್ದನ ಆಚಾರ್ ಪ್ರಶಸ್ತಿ’ ಪ್ರದಾನ | ಜನವರಿ 05

    January 3, 2026

    ಸುನಾದ ಸಂಗೀತ ಕಲಾಶಾಲೆಯ ಸುನಾದ ಸಂಗೀತೋತ್ಸವ ಸಂಭ್ರಮ

    January 3, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಗುಡ್ಲೆಪ್ಪ ಹಳ್ಳಿಕೇರಿ ಪದವಿ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ
    Literature

    ಗುಡ್ಲೆಪ್ಪ ಹಳ್ಳಿಕೇರಿ ಪದವಿ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ

    July 11, 2024No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಹಾವೇರಿ : ಕನಕದಾಸ ಅಧ್ಯಯನ ಸಂಶೋಧನಾ ಪೀಠ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಉಡುಪಿ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಹಾಗೂ ಕನ್ನಡ ವಿಭಾಗ ಕೆ.ಎಲ್.ಇ. ಸಂಸ್ಥೆಯ ಗುಡ್ಲೆಪ್ಪ ಹಳ್ಳಿಕೇರಿ ಪದವಿ ಮಹಾವಿದ್ಯಾಲಯ ಹಾವೇರಿ ಇವರ ಸಂಯುಕ್ತ ಆಶ್ರಯದಲ್ಲಿ ‘ಕನಕ ಚಿಂತನೆ : ಇಹಪರ ಸಮನ್ವಯತೆಯ ಸೊಬಗು’ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ದಿನಾಂಕ 02-07-2024ರಂದು ಆಂಧ್ರಪ್ರದೇಶದ ದ್ರಾವಿಡ ವಿಶ್ವವಿದ್ಯಾನಿಲಯ ಕುಪ್ಪಂ ಇಲ್ಲಿನ ಡೀನ್ ಆದ ಡಾ. ಎಂ.ಎನ್. ವೆಂಕಟೇಶ್ ಅವರು ಉದ್ಘಾಟಿಸಿದರು.

    ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಕೆ.ಎ.ಇ. ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಎಂ.ಸಿ. ಕೊಳ್ಳಿ ಅವರು ವಹಿಸಿದ್ದರು. ಇದೇ ಸಂದರ್ಭದಲ್ಲಿ ‘ವಚನದರ್ಶನ’ ಎಂಬ ಕೃತಿಯನ್ನು ಡಾ. ಪಾದೇಕಲ್ಲು ವಿಷ್ಣು ಭಟ್ ಬಿಡುಗಡೆಗೊಳಿಸಿದರು. ಜಿ.ಎಚ್. ಕಾಲೇಜು ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷರಾದ ಡಾ. ಎಸ್.ಎಲ್. ಬಾಲೆಹೊಸೂರ, ಡಾ. ಎಸ್.ಜಿ. ವೈದ್ಯ, ಪ್ರಾಚಾರ್ಯರು ಬಿ.ಇ ಎಸ್.ಎಂ. ಕಾಲೇಜು ಬ್ಯಾಡಗಿ, ಡಾ. ಅರುಣ್ ಕುಮಾರ್ ಎಸ್.ಆರ್. ಸಂಶೋಧನ ಸಹಾಯಕರು ಆರ್.ಆರ್.ಸಿ, ಡಾ. ಬಿ. ಜಗದೀಶ್ ಶೆಟ್ಟಿ ಆಡಳಿತಾಧಿಕಾರಿ, ಕನಕದಾಸ ಅಧ್ಯಯನ ಸಂಶೋಧನ ಪೀಠ, ಜಿ.ಎಚ್. ಕಾಲೇಜಿನ ಪ್ರಾಚಾರ್ಯರಾದ ಡಾ. ಸಂಧ್ಯಾ ಆರ್. ಕುಲಕರ್ಣಿ, ಜಿ.ಎಚ್. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಜಗದೀಶ ಎಫ್. ಹೊಸಮನಿ ಹಾಗೂ ಸಂಯೋಜಕ ಪ್ರೊ. ಶಮಂತ್ ಕುಮಾರ್ ಉಪಸ್ಥಿತರಿದ್ದರು.

