ಮಂಗಳೂರು : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿ (ರಿ.) ಶಿಷ್ಯ ವೃಂದ ಇವರ ಸಹಕಾರದೊಂದಿಗೆ ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿ (ರಿ.) ಸುರತ್ಕಲ್ ಇದರ ‘ನಾಟ್ಯಾಂಜಲಿ ನಲವತ್ತರ ನಲಿವು’ 31ರಿಂದ 40ನೇ ಸರಣಿ ಕಾರ್ಯಕ್ರಮವನ್ನು ದಿನಾಂಕ 25 ಡಿಸೆಂಬರ್ 2025ರಿಂದ 03 ಜನವರಿ 2026ರವರೆಗೆ ಹಮ್ಮಿಕೊಳ್ಳಲಾಗಿದೆ.
ದಿನಾಂಕ 25 ಡಿಸೆಂಬರ್ 2025ರಂದು ಸಂಜೆ ಗಂಟೆ 5-45ಕ್ಕೆ ಮಂಗಳೂರಿನ ಡಾನ್ ಬಾಸ್ಕೋ ಹಾಲ್ ನಲ್ಲಿ ‘ನಾಟ್ಯಾಂಜಲಿ ನಲವತ್ತರ ನಲಿವು’ 31ನೇ ಸರಣಿ ಕಾರ್ಯಕ್ರಮವನ್ನು ಶಾಂತಲಾ ನಾಟ್ಯ ಪ್ರಶಸ್ತಿ ಪುರಸ್ಕೃತ ಉಳ್ಳಾಲ ಮೋಹನ್ ಕುಮಾರ್ ಇವರು ದೇವತಾ ಜ್ಯೋತಿ ಪ್ರಜ್ವಲನೆ ಮಾಡಿ ಉದ್ಘಾಟಿಸಲಿದ್ದಾರೆ. ಬೆಂಗಳೂರಿನ ರಸಿಕ ಆರ್ಟ್ಸ್ ಫೌಂಡೇಶನ್ ಇದರ ಕಲಾವಿದೆಯರಾದ ರಸಿಕ ಕಿರಣ್, ಅರ್ಚನಾ ಎಚ್.ಆರ್., ಶ್ರದ್ಧಾ ಶ್ರೀನಿವಾಸ್, ಹರ್ಷಿನಿ ಸಿ., ದಿವ್ಯ ಪಿ., ಭಾವನಾ ಸಿ.ಜೆ. ಇವರಿಂದ ‘ಭರತ ಪಲ್ಲವಿ’ ಹಾಗೂ ವಿದುಷಿ ಪ್ರತಿಭಾ ರಾಮಸ್ವಾಮಿ ಮತ್ತು ವಿದುಷಿ ಸಂಧ್ಯಾ ಉಡುಪ ಬೆಂಗಳೂರು ಇವರಿಂದ ‘ಅಂತರ್ಮುಖಿ’ ಭರತನಾಟ್ಯ ಪ್ರದರ್ಶನ ಪ್ರಸ್ತುತಗೊಳ್ಳಲಿದೆ.
ದಿನಾಂಕ 26 ಡಿಸೆಂಬರ್ 2025ರಂದು ಸಂಜೆ ಗಂಟೆ 5-45ಕ್ಕೆ ಕೊಲ್ಯ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ‘ನಾಟ್ಯಾಂಜಲಿ ನಲವತ್ತರ ನಲಿವು’ 32ನೇ ಸರಣಿ ಕಾರ್ಯಕ್ರಮವನ್ನು ಶಾಂತಲಾ ನಾಟ್ಯ ಪ್ರಶಸ್ತಿ ಪುರಸ್ಕೃತ ಉಳ್ಳಾಲ ಮೋಹನ್ ಕುಮಾರ್ ಇವರು ದೇವತಾ ಜ್ಯೋತಿ ಪ್ರಜ್ವಲನೆ ಮಾಡಿ ಉದ್ಘಾಟಿಸಲಿದ್ದಾರೆ. ಬೆಂಗಳೂರಿನ ಕರ್ನಾಟಕ ಕಲಾಶ್ರೀ ವಿದ್ವಾನ್ ಶ್ರೀ ಸತ್ಯನಾರಾಯಣ ರಾಜು ಇವರ ಭರತನಾಟ್ಯ ಪ್ರದರ್ಶನಕ್ಕೆ ಶ್ರೀ ಭರತ್ ನಾರಾಯಣ್ ನಟುವಾಂಗದಲ್ಲಿ, ವಸುಧಾ ಬಾಲಕೃಷ್ಣ ಹಾಡುಗಾರಿಕೆ, ಶ್ರೀ ಎಸ್.ವಿ. ಬಾಲಕೃಷ್ಣ ಮೃದಂಗದಲ್ಲಿ ಮತ್ತು ಉಡುಪಿಯ ಕೆ. ಮುರಳೀಧರ್ ಇವರು ಕೊಳಲು ಸಹಕಾರ ನೀಡಲಿದ್ದಾರೆ.
