ಸುರತ್ಕಲ್ : ಅವರು ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ) ಮತ್ತು ನಾಗರಿಕ ಸಲಹಾ ಸಮಿತಿ (ರಿ) ಸುರತ್ಕಲ್ ಸಹಯೋಗದಲ್ಲಿ ಆಯೋಜಿಸಿದ ನವರಾತ್ರಿಯ ಪ್ರಯುಕ್ತ ವಿಶೇಷ ಸಂಗೀತ ಕಾರ್ಯಕ್ರಮವು ದಿನಾಂಕ 06 ಅಕ್ಟೋಬರ್ 2024ರಂದು ಸುರತ್ಕಲ್ ಇಲ್ಲಿನ ‘ಅನುಪಲ್ಲವಿ’ಯಲ್ಲಿರುವ ಶ್ರೀ ವಿಶ್ವೇಶತೀರ್ಥ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ನಿಟ್ಟೆ ವಿಶ್ವವಿದ್ಯಾನಿಲಯದ ಮಾನವಿಕ ವಿಭಾಗದ ಪ್ರಭಾರ ಮುಖ್ಯಸ್ಥೆಯಾದ ಡಾ. ಸಾಯಿಗೀತಾ ಮಾತನಾಡಿ “ಸಂಗೀತದ ಮೂಲಕ ದೈವತ್ವದ ಅನುಭೂತಿಯನ್ನು ಪಡೆಯಬಹುದು. ಶಕ್ತಿಸ್ವರೂಣಿಯರ ಆರಾಧನೆಯ ಕಾಲವಾದ ನವರಾತ್ರಿಯ ಆಚರಣೆಯಲ್ಲಿ ಸಂಗೀತವೂ ಮಹತ್ವವನ್ನು ಪಡೆದಿದೆ.” ಎಂದರು.
ಮಣಿ ಕೃಷ್ಣಸ್ವಾಮಿ ಅಕಾಡೆಮಿಯ ಗೌರವಾಧ್ಯಕ್ಷ ಹರಿಕೃಷ್ಣ ಪುನರೂರು ಮಾತನಾಡಿ “ಯುವ ಕಲಾವಿದರು ತಮ್ಮ ಶ್ರದ್ಧೆ ಮತ್ತು ಬದ್ಧತೆಯಿಂದ ಪ್ರತಿಭಾವಂತ ಕಲಾವಿದರಾಗಿ ರೂಪುಗೊಳ್ಳುತ್ತಿದ್ದಾರೆ.” ಎಂದರು.
ವಿದುಷಿ ನಮೃತಾ ಎಸ್. ಚೆನ್ನೈ ಇವರ ಹಾಡುಗಾರಿಕೆ ನಡೆಸಿಕೊಟ್ಟರು. ಇವರಿಗೆ ವಯಲಿನ್‌ನಲ್ಲಿ ಅನನ್ಯ ಪಿ. ಎಸ್. ಮತ್ತು ಮೃದಂಗದಲ್ಲಿ ಅಚಿಂತ್ಯಕೃಷ್ಣ ಪುತ್ತೂರು ಸಹಕರಿಸಿದರು.
ಗೋವಿಂದ ದಾಸ ಕಾಲೇಜು ಸುರತ್ಕಲ್ ಇಲ್ಲಿನ ಪ್ರಾಂಶುಪಾಲರಾದ ಪ್ರೊ. ಪಿ. ಕೃಷ್ಣಮೂರ್ತಿ, ಸಂಗೀತ ಗುರುಗಳಾದ ವಿದುಷಿ ಪ್ರಾರ್ಥನಾ ಸಾಯಿ ನರಸಿಂಹನ್ ಉಪಸ್ಥಿತರಿದ್ದರು. ಮಣಿಕೃಷ್ಣಸ್ವಾಮಿ ಅಕಾಡೆಮಿಯ ಕಾರ್ಯದರ್ಶಿ ಪಿ. ನಿತ್ಯಾನಂದ ರಾವ್ ಸ್ವಾಗತಿಸಿದರು.
Subscribe to Updates
Get the latest creative news from FooBar about art, design and business.
Previous Articleಕರಾವಳಿಯ ಕೃತಿಗಳಿಗೆ ರಾಷ್ಟ್ರ ಪ್ರಶಸ್ತಿ
Next Article ಯಕ್ಷಾಂಗಣ ಟ್ರಸ್ಟ್ ಸಂಸ್ಥೆಯಿಂದ “ಜಾಂಬವತಿ ಕಲ್ಯಾಣ” ಯಕ್ಷಗಾನ
Related Posts
Comments are closed.