ಮಂಗಳೂರು : ಮಂಗಳೂರಿನ ಉರ್ವ ಹೊಯಿಗೆಬೈಲ್ ಬಳಿಯ ಶ್ರೀ ಚಾಮುಂಡೇಶ್ವರೀ ಕ್ಷೇತ್ರದ ವತಿಯಿಂದ ನಡೆಯುವ ನವರಾತ್ರಿ ಉತ್ಸವದ ಸಂದರ್ಭದಲ್ಲಿ ‘ಶ್ರೀ ಚಾಮುಂಡೇಶ್ವರೀ ಕೃಪಾಪೋಷಿತ ಯಕ್ಷಗಾನ ಮಂಡಳಿ’ ಎಂಬ ನೂತನ ಮೇಳ ಆರಂಭಗೊಳ್ಳಲಿದೆ. ನೂತನ ಮೇಳದ ಉದ್ಘಾಟನೆಯು ದಿನಾಂಕ 22-10-2023ರಂದು ಸಂಜೆ 6.30ಕ್ಕೆ ಶ್ರೀ ಕ್ಷೇತ್ರದಲ್ಲಿ ಜರಗಲಿದೆ. ಉದ್ಘಾಟನಾ ಸಮಾರಂಭದ ಬಳಿಕ ಮೇಳದ ಕಲಾವಿದರಿಂದ ‘ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ ಆಯೋಜಿಸಲಾಗಿದೆ.
ಶ್ರೀ ಚಾಮುಂಡೇಶ್ವರೀ ಯಕ್ಷಗಾನ ಮೇಳ ಆರಂಭವಾದ ಬಗ್ಗೆ :
ಸುಮಾರು 2013ರಲ್ಲಿ ಹರಕೆಗಾಗಿ ಬಂದ ಚೆಂಡೆ ಮತ್ತು ಮದ್ದಳೆಗಳನ್ನು ತಾಳಮದ್ದಳೆಯಲ್ಲಿ ಉಪಯೋಗಿಸಿಕೊಳ್ಳಲಾಯಿತು. ವಾರದಲ್ಲಿ ಒಂದು ದಿನದಂತೆ ಪ್ರತೀ ವಾರ ತಾಳಮದ್ದಳೆಯ ಸೇವೆ ದೇವರಿಗೆ ನಡೆಯುತಿತ್ತು. ಸುಮಾರು 2016ರಲ್ಲಿ ಯಕ್ಷಗಾನ ನಾಟ್ಯ ತರಗತಿ ಆರಂಭವಾಗಿ ಪರಿಸರದ ಮಕ್ಕಳಿಗೆ ಯಕ್ಷಗಾನ ತರಬೇತಿ ನೀಡಲಾಯಿತು. ಶ್ರೀಕೃಷ್ಣ ಲೀಲೆ, ಕಂಸ ವಧೆ, ಮಹಿಷ ಮರ್ಧಿನಿ, ಸುದರ್ಶನ ವಿಜಯ, ಏಕಾದಶಿ ದೇವಿ ಮಹಾತ್ಮೆ ಇವುಗಳ ಯಶಸ್ವೀ ಪ್ರದರ್ಶನ ಹಾಗೂ ಮತ್ತೊಂದು ಬಾರಿ ಹರಕೆ ರೂಪದಲ್ಲಿ ‘ಸುದರ್ಶನ ವಿಜಯ’ ರಂಗಸ್ಥಳದಲ್ಲಿ ಪ್ರದರ್ಶಿಸಿ ಜನಮೆಚ್ಚುಗೆ ಪಡೆಯಿತು. ಇವು ಈವರೆಗೂ ನಡೆದ ಪ್ರದರ್ಶನಗಳು. ಈ ರೀತಿ ಅಭಿವೃದ್ಧಿ ಹೊಂದಿ ಈಗ ಸ್ವಂತ ರಂಗಸ್ಥಳದ ವ್ಯವಸ್ಥೆಯೊಂದಿಗೆ ‘ಶ್ರೀ ಚಾಮುಂಡೇಶ್ವರೀ ಕೃಪಾಪೋಷಿತ ಯಕ್ಷಗಾನ ಮಂಡಳಿ’ ಎಂಬ ಹೆಸರಿನಲ್ಲಿ ಯಕ್ಷಗಾನ ಮೇಳ ಆರಂಭವಾಗಲಿದೆ.