ಮಂಗಳೂರು : ನಾಟ್ಯನಿಕೇತನ (ರಿ.) ಕೊಲ್ಯ ಕೋಟೆಕಾರ್ ಆಯೋಜಿಸೀದಾ ನಾಟ್ಯಮೋಹನ ನವತ್ಯುತ್ಸವ ನೃತ್ಯ ಸರಣಿಯ 18ನೇ ಕಾರ್ಯಕ್ರಮ ದಿನಾಂಕ 18 ಜೂನ್ 2025ನೇ ಬುಧವಾರದಂದು ಸಂಜೆ ಘಂಟೆ 6.00ಕ್ಕೆ ಕೊಲ್ಯದಲ್ಲಿರುವ ನಾಟ್ಯನಿಕೇತನ ನೃತ್ಯಾಂಗಣದಲ್ಲಿ ನಡೆಯಲಿದೆ.
ಸಮಾರಂಭದಲ್ಲಿ ಗುರು ಶ್ರೀ ಉಳ್ಳಾಲ ಮೋಹನ್ ಕುಮಾರ್ ದೇವತಾ ದೀಪ ಪ್ರಜ್ವಲನೆ ಗೈಯ್ಯಲಿದ್ದು, ನಮ್ಮಕುಡ್ಲ ವಾಹಿನಿಯ ಹಿರಿಯ ಛಾಯಾಗ್ರಾಹಕರಾದ ಜಯಂತ್ ಉಳ್ಳಾಲ್ ಉಪಸ್ಥಿತರಿರುವರು. ಬಳಿಕ ನಾಟ್ಯನಿಕೇತನದ ಹಿರಿಯ ವಿದ್ಯಾರ್ಥಿ, ಶಾಂತಲಾ ನಾಟ್ಯಾಲಯ (ರಿ), ಬೆಳಗಾವಿ ಇದರ ನಿರ್ದೇಶಕಿಯಾದ ವಿದ್ವಾನ್ ಶ್ರೀಮತಿ ರೇಖಾ ಅಶೋಕ್ ಹೆಗ್ಡೆ ನೃತ್ಯ ಪ್ರಸ್ತುತ ಪಡಿಸಲಿದ್ದಾರೆ.

