ಮಡಿಕೇರಿ : ಸಮರ್ಥ ಕನ್ನಡಿಗರು ಸಂಸ್ಥೆಯ ಕೊಡಗು ಘಟಕದಿಂದ ‘ನಿಮ್ಮ ಪ್ರತಿಭೆ ನಮ್ಮ ವೇದಿಕೆ 2023’ ಕಾರ್ಯಕ್ರಮದಡಿ ಕನ್ನಡ ಹಬ್ಬ, ಸಮರ್ಥ ಕನ್ನಡಿಗರು ಗೌರವಾರ್ಪಣೆ, ಸ್ಪರ್ಧೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ದಿನಾಂಕ 05-11-2023ರಂದು ಬೆಳಗ್ಗೆ 10 ಗಂಟೆಯಿಂದ ನಗರದ ಓಂಕಾರ ಸದನದಲ್ಲಿ ಹಮ್ಮಿಕೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ ಈ ಬಾರಿ ಹತ್ತು ಮಂದಿಗೆ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಈ ಕಾರ್ಯಕ್ರಮವನ್ನು ಹಿರಿಯ ಸಾಹಿತಿ ಕಂಜರ್ಪಣೆ ಬಾಲಸುಬ್ರಹ್ಮಣ್ಯ ಉದ್ಘಾಟಿಸಲಿದ್ದಾರೆ. ಸಮರ್ಥ ಕನ್ನಡಿಗರು ಸಂಸ್ಥೆಯ ಸಂಸ್ಥಾಪಕ ಶ್ರೀ ಲಿಂಗೇಶ್ ಹುಣಸೂರು, ಪ್ರಧಾನ ಸಂಚಾಲಕರಾದ ಶ್ರೀ ಆನಂದ್ ದಗ್ಗನಹಳ್ಳಿ, ಮುಂಬೈನ ಲೇಖಕಿ ಜಯಂತಿ ಸಿ.ರಾವ್, ಸಮರ್ಥ ಕನ್ನಡಿಗರು ಸಂಸ್ಥೆಯ ಕೊಡಗು ಜಿಲ್ಲಾ ಸಂಚಾಲಕಿ ಕೆ.ಜಯಲಕ್ಷ್ಮಿ ಪಾಲ್ಗೊಳ್ಳಲಿದ್ದಾರೆ.
ಬೆಳಿಗ್ಗೆ 10.45 ಘಂಟೆಗೆ ಛದ್ಮವೇಷ, ಸಮೂಹ ಗಾಯನ, ಸಮೂಹ ನೃತ್ಯ, ಚಿತ್ರಕಲೆ ಸ್ಪರ್ಧೆಗಳು, 1.30ಕ್ಕೆ ಪುಸ್ತಕ ಲೋಕಾರ್ಪಣೆ, 2-00 ಘಂಟೆಗೆ ಕವಿತೆ ಓದು ಮತ್ತು 3-00 ಘಂಟೆಗೆ ‘ಸಮರ್ಥ ಕನ್ನಡಿಗರು’ ಪ್ರಶಸ್ತಿ ಪ್ರದಾನ ಹಾಗೂ ವಿವಿಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದೆ.
ಸಮರ್ಥ ಕನ್ನಡಿಗರು ಸಂಸ್ಥೆಯ ಪುರಸ್ಕಾರಕ್ಕೆ ಪಾತ್ರರಾದವರು :
ಡಾ.ಕೆ.ಬಿ.ಸೂರ್ಯಕುಮಾರ್ (ವೈದ್ಯಕೀಯ)
ಶ್ರೀಮತಿ ಕುಂತಿಬೋಪಯ್ಯ (ಶಿಕ್ಷಣ)
ಎಂ.ಎನ್.ಚಂದ್ರ ಮೋಹನ್ (ಪರಿಸರ ಕಾಳಜಿ)
ಎಚ್.ಎಸ್.ತಿಮ್ಮಪ್ಪಯ್ಯ (ಕೃಷಿ ಕ್ಷೇತ್ರ)
ಶ್ರೀಮತಿ ಸ್ಮಿತಾ ಅಮೃತರಾಜ್ (ಸಾಹಿತ್ಯ ಕ್ಷೇತ್ರ)
ಬೊಳ್ಳಜಿರ ಅಯ್ಯಪ್ಪ (ಪ್ರಕಾಶನ)
ಎಚ್.ಎಸ್. ಲಕ್ಷ್ಮೀಶ್ (ಮಾಧ್ಯಮ ಛಾಯಾಗ್ರಹಣ)
ಲಕ್ಷ್ಮೀ ಬೆಂಗಳೂರು (ಸಮಾಜಸೇವೆ)
ಪ್ರೀತಾ ಕೃಷ್ಣ (ನೃತ್ಯ)
ಧೃತಿ ಪೂಜಾರಿ (ಬಾಲ ಪ್ರತಿಭೆ)
ಸ್ಪರ್ಧಾ ವಿಜೇತರು : ಸಮರ್ಥ ಕನ್ನಡಿಗರು ಸಂಸ್ಥೆ ನಡೆಸಿದ ಆನ್‌ಲೈನ್ ವೈಯಕ್ತಿಕ ಗಾಯನ ಸ್ಪರ್ಧೆಯಲ್ಲಿ ಪುಟಾಣಿಗಳ ವಿಭಾಗದಲ್ಲಿ ಭಾಗವಹಿಸಿದ ಆದ್ಯ ವಿ., ಶಾಖ್ಯ ಬಿ., ಚಿರಾಗ್ನಿ, ಮಿನುಗು, ಅಪೇಕ್ಷಾ ಭಾರದ್ವಾಜ್, ಬೌಶ್ವಿಕ್ ದರ್ಶ ಭೋಜಮ್ಮ, ಜನ್ಯ ಡಿ. ಎನ್. ಬಹುಮಾನ ವಿಜೇತರಾಗಿದ್ದಾರೆ. ಒಂದನೇ ವಿಭಾಗದಲ್ಲಿ ಸ್ಕಂದ ಮಧುಕರ್ ಪ್ರಥಮ, ಸುಮೇಧಾ ರಾವ್ ದ್ವಿತೀಯ, ಲೇಖನ ತೃತೀಯ ಸ್ಥಾನ ಪಡೆದಿದ್ದಾರೆ. ಎರಡನೇ ವಿಭಾಗದಲ್ಲಿ ಗೌರಿ ಎಸ್. ಕಾಂಚನ್ ಉಡುಪಿ ಪ್ರಥಮ, ಸಪ್ನಾ ಮಧುಕರ್ ದ್ವಿತೀಯ, ಅನೂಷ ವಿರಾಜಪೇಟೆ ಹಾಗೂ ಬಾಳೆಯಡ ಬಿಷನ್ ಬಿದ್ದಪ್ಪ ತೃತೀಯ ಸ್ಥಾನ ಪಡೆದಿದ್ದಾರೆ. ಮೂರನೇ ವಿಭಾಗದಲ್ಲಿ ವಿ.ಟಿ. ಶ್ರೀನಿವಾಸ್ ಗೋಣಿಕೊಪ್ಪ ಪ್ರಥಮ, ಅರ್ಪಿತಾ ಎಸ್. ಭಟ್ ಬೆಂಗಳೂರು ದ್ವಿತೀಯ, ವಿದ್ಯಾ ಜಗದೀಶ್ ಕಿರುಗೂರು ಮತ್ತು ತನ್ವಿತಾ ಶೆಟ್ಟಿ ಸೋಮವಾರಪೇಟೆ ತೃತೀಯ ಬಹುಮಾನ ಗಳಿಸಿದ್ದಾರೆ.
ನೃತ್ಯ ಸ್ಪರ್ಧೆ ಒಂದನೇ ವಿಭಾಗದಲ್ಲಿ ಭವಿಷ್ಯ ಎಂ.ಆರ್. ಮದೆ ಪ್ರಥಮ, ಹಂಸಿಕಾ ಎನ್.ಜೆ. ಮಡಿಕೇರಿ ದ್ವಿತೀಯ, ನಯನ ಮಡಿಕೇರಿ ತೃತೀಯ. ಎರಡನೇ ವಿಭಾಗದಲ್ಲಿ – ಸುಮೇಧಾ ರಾವ್ ಪ್ರಥಮ, ನಿಹಾರಿಕ ಜ್ಞಾನ ಜ್ಯೋತಿ ದ್ವಿತೀಯ, ಕೀರ್ತನ ತೃತೀಯ ಬಹುಮಾನ ಗಳಿಸಿದ್ದಾರೆ. ಮೂರನೇ ವಿಭಾಗದಲ್ಲಿ – ಅನುಕ್ತಾ ಕೆ. ಮಂಗಳೂರು ಪ್ರಥಮ, ಭೂಮಿಕಾ ಯು.ಆರ್. ಭಟ್ ದ್ವಿತೀಯ, ದುಂಧುಭಿ ತೃತೀಯ ಬಹುಮಾನ ಗಳಿಸಿದ್ದಾರೆ.