ಕಾಸರಗೋಡು : ಪೆರಿಯ ಆಲಕ್ಕೋಡು ಗೋಕುಲಂ ಗೋಶಾಲಾ ದೀಪಾವಳಿ ಸಂಗೀತೋತ್ಸವದ ಸಮಾರೋಪ ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯವನ್ನು ವಹಿಸಿ ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹಿರಿಯ ನೃತ್ಯ ಕಲಾವಿದೆ ಡಾ. ಪದ್ಮಾ ಸುಬ್ರಹ್ಮಣ್ಯಂ ಅವರಿಗೆ ದಿನಾಂಕ 19-11-2023 ರಂದು ಪರಂಪರಾ ವಿದ್ಯಾಪೀಠದ ನಾಟ್ಯಭೂಷಣ ಪ್ರಶಸ್ತಿಯನ್ನು ನೀಡಿ ಆಶೀರ್ವದಿಸಿದರು.
ಪ್ರಶಸ್ತಿಯನ್ನು ಸ್ವೀಕರಿಸಿದ ಡಾ.ಪದ್ಮಾ ಸುಬ್ರಹ್ಮಣ್ಯಂ ಮಾತನಾಡಿ, “ಕಲೆಯೇ ಸಂಸ್ಕೃತಿಯ ತಳಹದಿ. ಇಂದಿನ ಮಕ್ಕಳಲ್ಲಿ ಕಲೆಯ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿರುವುದು ಒಳ್ಳೆಯ ಲಕ್ಷಣವಲ್ಲ ಎಂದು ತಿಳಿಸಿದರು. ಅಲ್ಲದೆ ಗೋಶಾಲೆಯಿಂದ ದೊರೆತ ಪ್ರಶಸ್ತಿ ಶ್ರೇಷ್ಠವಾದುದು ಎಂದರು. ಗೋಶಾಲೆಯ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯವಾಗಿ ಸಹಕರಿಸುವುದಾಗಿ ಇದೇ ವೇಳೆ ಅವರು ಭರವಸೆ ನೀಡಿದರು.
ವಿದ್ವಾನ್ ವೆಳ್ಳಿಕೋತ್ ವಿಷ್ಣು ಭಟ್ ಅವರಿಗೆ ಗುರುರತ್ನ ಪ್ರಶಸ್ತಿ, ಗೋಕುಲ್ ಅಲಂಗೋಡ್ ಮತ್ತು ವಿಭಾ ರಾಜೀವ್ ಅವರಿಗೆ ಯುವ ಪ್ರತಿಭಾ ಪುರಸ್ಕಾರ ನೀಡಲಾಯಿತು. ಪರಂಪರಾ ವಿದ್ಯಾಪೀಠದ ಆಚಾರ್ಯರಾದ ವಿಷ್ಣುಪ್ರಸಾದ್ ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು. ಅಜಿತ್ ಕುಮಾರ್ ವರ್ಮಾ, ಶಂಕರನಾರಾಯಣ ಜೋಯಿಸ್, ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವ ಮುರಳೀಧರನ್ ನಂಬ್ಯಾರ್, ಖ್ಯಾತ ಸಂಸ್ಕೃತ ವಿದ್ವಾಂಸ ಕೆ.ಕಣ್ಣನ್ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.