    ಮೊದಲ ಗೋಷ್ಠಿಯಲ್ಲಿ ಪ್ರೊ. ಎಂ.ಎನ್. ವೆಂಕಟೇಶ್ ಅವರು ‘ಕನಕದಾಸರ ಕಾವ್ಯಗಳಲ್ಲಿ ಜೀವನಮೌಲ್ಯ’ ಎಂಬ ಕುರಿತು ಉಪನ್ಯಾಸವಿತ್ತರು. ಅವರು ತಮ್ಮ ಉಪನ್ಯಾಸದಲ್ಲಿ ಕನಕದಾಸರ ಕಾವ್ಯಗಳನ್ನು ಉದ್ಗರಿಸುತ್ತಾ ಜೀವನ ಮೌಲ್ಯ ಯಾವ ರೀತಿಯಲ್ಲಿ ವ್ಯಕ್ತವಾಗಿದೆ ಎಂಬುದನ್ನು ವಿಶ್ಲೇಷಣಾತ್ಮಕವಾಗಿ ವಿವರಿಸಿದರು.

    ಎರಡನೇ ಗೋಷ್ಠಿಯಲ್ಲಿ ಡಾ. ಪಾದೇಕಲ್ಲು ವಿಷ್ಣುಭಟ್ ಅವರು ‘ಕನಕದಾಸರಲ್ಲಿ ಸಂತನ ಸಹಜ ನಿರ್ಭೀತಿ’ ಎಂಬ ವಿಷಯದ ಕುರಿತು ಮಾತನಾಡಿದರು. ಕಬೀರನ ಮಾತಿನೊಂದಿಗೆ ಆರಂಭಿಸಿದ ಅವರು ಕನಕದಾಸರ ಜೀವನ ಲೋಕಕ್ಕಾಗಿ, ಲೋಕದ ಹಿತಕ್ಕಾಗಿ ಇತ್ತು. ಸಂತನಿಗೆ ಯಾವುದನ್ನು ಹೇಳುವುದಕ್ಕೂ ತೊಡಕಿಲ್ಲ. ಸಂತನಿಗೆ ಸಹಜವಾದ ನಿರ್ಭೀತಿ ಇತ್ತು. ಕಬೀರ ಮತ್ತು ಕನಕದಾಸರಿಗೆ ಯಾವುದೇ ವಿಷಯವನ್ನು ಬೋಧಿಸುವ ಧೈರ್ಯ ಇತ್ತು. ತಾವು ಹೇಳಿದರೆ ಏನು ತಿಳಿಯುತ್ತಾರೋ ಎಂಬ ಭಾವನೆ ಕನಕನಲ್ಲಿರಲಿಲ್ಲ, ತನ್ನನ್ನು ತಾನು ಹೀನನಾಗಿ ಕಾಣುವುದು ಸಹಜ ನಿರ್ಭೀತಿ. ಎಲ್ಲರೂ ಮಾಡುವುದು ಹೊಟ್ಟೆಗಾಗಿ, ಆದರೆ ತಾನು ಹೇಳುವುದು ಹೊಟ್ಟೆಗಾಗಿ ಅಲ್ಲ ಸಮಾಜದ ಉದ್ಧಾರಕ್ಕಾಗಿ, ಹಿತಕ್ಕಾಗಿ. ನಿಂದೆಯ ರೂಪದಲ್ಲಿ ಸ್ತುತಿ ಮಾಡಿರುವುದನ್ನು ಉಲ್ಲೇಖಿಸಿದರು. ತಿರುಮಲೆಯ ವ್ಯವಸ್ಥೆಯ ಬಗ್ಗೆ ಕನಕ ಹೇಳಿದ್ದನ್ನು ವಿವರಿಸಿದರು.