ದಿನಾಂಕ 27 ಡಿಸೆಂಬರ್ 2025ರಂದು ಸಂಜೆ ಗಂಟೆ 5-45ಕ್ಕೆ ನಾಟ್ಯಾಂಜಲಿ ಕಲಾಮಂದಿರದಲ್ಲಿ ‘ನಾಟ್ಯಾಂಜಲಿ ನಲವತ್ತರ ನಲಿವು’ 33ನೇ ಸರಣಿ ಕಾರ್ಯಕ್ರಮವನ್ನು ಆಕಾಶವಾಣಿಯ ಉನ್ನತ ಶ್ರೇಣಿಯ ಕಲಾವಿದರಾದ ವಿದ್ವಾನ್ ನಾಗೇಶ್ ಎ. ಬಪ್ಪನಾಡು ಇವರು ಉದ್ಘಾಟಿಸಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬಾಲ ಕಲಾವಿದರಾದ ಪ್ರದ್ಯುಮ್ನ ಭಾಗವತ್ ಮತ್ತು ಶ್ರೀಕರ ಕೃಷ್ಣ ಇವರು ಕೊಳಲು, ಪ್ರಮಥ್ ಭಾಗವತ್ ಇವರು ಪಿಟೀಲು, ಶ್ರೇಯಾ ಯು. ನಾಯಕ್ – ವೀಣೆ, ಪ್ರಜ್ಞಾನ್ ನಾಯಕ್ – ಮೃದಂಗ ಹಾಗೂ ಸಮರ್ಥ್ ಉಡುಪ – ಘಟಂನಲ್ಲಿ ಸಹಕರಿಸಲಿದ್ದಾರೆ.
ದಿನಾಂಕ 28 ಡಿಸೆಂಬರ್ 2025ರಂದು ಸಂಜೆ ಗಂಟೆ 5-45ಕ್ಕೆ ನಾಟ್ಯಾಂಜಲಿ ಕಲಾಮಂದಿರದಲ್ಲಿ ‘ನಾಟ್ಯಾಂಜಲಿ ನಲವತ್ತರ ನಲಿವು’ 34ನೇ ಸರಣಿ ಕಾರ್ಯಕ್ರಮವನ್ನು ವೇದಮೂರ್ತಿ ಪಿ. ವೆಂಕಟ್ರಮಣ ಐತಾಳ್ ಇವರು ಉದ್ಘಾಟಿಸಲಿದ್ದಾರೆ. ಉಜಿರೆಯ ಆಶಾ ಅಡೂರ್ ಇವರಿಂದ ಸೃಜನಾತ್ಮಕ ಸಾಹಿತ್ಯ ಚಟುವಟಿಕೆ, ಯಕ್ಷಗಾನ ಗಾನವೈಭವ ಹಾಗೂ ನೃತ್ಯ ವೈಭವದಲ್ಲಿ ಕೃಷ್ಣ ಪ್ರಸಾದ್ ರಾವ್ ಭಾಗವತರು, ಅನಿರುದ್ಧ ಅತ್ತಾವರ್ ಚೆಂಡೆ, ಭವಾನಿಶಂಕರ್ ಶರ್ಮ ಮದ್ದಳೆ, ಸಾತ್ವಿಕ್ ನಾವಡ, ವಿಧಾತ್ರಿ, ಆರಾಧ್ಯ ಇವರಿಂದ ಯಕ್ಷ ನೃತ್ಯ, ಕುಂದಾಪುರದ ಪತ್ರಕರ್ತರಾದ ಲಕ್ಷ್ಮೀ ಮಚ್ಚಿನ ಇವರಿಂದ ಕಲೋಪಾಸನೆ ಬಗ್ಗೆ ಮಾತು, ದಿವಾಕರ್ ಕಶ್ಯಪ್, ನಾಗಭೂಷಣ ಕಶ್ಯಪ್ ಮತ್ತು ರಮ್ಯ ರಾಘವೇಂದ್ರ ಇವರ ಭಾವ, ಭಕ್ತಿ ಗೀತೆ ‘ಸಂಗೀತ ಲಹರಿ’ಗೆ ಉಡುಪಿಯ ಕೆ. ಮುರಳೀಧರ್ ಕೀಬೋರ್ಡ್ ಮತ್ತು ವೈಷ್ಣವಿ ಡಿ. ಉಳ್ಳಾಲ್ ಇವರು ತಬ್ಲಾದಲ್ಲಿ ಸಹಕರಿಸಲಿದ್ದಾರೆ. ವಿಧಾತ್ರಿ, ಶಾರ್ವರಿ, ಶಮಾತ್ಮಿಕ, ಆರಾಧ್ಯ, ಇಶಾನಿ ತೇಜಸ್, ಆರುಷಿ, ಆಯುಷಿ, ಅಭಿಜ್ಞ, ಪಂಚಮಿ, ಶ್ರೀರಕ್ಷಾ, ಅನನ್ಯ, ರಂಜನಿ ಕೃಷ್ಣಪ್ರಸಾದ್, ಅಂಜಲಿ ನಾಗಭೂಷಣ್, ಪಿ. ನರೇಶ್ ಐತಾಳ್ ಇವರಿಂದ ‘ನೃತ್ಯ ಸಿಂಚನ’ ಪ್ರಸ್ತುತಗೊಳ್ಳಲಿದೆ.
ದಿನಾಂಕ 29 ಡಿಸೆಂಬರ್ 2025ರಂದು ಸಂಜೆ ಗಂಟೆ 5-45ಕ್ಕೆ ನಾಟ್ಯಾಂಜಲಿ ಕಲಾಮಂದಿರದಲ್ಲಿ ‘ನಾಟ್ಯಾಂಜಲಿ ನಲವತ್ತರ ನಲಿವು’ 35ನೇ ಸರಣಿ ಕಾರ್ಯಕ್ರಮವನ್ನು ಉಡುಪಿಯ ಕರ್ನಾಟಕ ಕಲಾಶ್ರೀ ವಿದ್ವಾನ್ ಮಧೂರು ಬಾಲ ಸುಬ್ರಹ್ಮಣ್ಯ ಇವರು ಉದ್ಘಾಟಿಸಲಿದ್ದಾರೆ. ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ ಮತ್ತು ವಿದುಷಿ ಪ್ರೀತಿಕಲಾ ದೀಪಕ್ ಇವರಿಂದ ‘ನೃತ್ಯ ಸಂಗೀತ ಕಛೇರಿ’ ನಡೆಯಲಿದೆ.
ದಿನಾಂಕ 30 ಡಿಸೆಂಬರ್ 2025ರಂದು ಸಂಜೆ ಗಂಟೆ 5-45ಕ್ಕೆ ನಾಟ್ಯಾಂಜಲಿ ಕಲಾಮಂದಿರದಲ್ಲಿ ‘ನಾಟ್ಯಾಂಜಲಿ ನಲವತ್ತರ ನಲಿವು’ 36ನೇ ಸರಣಿ ಕಾರ್ಯಕ್ರಮವನ್ನು ಸಂಗೀತ ವಿದ್ವಾಂಸರಾದ ಎಂ. ನಾರಾಯಣ್ ಇವರು ಉದ್ಘಾಟಿಸಲಿದ್ದಾರೆ. ಬೆಂಗಳೂರಿನ ಕುಮಾರಿ ಅನಿಂದಿತ ಇವರ ‘ಏಕವ್ಯಕ್ತಿ ಸಂಗೀತ ನೃತ್ಯ ದೀಪಿಕಾ’ ಪ್ರಸ್ತುತಿಗೆ ಬೆಂಗಳೂರಿನ ಕುಮಾರಿ ಅರ್ಪಿತ ಪಿಟೀಲು ಮತ್ತು ಶೃಂಗೇರಿ ವಿದ್ವಾನ್ ಪನ್ನಗ ಶರ್ಮ ಮೃದಂಗದಲ್ಲಿ ಸಹಕರಿಸಲಿದ್ದಾರೆ.
