ಉಡುಪಿ : ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿಯ ವತಿಯಿಂದ ಶ್ರೀ ಶರನ್ನವರಾತ್ರಿ ಮಹೋತ್ಸವದ ಪ್ರಯುಕ್ತ ‘ನವಶಕ್ತಿ ವೈಭವ’ – ವೇಷ ಭೂಷಣ ಮತ್ತು ನೃತ್ಯ ರೂಪಕ ಸ್ಪರ್ಧೆಯು ದಿನಾಂಕ 15-10-2023ನೇ ಭಾನುವಾರ ಬೆಳಿಗ್ಗೆ ಘಂಟೆ 09.09ಕ್ಕೆ ದೇವಳದ ನವದುರ್ಗಾ ಮಂಟಪದಲ್ಲಿ ಉದ್ಘಾಟನೆಗೊಳ್ಳಲಿದೆ.
ಸ್ಪರ್ಧೆಯ ನಿಯಮಾವಳಿಗಳು –
* ಭಾಗವಹಿಸುವ ತಂಡದಲ್ಲಿ 9 ಮಂದಿ ಸ್ಪರ್ಧಾಳುಗಳು ಕಡ್ಡಾಯವಾಗಿ ಪಾಲ್ಗೊಳ್ಳುವುದು.
* ನವರಾತ್ರಿ ವೈಭವ ಸಾರುವ ನವ ದುರ್ಗೆಯರ ಪಾತ್ರಗಳಿಗೆ ಮಾತ್ರ ಅವಕಾಶ.
* ತಮಗೆ ಬೇಕಾದ ವೇಷ-ಭೂಷಣ, ಪರಿಕರಗಳನ್ನು ಸ್ಪರ್ಧಾಳುಗಳೇ ತರಬೇಕು.
* ಬೆಂಕಿ ಅಥವಾ ಇನ್ಯಾವುದೇ ಅಪಾಯಕಾರಿ ಪರಿಕರಗಳಿಗೆ ಅವಕಾಶ ಇರುವದಿಲ್ಲ.
* ಭಾಗವಹಿಸುವ ತಂಡಗಳು ತಮ್ಮ ತಂಡದ 9 ಜನರ ಹೆಸರನ್ನು ಮುಂಗಡವಾಗಿ ನೋಂದಾಯಿಸಿಕೊಳ್ಳತಕ್ಕದ್ದು.
* ನವದುರ್ಗಾ ವೈಭವವನ್ನು ಸಾರುವ ವೇಷ-ಭೂಷಣ, ನೃತ್ಯ-ರೂಪಕ ಮತ್ತು ಯಕ್ಷಗಾನ ವೇಷಗಳಿಗೆ ಮಾತ್ರ ಅವಕಾಶ ನೀಡಲಾಗುವುದು.
* ಯಾವುದೇ ಧಾರ್ಮಿಕ ಭಾವನೆ, ವಿಚಾರ ಮತ್ತು ನಂಬಿಕೆಗಳಿಗೆ ಅಪಹಾಸ್ಯ ಮಾಡುವಂತಹ ಚಟುವಟಿಕೆಗಳಿಗೆ ಅವಕಾಶ ಇರುವುದಿಲ್ಲ.
* ಭಾಗವಹಿಸುವ ತಂಡಕ್ಕೆ 8 + 1 ನಿಮಿಷ ಮಾತ್ರ ಅವಕಾಶ.
* ಭಾಗವಹಿಸಿದ ಎಲ್ಲಾ ತಂಡಗಳಿಗೆ ಸ್ಮರಣಿಕೆ ಮತ್ತು ಅಮ್ಮನ ಅನುಗ್ರಹ ಪ್ರಸಾದ ಹಾಗೂ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ತಂಡಗಳಿಗೆ ನಗದು ಬಹುಮಾನವನ್ನು ನೀಡಿ ಗೌರವಿಸಲಾಗುವುದು.
* ಭಾಗವಹಿಸುವ ತಂಡಗಳು ದೇವಳದ ಅಭಿವೃದ್ಧಿ ಸಮಿತಿಯ ಕಛೇರಿಯಲ್ಲಿ ಅಥವಾ ದೂರವಾಣಿ ಮೂಲಕ ಸಂಪರ್ಕಿಸಿ ನೊಂದಾಯಿಸಿಕೊಳ್ಳಬಹುದು.
* ಭಾಗವಹಿಸುವ ತಂಡಗಳು ದಿನಾಂಕ 09-10-2023ರ ಒಳಗಾಗಿ ತಂಡದ ಹೆಸರನ್ನು ನೊಂದಾಯಿಸುವುದು.
* ಸಂಘಟಕರ / ತೀರ್ಪುಗಾರರ ತೀರ್ಮಾನವೇ ಅಂತಿಮ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9481550999