    ಅನಂತರ ಅಧ್ಯಾಪಕರಿಂದ ಹಾಗೂ ವಿದ್ಯಾರ್ಥಿಗಳಿಂದ ಕನಕ ಚಿಂತನೆಗೆ ಒತ್ತು ನೀಡಿರುವ ಪ್ರಬಂಧಗಳ ಮಂಡನೆಯಾಯಿತು. ಗೋಷ್ಠಿಯ ಅಧ್ಯಕ್ಷತೆ ವಹಿಸಿದ ಡಾ. ಅರುಣ್ ಕುಮಾರ್ ಎಸ್.ಆರ್. ಅವರು ಪ್ರಬಂಧಗಳ ಕುರಿತಂತೆ ಹಾಗೂ ಕನಕ ಚಿಂತನೆಯ ಕುರಿತು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ಇನ್ನೊಬ್ಬ ಸಮನ್ವಯಕಾರರಾದ ಡಾ. ಎಸ್.ಜಿ. ವೈದ್ಯ ಅವರೂ ಪ್ರಬಂಧಗಳ ಬಗ್ಗೆ ವಿಚಾರ ಮಂಡಿಸುತ್ತಾ ಯಾವ ರೀತಿಯಲ್ಲಿ ಪ್ರಬಂಧ ರಚನಾಕಾರರ ದೃಷ್ಟಿಕೋನವಿರಬೇಕು ಮತ್ತು ಪ್ರಬಂಧಗಳನ್ನು ಯಾವ ರೀತಿಯಲ್ಲಿ ಉತ್ತಮ ಪಡಿಸಬಹುದು ಎಂಬ ಬಗ್ಗೆ ತಿಳಿಹೇಳಿದರು.

    ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕೆ.ಎಲ್.ಇ.ಜಿ.ಎಚ್. ಕಾಲೇಜಿನ ಪ್ರಾಚಾರ್ಯರಾದ ಡಾ. ಸಂಧ್ಯಾ ಆರ್. ಕುಲಕರ್ಣಿ ವಹಿಸಿದ್ದು, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ. ಜಗದೀಶ್ ಶೆಟ್ಟಿ ಸಮಾರೋಪದ ಮಾತುಗಳನ್ನಾಡಿದರು. ವಿಚಾರ ಸಂಕಿರಣದಲ್ಲಿ ಭಾಗವಹಿಸಿದ ಎಲ್ಲಾ ಪ್ರತಿನಿಧಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.

    Share. Facebook Twitter Pinterest LinkedIn Tumblr WhatsApp Email
    Previous Articleತಿಂಗಳ ಉಪನ್ಯಾಸ ‘ಅರಿವು ತಿಳಿವು’ ಕಾರ್ಯಕ್ರಮದಲ್ಲಿ ‘ಐತರೇಯ ಉಪನಿಷತ್’ ಕುರಿತು ಉಪನ್ಯಾಸ
    Next Article ಚನ್ನರಾಯಪಟ್ಟಣದಲ್ಲಿ ‘ವಾರ್ಷಿಕ ತರಬೇತಿ ಶಿಬಿರ’ದ ಉದ್ಘಾಟನಾ ಸಮಾರಂಭ | ಜುಲೈ 12
    roovari

    Add Comment Cancel Reply


    Related Posts

    ಪಾಣೆಮಂಗಳೂರಿನಲ್ಲಿ ‘ಕಥಾಬಿಂದು ಸಾಹಿತ್ಯ ಸಂಭ್ರಮ -2026’ | ಜನವರಿ 04

    January 3, 2026

    ಮಂಗಳೂರಿನ ಪುರಭವನದಲ್ಲಿ ‘ಬೈಕಾಡಿ ಜನಾರ್ದನ ಆಚಾರ್ ಪ್ರಶಸ್ತಿ’ ಪ್ರದಾನ | ಜನವರಿ 05

    January 3, 2026

    ಕೈಕಂಬದ ಮೇಘಾ ಪ್ಲಾಝಾ ಸಭಾಂಗಣದಲ್ಲಿ ‘ಬ್ಯಾರಿ ಸಾಹಿತ್ಯ ಸಮ್ಮೇಳನ’ | ಜನವರಿ 04

    January 3, 2026

    ಕಾಂತಾವರ ಕನ್ನಡ ಭವನದಲ್ಲಿ ಸಾಧಕರಿಗೆ ದತ್ತಿ ಪ್ರಶಸ್ತಿ ಪ್ರದಾನ

    January 3, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.