ದಿನಾಂಕ 31 ಡಿಸೆಂಬರ್ 2025ರಂದು ಸಂಜೆ ಗಂಟೆ 5-45ಕ್ಕೆ ನಾಟ್ಯಾಂಜಲಿ ಕಲಾಮಂದಿರದಲ್ಲಿ ‘ನಾಟ್ಯಾಂಜಲಿ ನಲವತ್ತರ ನಲಿವು’ 37ನೇ ಸರಣಿ ಕಾರ್ಯಕ್ರಮವನ್ನು ಪುತ್ತೂರಿನ ವಿಶ್ವಕಲಾನಿಕೇತನದ ಕರ್ನಾಟಕ ಕಲಾಶ್ರೀ ವಿದುಷಿ ನಯನ ಬಿ. ರೈ ಇವರು ಉದ್ಘಾಟಿಸಲಿದ್ದಾರೆ. 2025ರಲ್ಲಿ ರಂಗಪ್ರವೇಶವಾದ ಕಲಾವಿದರಿಂದ ‘ನೃತ್ಯ ಸಂಭ್ರಮ’ ಏಕವ್ಯಕ್ತಿ ಭರತನಾಟ್ಯ ಪ್ರಸ್ತುತಗೊಳ್ಳಲಿದೆ.
ದಿನಾಂಕ 01 ಜನವರಿ 2026ರಂದು ಸಂಜೆ ಗಂಟೆ 6-00ಕ್ಕೆ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ‘ನಾಟ್ಯಾಂಜಲಿ ನಲವತ್ತರ ನಲಿವು’ 38ನೇ ಸರಣಿ ಕಾರ್ಯಕ್ರಮವನ್ನು ಶಾಂತಲಾ ನಾಟ್ಯ ಪ್ರಶಸ್ತಿ ಪುರಸ್ಕೃತ ಉಳ್ಳಾಲ ಮೋಹನ್ ಕುಮಾರ್ ಇವರು ಉದ್ಘಾಟಿಸಲಿದ್ದಾರೆ. ಶ್ರೀಮತಿ ಸುಧಾ ಆಡುಕಳ ರಚನೆಯ ಡಾ. ಶ್ರೀಪಾದ ಭಟ್ ನಿರ್ದೇಶನದಲ್ಲಿ ಹಾಗೂ ವಿದ್ವಾನ್ ಸುಧೀರ್ ರಾವ್, ವಿದುಷಿ ಮಾನಸಿ ಸುಧೀರ್ ಮತ್ತು ವಿದುಷಿ ಅನಘಶ್ರೀ ಇವರ ನೃತ್ಯ ನಿರ್ದೇಶನದಲ್ಲಿ ನೃತ್ಯನಿಕೇತನ ಕೊಡವೂರು ಕಲಾವಿದರಿಂದ ‘ನಾರಸಿಂಹ’ ನೃತ್ಯ ರೂಪಕ ಪ್ರದರ್ಶನಗೊಳ್ಳಲಿದೆ.
