ಸಾಗರ : ಅಭಿನಯ ಸಾಗರ (ರಿ.) ಸಾಗರ, ರಂಗಮಂಚ (ರಿ.) ಕಾಗೋಡು ಸಾಗರ, ಜೋಷಿ ಫೌಂಡೇಷನ್ ಸಾಗರ ಮತ್ತು ಉದಯ ಕಲಾವಿದರು (ರಿ.) ಸಾಗರ ಇವರ ಸಹಯೋಗದೊಂದಿಗೆ ದಿ. ಎನ್.ಆರ್. ಮಾಸೂರು, ದಿ. ಕಾಗೋಡು ಅಣ್ಣಪ್ಪ ಮತ್ತು ದಿ. ಯೇಸುಪ್ರಕಾಶ್ ಇವರ ಸ್ಮರಣಾರ್ಥ ‘ನೆನಪಿನ ರಂಗಸಂಭ್ರಮ ನಾಟಕೋತ್ಸವ’ವನ್ನು ದಿನಾಂಕ 21 ಅಕ್ಟೋಬರ್ 2024ರಿಂದ 27 ಅಕ್ಟೋಬರ್ 2024ರವರೆಗೆ ಪ್ರತಿದಿನ ಸಂಜೆ 5-30 ಗಂಟೆಗೆ ಸಾಗರದ ಕಾಗೋಡು ತಿಮ್ಮಪ್ಪ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ನಾಟಕ ಪ್ರದರ್ಶನ, ಪುಸ್ತಕ ಬಿಡುಗಡೆ ಮತ್ತು ರಂಗ ಸನ್ಮಾನಗಳು ನಡೆಯಲಿವೆ.
ದಿನಾಂಕ 21 ಅಕ್ಟೋಬರ್ 2024ರಂದು ಸಾಗರದ ಉದಯ ಕಲಾವಿದರು ಪ್ರಸ್ತುತ ಪಡಿಸುವ ‘ಗ್ಲಾನಿ’, ದಿನಾಂಕ 22 ಅಕ್ಟೋಬರ್ 2024ರಂದು ಶ್ರೀ ಜಂಬೇಶ್ವರ ಕಲಾ ಬಳಗ ಟ್ರಸ್ಟ್ ಇವರಿಂದ ‘ಅತ್ತೆಗೊಂದು ಕಾಲ ಸೊಸೆಗೊಂದು ಕಾಲ’, ದಿನಾಂಕ 23 ಅಕ್ಟೋಬರ್ 2024ರಂದು ಕಿನ್ನರ ಮೇಳ ತುಮರಿಯವರಿಂದ ‘ಇರುವೆ ಪುರಾಣ’, ದಿನಾಂಕ 24 ಅಕ್ಟೋಬರ್ 2024ರಂದು ಸಾಗರ ಸಾಂಸ್ಕೃತಿಕ ಸೌರಭದವರಿಂದ ‘ಹಡೆದ ಕೊಡಲಿಗಳು’, ದಿನಾಂಕ 25 ಅಕ್ಟೋಬರ್ 2024ರಂದು ಶಿವಮೊಗ್ಗದ ಅಭಿನಯ (ರಿ.) ಇವರಿಂದ ‘ಪೀಠಾರೋಹಣ’, ದಿನಾಂಕ 26 ಅಕ್ಟೋಬರ್ 2024ರಂದು ಬೆಂಗಳೂರಿನ ಸೈಡ್ ವಿಂಗ್ ಪ್ರಸ್ತುತ ಪಡಿಸುವ ‘ಸಡನ್ನಾಗ್ ಸತ್ಹೋದ್ರೆ’ ಮತ್ತು ದಿನಾಂಕ 27 ಅಕ್ಟೋಬರ್ 2024ರಂದು ಮುಂಬಯಿಯ ಕನ್ನಡ ಕಲಾ ಕೇಂದ್ರದವರಿಂದ ‘ಬಿಸಿಲು ಬೆಳದಿಂಗಳು’ ನಾಟಕ ಪ್ರದರ್ಶನ ನಡೆಯಲಿದೆ.