ಲಕ್ಷ್ಮೇಶ್ವರ : ಕಲಾ ವೈಭವ ಸಾಂಸ್ಕೃತಿಕ ವಿವಿದೋದ್ದೇಶ ಸಂಸ್ಥೆಯ ನೂತನ ಶಾಖೆಯ ಉದ್ಘಾಟನಾ ಸಮಾರಂಭವು ದಿನಾಂಕ 18-11-2023ರ ಶನಿವಾರದಂದು ಈಶ್ವರೀಯ ವಿದ್ಯಾಲಯ, ದೇಸಾಯಿವಾಡೆ, ಲಕ್ಷ್ಮೇಶ್ವರದಲ್ಲಿ ನಡೆಯಿತು.
ಲಕ್ಷ್ಮೇಶ್ವರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಈಶ್ವರ ಎಸ್ ಮೆಡ್ಲೇರಿ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಗದಗದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ವೀರಯ್ಯ ಸ್ವಾಮಿ ಹಿರೇಮಠ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಯುವ ಭರತನಾಟ್ಯ ವಿದ್ವಾಂಸರಾದ ವಿದ್ವಾನ್ ಮಂಜುನಾಥ ಎನ್ ಪುತ್ತೂರು, ಸೋಮೇಶ್ವರ ದೇಗುಲದ ಟ್ರಸ್ಟಿ ಮತ್ತು ಸಮಿತಿಯ ಅಧ್ಯಕ್ಷರಾದ ಶ್ರೀ ಚಂಬಣ್ಣ ಬಾಳಿಕಾಯಿ, ಶ್ರೀಮತಿ ರತ್ನ ಎಸ್ ಕರ್ಕಿ, ಶ್ರೀಮತಿ ಪ್ರತಿಮಾ ಮಹಜನ ಶೆಟ್ಟರ್, ದೇಗುಲದ ಕಾರ್ಯದರ್ಶಿಗಳಾದ ಶ್ರೀ ಸುರೇಶ ರಾಚನಾಯಕ ಮತ್ತು ಈಶ್ವರೀಯ ವಿದ್ಯಾಲಯದ ನಾಗಲಾಂಬಿಕ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಸಂಸ್ಥೆಯ ನಿರ್ದೇಶಕಿಯಾಗಿರುವ ಯುವ ಭರತನಾಟ್ಯ ಕಲಾವಿದೆ ಕು.ಭವ್ಯ.ಎಸ್ ಕತ್ತಿ, ಸಂಸ್ಥೆಯ ಕಾರ್ಯದರ್ಶಿ ಶ್ರೀ ಪ್ರವೀಣ್ ಎಸ್ ಕತ್ತಿ ಮುಂತಾದವರು ಉಪಸ್ಥಿತರಿದ್ದರು.
ಉದ್ಘಾಟನಾ ಸಮಾರಂಭದ ಬಳಿಕ ಸಂಸ್ಥೆಯ ವಿದ್ಯಾರ್ಥಿಗಳಿಂದ ಒಂದು ಗಂಟೆಯ ಕಾಲ ನೃತ್ಯ ಪ್ರದರ್ಶನ ನಡೆಯಿತು.