ದಿನಾಂಕ 02 ಜನವರಿ 2026ರಂದು ಸಂಜೆ ಗಂಟೆ 6-00ಕ್ಕೆ ನಂದಿನಿ ನದಿಯ ಖಂಡಿಗೆ ತಟದಲ್ಲಿರುವ ಶ್ರೀಮನ್ನಾರಾಯಣ ವೇದಿಕೆಯಲ್ಲಿ ‘ನಾಟ್ಯಾಂಜಲಿ ನಲವತ್ತರ ನಲಿವು’ 39ನೇ ಸರಣಿ ಕಾರ್ಯಕ್ರಮವನ್ನು ಕಾಟಿಪಳ್ಳ ಶ್ರೀ ವಿಶ್ವನಾಥ ದೇವಸ್ಥಾನದ ಅಧ್ಯಕ್ಷರಾದ ಕೆ.ಸಿ. ನಾಗೇಂದ್ರ ಭಾರಧ್ವಾಜ್ ಇವರು ಉದ್ಘಾಟಿಸಲಿದ್ದಾರೆ. ಶ್ರೀ ಕೋದಂಡರಾಮ ಕೃಪಾ ಪೋಷಿತ ಯಕ್ಷಗಾನ ಮಂಡಳಿ ಶ್ರೀಹನುಮಗಿರಿ ಮೇಳ ಇವರಿಂದ ‘ವರ್ಣ ಪಲ್ಲಟ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ದಿನಾಂಕ 03 ಜನವರಿ 2026ರಂದು ಸಂಜೆ ಗಂಟೆ 5-30ಕ್ಕೆ ಸುರತ್ಕಲ್ ವಿದ್ಯಾದಾಯಿನೀ ಕಲಾಮಂದಿರದಲ್ಲಿ ‘ನಾಟ್ಯಾಂಜಲಿ ನಲವತ್ತರ ನಲಿವು’ 40ನೇ ಸರಣಿ ಕಾರ್ಯಕ್ರಮವನ್ನು ಶಾಂತಲಾ ನಾಟ್ಯ ಪ್ರಶಸ್ತಿ ಪುರಸ್ಕೃತ ಉಳ್ಳಾಲ ಮೋಹನ್ ಕುಮಾರ್ ಇವರು ದೇವತಾ ಜ್ಯೋತಿ ಪ್ರಜ್ವಲನೆ ಮಾಡಿ ಉದ್ಘಾಟಿಸಲಿದ್ದಾರೆ. ‘ನಾಟ್ಯಾಂಜಲಿ ಪ್ರಶಸ್ತಿ’ಯನ್ನು 2025ರ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿದ್ವಾನ್ ಪ್ರೊ. ಕೆ. ರಾಮಮೂರ್ತಿ ರಾವ್ ಮೈಸೂರು ಇವರಿಗೆ ಪ್ರದಾನ ಮಾಡಲಾಗುವುದು. ಆರಾಧ್ಯ, ಶಮಾತ್ಮಿಕ, ನಿರಾಲಿ, ನೇಹಲ್, ವಿಧಾತ್ರಿ, ಶಾರ್ವರಿ, ಚಿಂತನ, ಶಾಂತ, ನಿಧಿ, ಸಮನ್ವಿತ, ಆಧ್ಯ, ನಲ್ಮೆ, ಹನಿ, ಸಾಧನ್ವ, ತ್ರಿಶಾ, ಅಭಿಜ್ಞಾ ರಾವ್, ಅಭಿಜ್ಞಾ ಡಿ., ಪಂಚಮಿ, ನಿಧಿಶ್ರೀ, ಶಾನ್ವಿ ಕೊಟ್ಟಾರಿ, ಸಮೃದ್ಧಿ, ಅಭಿಜ್ಞಾ ಶೆಟ್ಟಿ, ಪ್ರಜ್ಞಾ, ಹಿನಾಲ್, ಅನನ್ಯ, ನಿಗೇನ್, ಸಾನ್ವಿ ಶೆಟ್ಟಿ, ಅಮೃತಾ, ಶ್ರೀಯಾ, ಸಾನ್ವಿಕ, ಹಿಮ, ಶಿವಾನಿ, ಇಂಚರ, ಮನ್ವಿತ ಪ್ರಸಾದ್, ಹರ್ಷಿತ ಎಂ., ಭಾವನಾ ಡಿ.ಜೆ., ರಿಯ ವರ್ಗೀಸ್, ಪ್ರಜ್ಞಾ ಬಿ. ಶೆಟ್ಟಿಗಾರ್, ಶ್ರೀಷ್ಮ ಹೆಗ್ಡೆ, ಶ್ರೀವಲ್ಲಿ, ಶಾಂತೇರಿ ಮಹಾಲಸ, ಕಲಾಶ್ರೀ ಪುನೀತ್, ಸೌಪರ್ಣಿಕ ಶೆಟ್ಟಿಗಾರ್, ಅನ್ನಪೂರ್ಣ ಪೈ, ಸಂಧ್ಯಾ ಉಡುಪ, ಅಂಜಲಿ ನಾಗಭೂಷಣ್, ಶೈಲಶ್ರೀ ಶ್ರೀವತ್ಸ, ಸುಮಂಗಲಾ ರತ್ನಾಕರ್ ಇವರುಗಳು ‘ನೃತ್ಯೋತ್ಸವ’ ಕಾರ್ಯಕ್ರಮ ನೀಡಲಿದ್ದಾರೆ.










