ತುಮಕೂರು : ಶೈನಾ ಅಧ್ಯಯನ ಸಂಸ್ಥೆ ತುಮಕೂರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ತುಮಕೂರು ಮತ್ತು ‘ಡಮರುಗ’ ರಂಗ ಸಂಪನ್ಮೂಲ ಕೇಂದ್ರ ಮೆಳೇಹಳ್ಳಿ ಇವರ ಸಹಯೋಗದಲ್ಲಿ ಮೆಳೇಹಳ್ಳಿ ದೇವರಾಜ್ ಇವರ ನಿರ್ದೇಶನದಲ್ಲಿ ‘ನೀಲಾಂಬಿಕೆ’ ನಾಟಕ ಪ್ರದರ್ಶನವನ್ನು ದಿನಾಂಕ 19 ಮಾರ್ಚ್ 2025ರಂದು ಮಧ್ಯಾಹ್ನ 3-00 ಗಂಟೆಗೆ ತುಮಕೂರು ಶ್ರೀರಾಮನಗರ, ಅಮಾನಿಕೆರೆ ಎದುರು, ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ನಾಡೋಜ ಡಾ. ಬರಗೂರು ರಾಮಚಂದ್ರಪ್ಪ ಇವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿರುವರು. ಅಕ್ಷಯ್ ಬಿ.ಎಸ್., ಪಾತಲಿಂಗಯ್ಯ ಡಿ.ಪಿ., ಶಶಿಕುಮಾರ್ ಗೌಡಿಹಳ್ಳಿ, ಶಿವಶಂಕರ್, ಸುಮಿತ್ರ, ನಂದಿತಾ ದಿನೇಶ್ ಭಟ್, ಲಯ ಮೆಳೇಹಳ್ಳಿ, ಚಿನ್ಮಯ, ಯೋಗೀಶ್, ಪ್ರಕಾಶ್ ಮೆಳೇಹಳ್ಳಿ, ಭರತ್ ಚಕ್ರವರ್ತಿ, ಸ್ನೇಹ, ತನುಜ, ರಾಮು ಇವರುಗಳು ರಂಗ ಮೇಲೆ ಅಭಿನಯಿಸಲಿದ್ದಾರೆ.